ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಮಾ ಎಂಬ ಬ್ರಹ್ಮಾಸ್ತ್ರದ ಒಳಸುಳಿಗಳು ಏನು?

By Srinath
|
Google Oneindia Kannada News

ksrtc-union-strike-essential-services-maintenance-act
ಬೆಂಗಳೂರು, ಸೆ. 14: 'ನಮ್ಮ ಸಂಸಾರಗಳು ಬೀದಿಪಾಲಾಗಬಾರದೆಂದು 16 ವರ್ಷಗಳ ಬಳಿಕ ಮುಷ್ಕರಕ್ಕಾಗಿ ನಾವು ಬೀದಿಗಿಳಿದಿದ್ದೇವೆ' ಎಂದಿರುವ ಕೆಎಸ್ಸಾರ್ಟಿಸಿ ನೌಕರರ ಮೇಲೆ ಎಸ್ಮಾ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸುವುದಾಗಿ ಸಾರಿಗೆ ಸಚಿವ ಆರ್ ಅಶೋಕ್ ಅವರು ಗುಡುಗಿದ್ದಾರೆ. ಹಾಗಾದರೆ ಏನಿದು ಎಸ್ಮಾ ಅಂದರೆ? ಅದರ ಒಳಸುಳಿಗಳು ಏನು?

ಅದಕ್ಕೂ ಮುನ್ನ ಮುಖ್ಯವಾಗಿ ಎಸ್ಮಾ ಅಂದರೆ ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ (Essential Services Maintenance Act -Esma) ಅನುಸಾರ ಸೂಚಿತ ಸೇವೆಗಳಲ್ಲಿ ತೊಡಗಿರುವವರು ಇತರೆ ಇಲಾಖೆಗಳಲ್ಲಿರುವಂತೆ ಇಷ್ಟಾನುಸಾರ ಮುಷ್ಕರಕ್ಕೆ ಇಳಿಯುವಂತಿಲ್ಲ. ಆದರೆ ಇದಕ್ಕೂ ಒಂದು exception ಇದೆ. ಏನಪಾ ಅಂದರೆ 14 ದಿನಕ್ಕೆ ಮುಂಚೆಯೇ ಲಿಖಿತ ನೋಟಿಸ್ ನೀಡಿ ಮುಷ್ಕರ ಮಾಡಬಹುದು.

ಎಸ್ಮಾಸ್ತ್ರ: ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಾರಿಗೆ ವ್ಯವಸ್ಥೆಯೂ ಅಗತ್ಯ ಸೇವೆಯಾಗಿದೆ. ಹಾಗಾಗಿ, ಕೆಎಸ್ಸಾರ್ಟಿಸಿ ನೌಕರರು ಇಷ್ಟಾನುಸಾರ ಮುಷ್ಕರ ಹೂಡುವಂತಿಲ್ಲ. ಆದರೆ 14 ದಿನಕ್ಕಿಂತ ಮುಂಚೆಯೇ ಸಂಬಂಧಪಟ್ಟವರಿಗೆ ಕೆಎಸ್ಸಾರ್ಟಿಸಿ ನೌಕರರು ನೋಟಿಸ್ ನೀಡಿಯಾಗಿದೆ.

ಸೋ, ಕೆಎಸ್ಸಾರ್ಟಿಸಿ ನೌಕರರ ಮುಷ್ಕರದ ಸಮ್ಮುಖದಲ್ಲಿ ಎಸ್ಮಾದತ್ತ ಒಂದು ಕಿರು ನೋಟ:

ಏಸ್ಮಾ ಏನೆಂದರೆ... ಜನಸಾಮಾನ್ಯರಿಗೆ ದೈನಂದಿನ ಜೀವನಕ್ಕೆ ತೊಡಕುಂಟಾಗದಂತೆ ಕೆಲವೊಂದು ಸೇವೆಗಳನ್ನು ಅಗತ್ಯ/ತುರ್ತು ಸೇವೆಗಳೆಂದು ವರ್ಗೀಕರಿಸಲಾಗಿದೆ. ಆ ಸೇವೆಗಳಲ್ಲಿ ತೊಡಗಿರುವ ನೌಕರರು ಕೆಲಸ ಬಿಟ್ಟು ಮುಷ್ಕರಕ್ಕಿಳಿದು ಜನ ಜೀವನ ಏರುಪೇರುಗೊಳಿಸಿದರೆ ಎಸ್ಮಾ ಜಾರಿಗೆ ತರಬಹುದು. ಇದಕ್ಕೆ ಸರಕಾರಕ್ಕೆ ಕಾನೂನಿನ ಬಲವೂ ಇರುತ್ತದೆ. ಭಾರತದಲ್ಲಿ 1968ರಲ್ಲಿ ಇದನ್ನು ಜಾರಿಗೆ ತರಲಾಯಿತು.

