ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತಿ ಸಲ್ಮಾನ್ ರಶ್ದಿ ತಲೆಗೆ $500,000 ಬೆಲೆ

By Mahesh
|
Google Oneindia Kannada News

Salaman Rushdie
ಟೆಹ್ರಾನ್, ಸೆ.17: ಇಸ್ಲಾಂ ವಿರೋಧಿ ಚಲನಚಿತ್ರದ ವಿರುದ್ಧ ದಂಗೆ, ಪ್ರತಿಭಟನೆ, ಹಿಂಸಾಚಾರಗಳು ಮುಂದುವರೆದಿರುವ ಬೆನ್ನಲ್ಲೇ ವಿವಾದಿತ ಲೇಖಕ ಸಲ್ಮಾನ್ ರಶ್ದಿ ಅವರ ತಲೆಗೆ ಇರಾನ್ ಪ್ರತಿಷ್ಠಾನ ಬೆಲೆ ಕಟ್ಟಿದೆ. ರಶ್ದಿ ಹತ್ಯೆಗೈದವರಿಗೆ ಬರೋಬ್ಬರಿ $500,000 ಮೊತ್ತ ಸಿಗಲಿದೆ.

ಸಲ್ಮಾನ್ ರಶ್ದಿ ಅವರ ವಿವಾದಿತ ಪುಸ್ತಕ 'The Satanic Verses' ಈಗ ಎಲ್ಲರ ಕೆಂಗಣ್ಣಿಗೆ ಮತ್ತೊಮ್ಮೆ ಗುರಿಯಾಗಿದೆ. ಈ ವೇಳೆಗೆ ರಶ್ದಿ ಹತ್ಯೆಯಾಗಿದ್ದರೆ ಈಗ ಈ ಕಿರುಚಿತ್ರ ನಿರ್ಮಾಣವಾಗುತ್ತಲೇ ಇರಲಿಲ್ಲ. ಇರಾನ್ ಪ್ರತಿಷ್ಠಾನದ ಮುಖ್ಯಸ್ಥ ಹಸನ್ ಸನೇಯ್ ಹೇಳಿದ್ದಾರೆ.

ಭಾರತ ಮೂಲದ ಬ್ರಿಟಿಷ್ ಲೇಖಕ ರಶ್ದಿ ಹತ್ಯೆ ಮೊತ್ತವನ್ನು 3.3 ಮಿಲಿಯನ್ ಡಾಲರ್ ಹೆಚ್ಚಿಸಲಾಗಿದೆ. 1989ರಲ್ಲಿ ಪ್ರವಾದಿ ಮಹಮ್ಮದ್ ಹಾಗೂ ಇಸ್ಲಾಂ ವಿರುದ್ಧ ಅವಹೇಳನಕಾರಿ ಲೇಖನಗಳನ್ನು ಬರೆದ ಆರೋಪದ ಮೇಲೆ ರಶ್ದಿ ಮೇಲೆ ಫತ್ವಾ ಹೊರೆಡಿಸಲಾಗಿತ್ತು. ಇರಾನ್ ಧಾರ್ಮಿಕ ಮುಖಂದ ಅಯಾತೊಲ್ಲ ರುಹೊಲ್ಲಾ ಖೊಮೆನಿ ಅವರು ಫತ್ವಾ ಹೊರೆಡಿಸಿದ ಮೇಲೆ ರಶ್ದಿ ಹಲವು ದೇಶಗಳಲ್ಲಿ ತಲೆಮರೆಸಿಕೊಂಡು ಜೀವಿಸುತ್ತಿದ್ದಾರೆ.

ನಾಪತ್ತೆಯಾಗಿರುವ ಅಮೆರಿಕದ ನಿರ್ದೇಶಕ ತೆಗೆದಿರುವ ವಿವಾದಿತ ಇಸ್ಲಾಂ ವಿರೋಧಿ ಚಿತ್ರದ ಬಗ್ಗೆ ವ್ಯಾಪಕ ಟೀಕೆ, ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭ ರಶ್ದಿ ಹತ್ಯೆ ಮಾಡಲು ಸಕಾಲವಾಗಿದೆ ಎಂದು ಇರಾನ್ ಪ್ರತಿಷ್ಠಾನ ಹೇಳಿಕೊಂಡಿದೆ.

