ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶೋಕ್ ಕೊಟ್ಟ ಗಿಫ್ಟ್ ಆಮಿಷ ವಾಪಸ್ : ನೌಕರರು

By Mahesh
|
Google Oneindia Kannada News

Ananth Subbarao
ಬೆಂಗಳೂರು, ಸೆ.13: ನಮ್ಮ ಹೋರಾಟ ಕೇವಲ ಸಂಬಳ ಏರಿಕೆಗಾಗಿ ಅಲ್ಲ. ಇದು ಕೇವಲ ಹಣದ ಪ್ರಶ್ನೆಯಲ್ಲ. ಮಾನವೀಯ ಸಂಬಂಧಗಳು ಹದಗೆಡುತ್ತಿದೆ. ನೌಕರರ ಜೊತೆ ಸಚಿವರು ಯಾವುದೇ ಸಂಬಂಧ ಇಟ್ಟುಕೊಂಡಿಲ್ಲ.

ಏಕಪಕ್ಷೀಯ ನಿರ್ಣಯ ಕೈಗೊಂಡಿದ್ದಾರೆ. ಈ ರೀತಿ ಆಮಿಷ ಒಡ್ಡುತ್ತಿರುವುದು ಕಾನೂನು ಬಾಹಿರ. ಲಕ್ಷಾಂತರ ನೌಕರರ ಬಗ್ಗೆ ನಿರ್ಧಾರಗಳು ಕೈಗೊಳ್ಳುವಾಗ ನೌಕರರ ಸಂಘಟನೆಗಳೊಡನೆ ಮಾತುಕತೆ ನಡೆಸುವ ಕನಿಷ್ಠ ಸೌಜನ್ಯ ಕೂಡಾ ಮಾನ್ಯ ಸಚಿವರಿಗೆ ಇಲ್ಲ ಎಂದು ಅನಂತಸುಬ್ಬರಾವ್ ಹೇಳಿದ್ದಾರೆ.

ಇದಕ್ಕೂ ಮುನ್ನ ಸಾರಿಗೆ ನೌಕರರ ಬೇಡಿಕೆಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿದೆ. 4 ರಿಂದ 7 ಸಾವಿರ ರು ವೇತನ ಹೆಚ್ಚಳ ಮಾಡಲಾಗುತ್ತದೆ. ನಗದು ರೂಪದಲ್ಲಿ 2 ಸಾವಿರ ರು ಅರಿಯರ್ಸ್ ನೀಡಲಾಗುವುದು ಎಂದು ವಿಧಾನಸೌಧದಲ್ಲಿ ಹೇಳಿದ್ದರು.

ಮನಸ್ಸಿಗೆ ಬಂದಂತೆ ಸಿಬ್ಬಂದಿಗಳನ್ನು ವರ್ಗಾವಣೆ ಮಾಡುವುದು ಮೊದಲು ನಿಲ್ಲಬೇಕು. ಕಳೆದ ತಿಂಗಳಿನಲ್ಲಿ ವಾರವೊಂದರಲ್ಲಿ 400 ಸಿಬ್ಬಂದಿಗಳನ್ನು ಏಕಾಏಕಿ ವರ್ಗಾವಣೆ ಮಾಡಲಾಗಿತ್ತು. ಈ ಬಗ್ಗೆ ಯಾರು ಪ್ರಶ್ನಿಸುವ ಅಧಿಕಾರ ಇಲ್ಲದಂತೆ ಮಾಡಲಾಗಿದೆ.

36 ಗಂಟೆಗಳ ಕಾಲ ಕೆಲಸ ಮಾಡುವುದು ಒಪ್ಪಲು ಸಾಧ್ಯವಿಲ್ಲ. ಶೇ 10 ರಿಂದ ಶೇ 35 ರಷ್ಟು ವೇತನ ಹೆಚ್ಚಳ ಬೇಡಿಕೆ ನ್ಯಾಯುಯುತವಾಗಿದ್ದು ಇದಕ್ಕೆ ಸಚಿವರು ಒಪ್ಪಬೇಕು ಹಾಗೂ ಸಂಘಟನೆಗಳೊಂದಿಗೆ ಕೂತು ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು.ಎಸ್ಮಾ(ತುರ್ತು ಸೇವಾ ನಿಯಮ ಕಾಯ್ದೆ 1968) ಜಾರಿಗೊಳಿಸಿ ಒತ್ತಡದಿಂದ ಏನ್ನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ನೌಕರರ ಸಂಘಟನೆ ಮುಖಂಡರು ಹೇಳಿದ್ದಾರೆ. [ಬಂದ್ ಕುರಿತು ಕ್ಷಣ ಕ್ಷಣ ಸುದ್ದಿ ಇಲ್ಲಿ ಓದಿ..]

ವಿಧಾನಸೌಧದಲ್ಲಿ ಕೆಎಸ್ಸಾರ್ಟಿಸಿ ನೌಕರರ ಸಂಘದ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಆದರೆ, ಬಂದ್ ಕರೆ ನೀಡಿರುವ ಪ್ರಮುಖ ನಾಲ್ಕು ನೌಕರರ ಸಂಘದ ಹಿರಿಯ ಅಧಿಕಾರಿಗಳು ಖಾಸಗಿ ಮಾಧ್ಯಮಗಳ ಸ್ಟುಡಿಯೋದಲ್ಲಿರುವಾಗ ಯಾರ ಜೊತೆ ಅಶೋಕ್ ಅವರು ಚರ್ಚೆ ನಡೆಸಿದ್ದಾರೆ ಎಂದು ನೌಕರರು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ ಬಂದ್ ಹಿನ್ನೆಲೆಯಲ್ಲಿ ನಡೆದ ಕಲ್ಲು ತೂರಾಟ, ಗಲಾಟೆಗೆ ಸಂಬಂಧಿಸಿದಂತೆ 2 ಕೆಎಸ್ಸಾರ್ಟಿಸಿ, 1 ಬಿಎಂಟಿಸಿ ಚಾಲಕರನ್ನು ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ಕೇವಲ 3 ಕಡೆ ಮಾತ್ರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸುನಿಲ್ ಕುಮಾರ್ ಹೇಳಿದ್ದಾರೆ.

ಆಟೋರಿಕ್ಷಾಗಳು ಭರ್ಜರಿಯಾಗಿ ಹಣ ಮಾಡುತ್ತಿದೆ. ಜನ ಸಾಮಾನ್ಯರ ಬವಣೆ ಕಂಡು ಕರಗಿದ ಕ.ರಾ.ರ.ಸಾ.ಸಂ ಕೊನೆಗೂ ಮೆಜಿಸ್ಟಿಕ್ ನಿಂದ 15 ವೋಲ್ವೋ ಬಸ್ ಗಳನ್ನು ಹೊರಡಿಸಿದೆ.

English summary
We can't accept Transport minister R Ashok's promise on salary hike, we will continue our strike untill the demands are fulfilled with a written agreement said KSRTC worker union chief Anantha subbarao. He also warned minister Ashok that giving offers like this is illegal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X