• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಶ್ಲೀಲ ಸಂದೇಶ, ಬ್ಲೂ ಫಿಲಂಗೆ 3 ವರ್ಷ ಜೈಲೋ ಜೈಲು

By Sadhu
|

ನವದೆಹಲಿ, ಸೆ.17: ನಿಮಗೇನಾದರೂ ಅಶ್ಲೀಲ ಎಸ್ಎಂಎಎಸ್ ಕಳುಹಿಸುವ ಚಾಳಿಯಿದೆಯೋ!? ಇದ್ದರೆ ಮೊದಲು ಅಂತಹ ಚಾಳಿಯನ್ನು ಬಿಟ್ಟುಬಿಡಿ. ಇನ್ನು ಮಹಿಳೆಯರ ಅಶ್ಲೀಲ ಚಿತ್ರಗಳು ಹಾಗೂ ರಾಸಲೀಲೆಯ ತುಣುಕುಗಳನ್ನು ನೋಡಿ, ಸ್ನೇಹಿತರ ಬಳಗಕ್ಕೆಲ್ಲಾ ಎಂಎಂಎಸ್‌ ಕಳುಹಿಸುವ ಪರಿಪಾಠವಿಟ್ಟುಕೊಂಡಿದ್ದರೆ ಮುಗಿಯಿತು ಕಥೆ.

ಏಕೆಂದರೆ ನೀವು ಕಳಿಸುವ ಇಂತಹ ಪೋಲಿ ಪೋಲಿ ಸಂದೇಶಗಳು ನಿಮ್ಮನ್ನು ಸೀದಾ ಜೈಲಿನವರೆಗೂ ಕರೆದೊಯ್ಯುತ್ತದೆ. ಅಲ್ಲಿ ಸುಖಾಸುಮ್ಮನೆ ಮೂರು ವರ್ಷ ಕಾಲ ಜೈಲೋ ಜೈಲು. ಜತೆಗೆ 1 ಲಕ್ಷ ರೂ. ದಂಡವನ್ನೂ ಕಕ್ಕಬೇಕಾಗುತ್ತದೆ, ಹುಷಾರು!

ಇಷ್ಟೊಂದು ಖಡಕ್ ನಿರ್ಧಾರ ಏಕಪ್ಪಾ ಅಂದರೆ ಇತ್ತೀಚಿನ ದಿನಗಳಲ್ಲಿ sms/mms ಹಾವಳಿ ವಿಪರೀತವಾಗಿದೆ. ಅದರಲ್ಲೂ ಯುವಜನತೆಯ ಪ್ರಾಣಕ್ಕೆ ಇದು ಮಾರಕವಾಗಿದೆ. ಹಾಗಾಗಿ ಕಠಿಣ ಶಿಕ್ಷೆ. ಇನ್ನು ಸುಖಾಸುಮ್ಮನೆ ಸ್ವಗತದಲ್ಲಿ ಮೊಬೈಲಿನಲ್ಲಿ ನೋಡಿಕೊಳ್ಳಬಹುದು, ವಿಧಾನಸೌಧದಲ್ಲಿ ನಮ್ಮ ಬ್ಲೂ ಬಾಯ್ಸ್ ನೋಡಿದ ಹಾಗೆ ಅಂದರೆ ಅದಕ್ಕೂ ಇದೆ ಇದೇ ಶಿಕ್ಷೆ. ಒಟ್ಟಿನಲ್ಲಿ ವಿದ್ಯುನ್ಮಾನ ಮಾಧ್ಯಮದಲ್ಲಿ ಅಶ್ಲೀಲತೆ ಹರಿದಾಡಬಾರದು. ಆ ಬಗ್ಗೆ ದೂರು ಬಂದರೆ, ಅಪರಾಧ ಸಾಬೀತಾದರೆ ಜೈಲೋ ಜೈಲು. ಬಿ ಕೇರ್ ಫುಲ್ಲು.

ಮಹಿಳೆಯರ ಅಶ್ಲೀಲ ಪ್ರದರ್ಶನ (ನಿರ್ಬಂಧ) ಕಾಯ್ದೆ ವ್ಯಾಪ್ತಿಗೆ (Indecent Representation of Women (Prohibition) Act) ವಿದ್ಯುನ್ಮಾನ ಮಾಧ್ಯಮಗಳನ್ನೂ ತರುವ ಸಂಬಂಧ ಕಾನೂನಿಗೆ ತಿದ್ದುಪಡಿ ತರಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಇದನ್ನು ಮುಂದಿನ ವಾರ ಸಚಿವ ಸಂಪುಟದ ಅಂಗೀಕಾರಕ್ಕೆ ಕಳಿಸಲಿದೆ.

ಇಲ್ಲಿವರೆಗೂ ಈ ಕಾಯ್ದೆ ವ್ಯಾಪ್ತಿಗೆ ಮುದ್ರಣ ಮಾಧ್ಯಮವಷ್ಟೇ ಬರುತ್ತಿತ್ತು. ಇದೀಗ ಎಲೆಕ್ಟ್ರಾನಿಕ್‌ ಮಾಧ್ಯಮವನ್ನೂ ಸೇರಿಸುತ್ತಿರುವುದರಿಂದ ಮೊಬೈಲ್‌ ಫೋನ್‌, ಇಂಟರ್ನೆಟ್‌ ಹಾಗೂ ವಿದ್ಯುನ್ಮಾನ ಮಾಧ್ಯಮಗಳೂ ಕಾಯ್ದೆಯ ಪರಿಧಿಗೆ ಸೇರಲಿವೆ.

ಈ ತಿದ್ದುಪಡಿಯನ್ನು ಸೇರಿಸುವುದರ ಜತೆಯಲ್ಲೇ ಶಿಕ್ಷೆ ಹಾಗೂ ದಂಡದ ಪ್ರಮಾಣವನ್ನೂ ಇಲಾಖೆ ಹೆಚ್ಚಿಸಲು ಉದ್ದೇಶಿಸಿದೆ. ಆದ್ದರಿಂದ, ಮಹಿಳೆಯರ ಅಶ್ಲೀಲ ಚಿತ್ರಗಳು, ದೃಶ್ಯಗಳನ್ನು ದುರ್ಬಳಕೆ ಮಾಡಿಕೊಂಡು ಇತರರಿಗೆ ರವಾನಿಸುತ್ತಿರುವವರಿಗೆ ವಿಧಿಸಲಾಗುತ್ತಿದ್ದ 2 ವರ್ಷಗಳ ಶಿಕ್ಷೆಯನ್ನು 3 ವರ್ಷಗಳಿಗೆ ಹೆಚ್ಚಿಸಲಾಗಿದೆ. 2 ಸಾವಿರ ರೂ. ಇದ್ದ ದಂಡದ ಮೊತ್ತವನ್ನು 50 ಸಾವಿರ ರೂ. ನಿಂದ 1 ಲಕ್ಷ ರೂ.ಗೆ ಏರಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Obscene MMS SMS to land you in 3 years jail term. The Ministry of Women and Child Development has proposed to include electronic content within the ambit of the Indecent Representation of Women (Prohibition) Act. As such Circulation of an obscene SMS/MMS clip of a woman will land the sender and those sharing the content in jail for up to 3 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more