• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರಿಟನ್ನಿನ ರಾಯಲ್ ಸೊಸೆ ಮಾನ ಹರಾಜು

By Mahesh
|

ಲಂಡನ್, ಸೆ.16: ಬ್ರಿಟನ್ ರಾಜಕುಮಾರ ಹ್ಯಾರಿ ನಗ್ನ ಚಿತ್ರ ಹಗರಣ, ತಾಲಿಬಾನಿ ಉಗ್ರರ ಹತ್ಯೆ ಬೆದರಿಕೆ ನಡುವೆ ಮತ್ತೊಂದು ಸಮಸ್ಯೆ, ಮುಜುಗರವನ್ನು ಬ್ರಿಟನ್ನಿನ ರಾಜಮನೆತನ ಅನುಭವಿಸುತ್ತಿದೆ.

ರಾಜಕುಮಾರ ವಿಲಿಯಮ್ಸ್ ಪತ್ನಿ ಕ್ಯಾಥರೀನ್ ಕೇಟ್ ಅವರ ತೆರೆದ ಎದೆ ಚಿತ್ರವನ್ನು ಫ್ರಾನ್ಸಿನ 'ಕ್ಲೋಸರ್' ನಿಯತಕಾಲಿಕೆ, ಇಟಲಿ, ಐರ್ಲೆಂಡ್ ನ ಪತ್ರಿಕೆಗಳು ಪ್ರಕಟಿಸಿದೆ.

ಫ್ರಾನ್ಸ್‌ನ ಚಾಟಿಯೂ ಪ್ರಾಂತ್ಯದ ಹೋಟೆಲೊಂದರ ಈಜುಕೊಳದಲ್ಲಿ ಕಳೆದ ವಾರ ಕ್ಯಾಥರೀನ್ ತಮ್ಮ ಪತಿಯೊಂದಿಗೆ ಅರೆ ನಗ್ನಾವಸ್ಥೆಯಲ್ಲಿ ಸೂರ್ಯ ಸ್ನಾನ (ಸನ್ ಬಾತ್) ಮಾಡುತ್ತಿದ್ದ ಸಂದರ್ಭದಲ್ಲಿ ಈ ಚಿತ್ರಗಳನ್ನು ಸೆರೆಹಿಡಿಯಲಾಗಿದೆ.

'ಕ್ಲೋಸರ್', ಈ ಚಿತ್ರಗಳನ್ನು ತನ್ನ ಮುದ್ರಣ ಹಾಗೂ ಆನ್‌ಲೈನ್ ಆವೃತ್ತಿಗಳೆರಡಲ್ಲೂ ಪ್ರಕಟಿಸಿದೆ. ತನ್ನ ಮುಖಪುಟದಲ್ಲಿ ಈ ಚಿತ್ರಗಳನ್ನು ಪ್ರಕಟಿಸಿರುವ 'ಕ್ಲೋಸರ್', ಅದಕ್ಕೆ 'ಓ ಮೈ ಗಾಡ್' ಎಂಬ ತಲೆ ಬರಹ ನೀಡಿದೆ.

ಮಾನ ಕಾಯ್ದ ಬ್ರಿಟಿಷ್ ಮಾಧ್ಯಮ: ಗಾಸಿಪ್ ಸುದ್ದಿಗಳು, ವಿವಾದಿತ ಸುದ್ದಿಗಳನ್ನು ಮೊಟ್ಟ ಮೊದಲಿಗೆ ಹೊರ ತರುವುದರನ್ನು ಎತ್ತಿದ ಕೈ ಎನಿಸಿರುವ ಬ್ರಿಟಿಷ್ ಮಾಧ್ಯಮಗಳು ಮಾತ್ರ ಕೇಟ್ ನಗ್ನ ಚಿತ್ರ ಪ್ರಕಟಿವಿಲಿಯಮ್ಸ ಪತ್ನಿ ಕೇಟ್ ಅವರ ಅರೆನಗ್ನ ಚಿತ್ರ ಪ್ರಕಟಿಸಲು ಹಿಂದೇಟು ಹಾಕಿವೆ.

ರಾಜಕುಮಾರಿ ಡಯಾನ ಸಾವಿನ ನಂತರ ಮಾಧ್ಯಮದ ಮೇಲೆ ಕೇಳಿ ಬಂದ ದೋಷಾರೋಪ ಮತ್ತು ಮಾಧ್ಯಮ ನೈತಿಕತೆಯ ತನಿಖೆಗೆ ಹೆದರಿ ಮಾಧ್ಯಮಗಳು ಈ ಚಿತ್ರವನ್ನು ಪ್ರಕಟಿಸಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಕಳೆದ ತಿಂಗಳು ಸುದ್ದಿ ಮಾಡಿದ್ದ ಹ್ಯಾರಿ ನಗ್ನ ಚಿತ್ರವನ್ನು ಮರ್ಡೋಕ್ ಮಾಲೀಕತ್ವದ 'ದಿ ಸನ್' ಮಾತ್ರ ಪ್ರಕಟಿಸಿತ್ತು. ಸಾರ್ವಜನಿಕ ಹಿತಾಸಕ್ತಿಯ ಉದ್ದೇಶದಿಂದ ಹ್ಯಾರಿ ಚಿತ್ರವನ್ನು ಪ್ರಕಟಿಸಲಾಗಿತ್ತು ಎಂದು ಅದು ಹೇಳಿತ್ತು.

ಆದರೆ ಈ ಬಾರಿ, ಕೇಟ್ ಅರೆ ನಗ್ನ ಚಿತ್ರವನ್ನು ತಾನು ಪ್ರಕಟಿಸುವುದಿಲ್ಲ ಎಂದು 'ದಿ ಸನ್' ಹೇಳಿಕೆ ನೀಡಿ ಅಚ್ಚರಿ ಮೂಡಿಸಿತ್ತು.

'ರಾಜ ದಂಪತಿಯ ಖಾಸಗಿತನವನ್ನು ಉಲ್ಲಂಘಿಸುವ ಉದ್ದೇಶ ನಮಗಿಲ್ಲ' ಎಂದು 'ದಿ ಸನ್' ಸಂಪಾದಕ ಡೊಮಿನಿಕ್ ಮೋಹನ್ ಹೇಳಿದ್ದರು.

ಪ್ಯಾರೀಸ್ ನ ಪಪರಜ್ಜಿಗಳ ಭೀತಿಯಿಂದ ತಪ್ಪಿಕೊಳ್ಳಲು ಯತ್ನಿಸಿದ ಲೇಡಿ ಡಯಾನಾ ಅವರು ಪ್ಯಾರೀಸ್ ನಲ್ಲಿ 1997ರಲ್ಲಿ ಅಪಘಾತಕ್ಕೀಡಾಗಿ ದುರಂತ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
When Kate Middleton, the Duchess of Cambridge and her husband Prince William, were enjoying their holidays in south of France recently, probably they would have never thought about their precious private moments be made public through a magazine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more