ಏಸ್ಮಾ ಪ್ರಕಾರ ಅಗತ್ಯ ಸೇವೆಗಳು ಯಾವುವೆಂದರೆ... ಸಾರ್ವಜನಿಕ ಸಂರಕ್ಷಣೆ, ನೈರ್ಮಲ್ಯ, ನೀರು ಸರಬರಾಜು, ಆಸ್ಪತ್ರೆ ಹಾಗೂ ದೇಶದ ರಕ್ಷಣೆಗೆ ಸಂಬಂಧಪಟ್ಟ ಸೇವೆಗಳು. ಪೆಟ್ರೋಲಿಯಂ ಉತ್ಪನ್ನಗಳು, ಕಲ್ಲಿದ್ದಲು, ಉಕ್ಕು ಮತ್ತು ರಸಗೊಬ್ಬರಗಳ ತಯಾರಿಕೆ, ಸರಬರಾಜು ಮತ್ತು ವಿತರಣೆಯಲ್ಲಿ ತೊಡಗಿರುವ ಸರಕಾರಿ ಸಂಸ್ಥೆಗಳು, ದೂರ ಸಂಪರ್ಕ ಮತ್ತು ಸಾರಿಗೆ ಸೇವೆ, ಆಹಾರ ಸಾಮಗ್ರಿ ಖರೀದಿ/ವಿತರಣೆ ವ್ಯವಸ್ಥೆಯಡಿ ಬರುವ ಸೇವೆಗಳು.

ಹಾಗಾದರೆ ಮುಷ್ಕರ ನಡೆಸಲೇಬಾರದ... ಮುಷ್ಕರವೆಂಬುದು ಮೂಲಭೂತ ಹಕ್ಕು. ಆದರೆ ಮೇಲಿನ ಸೇವೆಗಳಡಿ ಬರುವ ನೌಕರರು ಅಗತ್ಯವಾಗಿ ಮುಷ್ಕರ ನಡೆಸುವಂತಿಲ್ಲ. ಇದರ ಹೊರತಾಗಿಯೂ ಈ ನೌಕರರು ಮುಷ್ಕರದಲ್ಲಿ ತೊಡಗಿದರೆ ಸರಕಾರ ತನ್ನ ವಿಶೇಷ ಅಧಿಕಾರ ಬಳಸಿ ಎಸ್ಮಾಸ್ತ್ರ ಘೋಷಿಸಿದರೆ ಅಂತಹ ಮುಷ್ಕರಕ್ಕೆ ಕಾನೂನು ಮಾನ್ಯತೆ ಇರುವುದಿಲ್ಲ.

ಎಸ್ಮಾಸ್ತ್ರಕ್ಕೆ ಬಗ್ಗದ ನೌಕರರ ಮೇಲೆ ಏನು ಕ್ರಮ ಕೈಗೊಳ್ಳಬಹುದೆಂದರೆ... ಮುಷ್ಕರದಲ್ಲಿ ತೊಡಗಿದ ಅಥವಾ ಮುಷ್ಕರಕ್ಕೆ ಪ್ರಚೋದನೆ ನೀಡಿದ ಯಾವುದೇ ನೌಕರನನ್ನು ಸೀದಾ ಕೆಲಸದಿಂದ ತೆಗೆದುಹಾಕಬಹುದು. ನಂತರ, ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು. ಜೈಲುವಾಸವೂ ಆಗಬಹುದು.

English summary
KSRTC workers union strike enters 2nd day today (Sept 14) as talks between striking KSRTC workers union and govt failed. The govt is all set to enforce ESMA. So what is it all about?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X