ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಇಸ್ಲಾಂ ಕ್ಯಾನ್ಸರ್ ಇದ್ದಂತೆ' ಎಂದ ನಿರ್ದೇಶಕ ನಾಪತ್ತೆ

By Mahesh
|
Google Oneindia Kannada News

Movie attacks Islam's Prophet Muhammad; director absconding
ಲಾಸ್ ಏಂಜಲೀಸ್,ಸೆ.12: ಪ್ರವಾದಿ ಮಹಮ್ಮದ್ ಅವರ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಿರುವ ಚಲನಚಿತ್ರ ವಿರೋಧಿಸಿ ಈಜಿಪ್ಟ್ ಹಾಗೂ ಲಿಬಿಯಾದಲ್ಲಿ ಗಲಭೆ ಆರಂಭಗೊಂಡಿದೆ.

ಇಸ್ಲಾಂ ಧರ್ಮಗುರುಗಳ ಅವಹೇಳನ ಮಾಡಿರುವ ಆರೋಪ ಹೊತ್ತಿರುವ ಚಿತ್ರ ನಿರ್ದೇಶಕ ಸ್ಯಾಮ್ ಬಾಸಿಲ್ ನಾಪತ್ತೆಯಾಗಿದ್ದಾರೆ.

ಲಿಬಿಯಾದ ಬೆಂಗ್ಜಾಜಿ ನಗರದ ಅಮೆರಿಕ ರಾಯಭಾರಿ ಕಚೇರಿಗೆ ಮುತ್ತಿಗೆ ಹಾಕಲಾಗಿದೆ. ಅಮೆರಿಕ ಮೂಲದ ಅಧಿಕಾರಿಯೊಬ್ಬರನ್ನು ಹತ್ಯೆಗೈಯಲಾಗಿದ್ದು, ಕಚೇರಿ ಕಡತ, ಸಾಮಾಗ್ರಿಗಳಿಗೆ ಬೆಂಕಿ ಹಚ್ಚಲಾಗಿದೆ.

56 ವರ್ಷದ ಬಾಸಿಲ್ ಚಿತ್ರ ಸಾಹಿತಿ ಹಾಗೂ ನಿರ್ದೇಶಕ ಇಸ್ರೇಲಿ ಯಹೂದಿಯಾಗಿದ್ದು ತನ್ನ ಚಿತ್ರದ ಮೂಲಕ ಇಸ್ಲಾಂ ಧರ್ಮದ ನೂನ್ಯತೆಗಳನ್ನು ಸರಿಪಡಿಸಬಹುದು ಎಂದು ಹೇಳಿಕೆ ನೀಡಿದ್ದಾರೆ. ಅರೇಬಿಕ್ ಗೆ ಇವರ ಹೇಳಿಕೆಗಳು ತರ್ಜುಮೆಗೊಂಡು ಯೂಟ್ಯೂಬ್ ಪ್ರವೇಶಿಸಿತ್ತು.

ಬಾಸಿಲ್ ಹೇಳಿಕೆ ಹಾಗೂ ಚಿತ್ರವನ್ನು ವೀಕ್ಷಿಸಿದ ಮುಸ್ಲಿಮರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. 'ಇಸ್ಲಾಂ ಕ್ಯಾನ್ಸರ್ ಇದ್ದಂತೆ' ಎಂದು ಹೇಳಿಕೆ ನೀಡಿರುವ ಬಾಸಿಲ್ ಗೆ ಯಾರೂ ಆಶ್ರಯ ನೀಡಬಾರದು ಬಾಸಿಲ್ ನಮ್ಮ ವಶಕ್ಕೆ ಒಪ್ಪಿಸಿ ಎಂದು ಆಕ್ರೋಶ ಭರಿತ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಅಜ್ಞಾತ ಸ್ಥಳದಿಂದ ಮಂಗಳವಾರ(ಸೆ.11) ಪ್ರತಿಕ್ರಿಯಿಸಿದ ಬಾಸಿಲ್, ನನ್ನ ಚಿತ್ರದಲ್ಲಿ ಏನು ಹೇಳಿದ್ದೀನೋ ಅದನ್ನೇ ಮತ್ತೊಮ್ಮೆ ಹೇಳುತ್ತೇನೆ. ಇಸ್ಲಾಂ ಕ್ಯಾನ್ಸರ್ ಇದ್ದಂತೆ ನಾನು ಚಿತ್ರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದಿದ್ದಾರೆ.