1998ರಲ್ಲಿ ಫತ್ವಾವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಬ್ರಿಟಿಷ್ ಸರ್ಕಾರಕ್ಕೆ ಇರಾನ್ ವಿದೇಶಾಂಗ ಸಚಿವಾಲಯ ಭರವಸೆ ನೀಡಿತ್ತು. ಆದರೆ, ಇಸ್ಲಾಂ ವಿರೋಧಿ ರಶ್ದಿ ಹತ್ಯೆಗೈಯುವುದರಲ್ಲಿ ತಪ್ಪೇನಿಲ್ಲ ಎಂದು ಧಾರ್ಮಿಕ ಮುಖಂಡ ಅಯಾತೊಲ್ಲ ರುಹೊಲ್ಲಾ ಖೊಮೆನಿ ಹೇಳಿದ್ದರಿಂದ ಫತ್ವಾ ಹಾಗೆ ಮುಂದುವರೆದಿದೆ.

1988ರಲ್ಲಿ ರಶ್ದಿ ಬರೆದ ದಿ ಸತಾನಿಕ್ ವರ್ಸಸ್ ಕೃತಿಯನ್ನು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಿಷೇಧಿಸಲಾಗಿದೆ. ರಶ್ದಿ ಅವರ ಸತಾನಿಕ್ ವರ್ಸರ್ ಸಾಲುಗಳನ್ನು ಓದಿದ ನಾಲ್ವರು ಸಾಹಿತಿಗಳ ಮೇಲೂ ಪೊಲೀಸರು ದೂರು ದಾಖಲಿಸಿಕೊಂಡ ಪ್ರಕರಣಗಳು ನಡೆದಿದೆ.

ಕಳೆದ ಜನವರಿಯಲ್ಲಿ ನಡೆದ ಜೈಪುರದ ಅಂತಾರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನ ಪಡೆದಿದ್ದ ರಶ್ದಿ ಅವರಿಗೆ ಇಸ್ಲಾಂ ಧಾರ್ಮಿಕ ಮುಖಂಡರಲ್ಲದೆ, ಭೂಗತ ಜಗತ್ತಿನಿಂದಲೂ ಜೀವ ಬೆದರಿಕೆ ಬಂದಿತ್ತು.

ಕೊನೆಗೆ ಉಪಾಯ ಮಾಡಿ ವಿಡಿಯೋ ಮೂಲಕ ಸಾಹಿತ್ಯ ಉತ್ಸವದಲ್ಲಿ ಕಾಣಿಸಿಕೊಳ್ಳಲು ರಶ್ದಿ ಬಯಸಿದ್ದರು. ಆದರೆ, ಈ ಮಧ್ಯೆ 'ರಾಜಸ್ಥಾನ ಪೊಲೀಸರು ವಿನಾಕರಣ ಸಾಹಿತ್ಯೋತ್ಸವದಿಂದ ನನ್ನನ್ನು ದೂರ ಇರಿಸಲು ಯತ್ನಿಸಿದ್ದಾರೆ' ಎಂದು ರಶ್ದಿ ವಿವಾದಿತ ಹೇಳಿಕೆ ನೀಡಿ ಪೊಲೀಸರ ಕೆಂಗಣ್ಣಿಗೆ ಗುರಿಯಾದರು. ಕೊನೆಗೆ ವಿಡಿಯೋ ಮೂಲಕವಾಗಲಿ, ಪ್ರತ್ಯಕ್ಷವಾಗಲಿ ರಶ್ದಿ ಅವರ ಭಾಷಣ ಪ್ರಸಾರಕ್ಕೆ ನಿರ್ಬಂಧ ಹೇರಲಾಯಿತು.

English summary
Noted Indian writer Salman Rushdie and his controversial book ‘The Satanic Verses' especially at a time when the anti-Islam wave is causing anger among the Muslim community. An Iranian foundation has raised the ante against Rushdie by increasing the bounty for his death
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X