ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೌಕರರಿಗೆ ಗಣೇಶ ಹಬ್ಬದ ಗಿಫ್ಟ್ ಘೋಷಣೆ: ಅಶೋಕ್

By Mahesh
|
Google Oneindia Kannada News

R Ashok
ಬೆಂಗಳೂರು, ಸೆ.13: ಸಾರಿಗೆ ನೌಕರರ ಬೇಡಿಕೆಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿದೆ. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಎಲ್ಲಾ ನೌಕರರಿಗೆ ವೇತನ ಹೆಚ್ಚಳದ ಗಿಫ್ಟ್ ನೀಡಲಾಗುವುದು ಎಂದು ಸಾರಿಗೆ ಸಚಿವ ಆರ್ ಅಶೋಕ್ ಘೋಷಿಸಿದ್ದಾರೆ. ಬೆಳಗ್ಗೆಯಿಂದ ನಾಪತ್ತೆಯಾಗಿದ್ದ ಅಶೋಕ್ ಅವರು ಮಧ್ಯಾಹ್ನದ ವೇಳೆಗೆ ಈ ಸುದ್ದಿ ನೀಡಿದ್ದಾರೆ.

4 ರಿಂದ 7 ಸಾವಿರ ರು ವೇತನ ಹೆಚ್ಚಳ ಮಾಡಲಾಗುತ್ತದೆ. ನಗದು ರೂಪದಲ್ಲಿ 2 ಸಾವಿರ ರು ಅರಿಯರ್ಸ್ ನೀಡಲಾಗುವುದು ಎಂದು ವಿಧಾನಸೌಧದಲ್ಲಿ ಹೇಳಿದ್ದಾರೆ. ಸಾರಿಗೆ ಸಂಸ್ಥೆ ಎಂಡಿ ಮಂಜುನಾಥ್ ಪ್ರಸನ್ನ ಅವರು ಬೆಳಗ್ಗೆ ಕೊಟ್ಟ ಹೇಳಿಕೆಯನ್ನೇ ಅಶೋಕ್ ಅವರು ಪುನರುಚ್ಚರಿಸಿದ್ದಾರೆ.

ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ನೌಕರರ ಸಂಘಟನೆ ಮುಖಂಡ ಅನಂತಸುಬ್ಬರಾವ್, ಬರೀ ಬಾಯಿ ಮಾತಿನ ಹೇಳಿಕೆಯಿಂದ ಪ್ರಯೋಜನವಿಲ್ಲ. ಲಿಖಿತ ರೂಪದಲ್ಲಿ ನೌಕರರೊಡನೆ ಒಪ್ಪಂದ ಮಾಡಿಕೊಳ್ಳಬೇಕು. ಇದು ನಿನ್ನೆ ಮೊನ್ನೆಯ ಕತೆಯಲ್ಲ 16 ವರ್ಷದ ಆಕ್ರೋಶ ಹೊರ ಬಿದ್ದಿದೆ.

ಸಾರಿಗೆ ಸಚಿವರು ಮೊದಲಿಗೆ ನೌಕರರ ಸಮಸ್ಯೆ ಆಲಿಸುವುದನ್ನು ಕಲಿಯಲಿ ನಂತರ ಕಾನೂನು ಪಾಲನೆ ಬಗ್ಗೆ ನಮಗೆ ತಿಳಿಸಲಿ ಎಂದು ಹೇಳಿದ್ದಾರೆ.

ವಿಧಾನಸೌಧದಲ್ಲಿ ಕೆಎಸ್ಸಾರ್ಟಿಸಿ ನೌಕರರ ಸಂಘದ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಆದರೆ, ಬಂದ್ ಕರೆ ನೀಡಿರುವ ಪ್ರಮುಖ ನಾಲ್ಕು ನೌಕರರ ಸಂಘದ ಹಿರಿಯ ಅಧಿಕಾರಿಗಳು ಖಾಸಗಿ ಮಾಧ್ಯಮಗಳ ಸ್ಟುಡಿಯೋದಲ್ಲಿರುವಾಗ ಯಾರ ಜೊತೆ ಅಶೋಕ್ ಅವರು ಚರ್ಚೆ ನಡೆಸಿದ್ದಾರೆ ಎಂದು ನೌಕರರು ಪ್ರಶ್ನಿಸಿದ್ದಾರೆ.

ಸಾರಿಗೆ ಸಂಚಾರ ಸುಗಮ: ಕೇವಲ ಶೇ 20 ರಷ್ಟು ಮಾತ್ರ ಬಸ್ ಗಳು ಸಂಚಾರ ನಿಲ್ಲಿಸಿದೆ. ಉಳಿದಂತೆ ಸಂಚಾರ ಸುಗಮವಾಗಿದೆ. ಮುಷ್ಕರ ನಡೆಸುತ್ತಿರುವವರು ಸಂಸ್ಥೆಯ ನೌಕರರೇ ಅಲ್ಲ ಎಂದು ಆರ್ ಅಶೋಕ್ ಅವರು ಸ್ಪಷ್ಟಪಡಿಸಿದ್ದಾರೆ.[ ಲೈವ್ : ಅಲ್ಲಲ್ಲಿ ಒಟ್ಟು 110 ಬಸ್ ಮಾತ್ರ ಸಂಚಾರ]

English summary
KSRTC, BMTC bus bandh: Transport minister R Ashok assures Ganesha Festival Gift to KSRTC workers. Rs 4000 to 7000 salary hike expected with Rs 2000 festival bonus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X