ಬಾಸಿಲ್ ಅವರು ನಿರ್ದೇಶಿಸಿರುವ ಚಿತ್ರದಲ್ಲಿ ಇಸ್ಲಾಂ ಧರ್ಮ ಗುರು ಪ್ರವಾದಿ ಮಹಮ್ಮದ್ ಅವರು ಶಿಶು ಲೈಂಗಿಕ ಕಿರುಕುಳಕ್ಕೆ ಪ್ರೋತ್ಸಾಹಿಸ ನೀಡುತ್ತಿದ್ದರು ಎಂಬಂತೆ ದೃಶ್ಯಗಳನ್ನು ಚಿತ್ರಿಸಲಾಗಿದೆ.

ಅಮೆರಿಕದ ಅಧಿಕಾರಿ ಸಾವಿಗೆ ದುಃಖ ವ್ಯಕ್ತಪಡಿಸಿರುವ ಯುಎಸ್ ಕಾರ್ಯದರ್ಶಿ ಹಿಲ್ಲರಿ ಕ್ಲಿಂಟನ್, ಜನಾಂಗೀಯ ದ್ವೇಷದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಧರ್ಮಗುರುಗಳ ಬಗ್ಗೆ ಚಿತ್ರಿಸುವಾಗ ಸಾಮಾಜಿಕ ಕಳಕಳಿ ಅಗತ್ಯ. ಗಲಭೆಗೆ ತುತ್ತಾಗಿ ಸಾವನ್ನಪ್ಪಿದ ಅಧಿಕಾರಿ ಕುಟುಂಬಕ್ಕೆ ಶಾಂತಿ, ಸಮಾಧಾನ ಕೋರುತ್ತೇನೆ ಎಂದಿದ್ದಾರೆ.

ಈ ಗಲಭೆ ಇತರೆ ದೇಶಗಳಿಗೂ ಹಬ್ಬುವ ಸೂಚನೆ ಇರುವುದರಿಂದ ಎಲ್ಲೆಡೆ ಅಮೆರಿಕ ರಾಯಭಾರಿ ಕಚೇರಿಗಳಿಗೆ ಹೆಚ್ಚಿನ ಭದ್ರತೆ ನೀಡುವಂತೆ ಆಯಾ ದೇಶಗಳಿಗೆ ಕೋರಲಾಗಿದೆ.

ಈಜಿಪ್ಟ್ ನಲ್ಲಿ ಪ್ರತಿಭಟನೆ ನೇತೃತ್ವ ವಹಿಸಿರುವ ವಾಸಿಂ ಅಬ್ದೆಲ್ ವರೆತ್ ಮಾತನಾಡಿ, ಇದು ಹಳೆ ಚಿತ್ರದಂತೆ ಕಾಣುತ್ತದೆ. ಇತ್ತೀಚೆಗೆ ಟಿವಿಯಲ್ಲಿ ಪ್ರಸಾರವಾದ ಮೇಲೆ ಪ್ರತಿಭಟನೆಗೆ ನಾವು ಮುಂದಾಗಿದ್ದೇವೆ. ಕಳಪೆ ಗುಣಮಟ್ಟದ, ಅವಹೇಳನಕಾರಿ ಚಿತ್ರಗಳ ಸಂಸ್ಕೃತಿಗೆ ಮಾರಕ ಎಂದಿದ್ದಾರೆ.

English summary
Film director Sam Bacile absconded following deadly violence at US Missions in Egypt and Libya. Ruckus started in the countries after the screening of Bacile's movie which criticised Islam's Prophet Muhammed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X