ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ರಮ ಹಣ ರವಾನೆಯಲ್ಲಿ ಬಿಜೆಪಿ ಸರ್ಕಾರ: ಎಚ್ಡಿಕೆ

By Mahesh
|
Google Oneindia Kannada News

HD Kumaraswamy slams BJP Govt
ಹುಬ್ಬಳ್ಳಿ, ಸೆ.16: ಬಿಜೆಪಿ ಸರ್ಕಾರದಿಂದ ಆರೆಸ್ಸೆಸ್ ಕೇಂದ್ರ ಕಚೇರಿಗೆ ನಿರಂತರವಾಗಿ ಹಣ ರವಾನೆಯಾಗಿದೆ. ಕೇಶವ ಕೃಪಾಗೆ ಏನಿಲ್ಲವೆಂದರೂ 200 ಕೋಟಿ ರು ಅಕ್ರಮವಾಗಿ ನೀಡಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

ಸಾವಯವ ಕೃಷಿಗೆ ಉತ್ತೇಜನ ನೀಡಲು ಯೋಜನೆಗಳನ್ನು ರೂಪಿಸಿದ ಬಿಜೆಪಿ ಸರ್ಕಾರ, ಅಮೃತ ಭೂಮಿ ಟ್ರಸ್ಟ್ ಗೆ ಸರ್ಕಾರದಿಂದ 200 ಕೋಟಿ ರು ಸಂದಾಯವಾಗಿದೆ. ಕೃಷಿ ಅಭಿವೃದ್ಧಿ ಹೆಸರಿನಲ್ಲಿ ಬಿಜೆಪಿ ಸರ್ಕಾರ ಭಾರಿ ಭೂ ಮಾಫಿಯಾ ಮಾಡಿದೆ.

ರೈತರ ಸಮಸ್ಯೆ ಆಲಿಸಲು ಸೋತಿರುವ ಬಿಜೆಪಿ, ಈಗ ಕಳಪೆ ಬೀಜ ಮಾಫಿಯಾ ಸೃಷ್ಟಿಸಿ ರೈತರನ್ನು ಆತಂಕಕ್ಕೆ ಈಡು ಮಾಡುತ್ತಿದ್ದಾರೆ.

ಉದಾಸಿ ಮೇಲೆ ಕಿಡಿ: ನಾನು ಸಿಎಂ ಆಗಿದ್ದಾಗ ನನ್ನ ಮನೆ ಬಾಗಿಲಿಗೆ ಬಂದಿದ್ದ ಸಿಎಂ ಉದಾಸಿ, ನನಗೆ ಮತ್ತು ನನ್ನ ಮಗನಿಗೆ ಕಾನೂನು ಬಾಹಿರವಾಗಿ ಬೆಂಗಳೂರಿನಲ್ಲೇ ಜಮೀನು, ವಸತಿ ನಿವೇಶನ ಮಂಜೂರು ಮಾಡಿ ಎಂದು ಕೈ ಜೋಡಿಸಿ ಕೇಳಿಕೊಂಡಿದ್ದರು. ಈಗ ನೋಡಿದರೆ ದೇವೇಗೌಡರ ಕುಟುಂಬದ ಬಗ್ಗೆ ಇಲ್ಲಸಲ್ಲದ ಆರೋಪ ಹೊರೆಸುತ್ತಿದ್ದಾರೆ ಎಂದು ಉದಾಸಿ ವಿರುದ್ಧ ಕುಮಾರಸ್ವಾಮಿ ಕಿಡಿ ಕಾರಿದರು.

ಸಾರಿಗೆ ಮುಷ್ಕರ ನಿಲ್ಲಿಸಿದ್ದೇ ನಾನು : ಸಚಿವ ಆರ್ ಅಶೋಕ್ ಅವರಿಗೆ ನಾನು ಬುದ್ಧಿ ಹೇಳಿದ ಮೇಲೆ ಕೆಎಸ್ಸಾರ್ಟಿಸಿ, ಬಿಎಂಟಿಸಿ ಮುಷ್ಕರ ಅಂತ್ಯ ಕಾಣಿಸಲಾಯಿತು. ಸಿಎಂ ಜಗದೀಶ್ ಶೆಟ್ಟರ್ ಮಾತನ್ನು ಡಿಸಿಎಂ ಅಶೋಕ್ ಕೇಳಲಿಲ್ಲ. ನಂತರ ಶೆಟ್ಟರ್ ಅವರು ನನಗೆ ಫೋನ್ ಮಾಡಿ, ಅಶೋಕ್ ಅವರಿಗೆ ಬುದ್ಧಿವಾದ ಹೇಳುವಂತೆ ಕೇಳಿಕೊಂಡರು.

ನಾನು ಅವರ ಕೋರಿಕೆಗೆ ಮನ್ನಿಸಿ ಅಶೋಕ್ ಗೆ ಕರೆ ಮಾಡಿ ನೌಕರರ ಹಿತ ಕಾಯುವಂತೆ ಹೇಳಿದೆ. ಅಶೋಕ್ ಅವರು ತಮ್ಮ ಹಠ ಬಿಡಲು ನನ್ನ ಫೋನ್ ಕರೆ ಕಾರಣ ಎಂದರು.

English summary
HD Kumaraswamy slams BJP Government making illegal money and transfering it to RSS head office. HDK also slams CM Udasi for corruption. HDK also said I called transport minister R Ashok and then KSRTC bus strike called off
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X