ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

30 ಲಕ್ಷಕ್ಕೆ 90 ಲಕ್ಷ ದಂಡ ತೆತ್ತ ಸೈಫ್ ಅಲಿ?

By Mahesh
|
Google Oneindia Kannada News

Kareena, Saif Ali Khan
ಮುಂಬೈ, ಸೆ.12: ದುಬೈ ಮೂಲದ ಕಾರು ಡೀಲರೊಬ್ಬರಿಂದ 30 ಲಕ್ಷ ರೂಪಾಯಿ ಮೌಲ್ಯದ ಕಾರು ಖರೀದಿಸಿ ತೆರಿಗೆ ವಂಚಿಸಲು ಯತ್ನಿಸಿದ ಬಾಲಿವುಡ್ ನಟ ಸೈಫ್ ಅಲಿ ಖಾನ್, ಇದೀಗ 90 ಲಕ್ಷ ರೂಪಾಯಿ ಖರ್ಚು ಮಾಡಬೇಕಾದ ಪ್ರಸಂಗ ಎದುರಾಗಿದೆ. ಆದರೆ, ದಂಡದ ಮೊತ್ತದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ.

ಛೋಟಾ ನವಾಬ್ ಸೈಫ್, ಸಣ್ಣ ಮೊತ್ತ ಭರಿಸದೆ ತನ್ನ ಆಮದು ಕಾರಿನೊಂದಿಗೆ ಸಿಕ್ಕಿಬಿದ್ದು , ದೊಡ್ಡ ಮೊತ್ತದ ದಂಡ (ಮೂರುಪಟ್ಟು ) ತುಂಬಬೇಕಾದ ಪ್ರಸಂಗ ಒದಗಿಬಂದಿದೆ.
ಎಂಟು ವರ್ಷ ಹಳೆಯದಾದ ಕಾರು ಆಮದು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಸೈಫ್ ಅಲಿಯನ್ನು ನಾಲ್ಕು ತಾಸು ವಿಚಾರಣೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿದೇಶಿ ಕಾರು ಆಮದು ಪ್ರಕರಣ ದಾಖಲೆ ಪರಿಶೀಲಿಸುತ್ತಿರುವ ಅಧಿಕಾರಿಗಳು 2004ರಲ್ಲಿ ದುಬೈನಿಂದ ಟೊಯೋಟಾ ಲ್ಯಾಂಡ್ ಕ್ರೂಸರ್ ವಾಹನವನ್ನು ಖರೀದಿಸಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿತ್ತು.

ಆದರೆ, ವಾಹನ ಆಮದು ಆಗಿದ್ದು ಮಾತ್ರ ಕೇರಳದ ನಿವಾಸಿ ಕೊಲಾಂಗರ ಮಹಮ್ಮದ್ ಹೆಸರಿನಲ್ಲಿ ಎಂಬುದು ವಿಶೇಷ.

ಕೆ ಮಹಮ್ಮದ್ ಹಿನ್ನೆಲೆ ಪರೀಕ್ಷಿಸಿದ ಕಸ್ಟಮ್ಸ್ ಅಧಿಕಾರಿಗಳು ಈತ ಈ ಐಷಾರಾಮಿ ವಾಹನ ಖರೀದಿಸಲು ಸಾಧ್ಯವೇ ಸಾಧ್ಯವಿಲ್ಲ ಎಂದು ಷರಾ ಹಾಕಿಬಿಟ್ಟಿತು. ಕಸ್ಟಮ್ಸ್ ಅಧಿಕಾರಿಗಳಿ ಹಾಗೂ ಗುಪ್ತಚರ ವಿಭಾಗ ತನಿಖೆ ನಡೆಸಿ, ಆಮದು ವ್ಯವಹಾರ ಕಾನೂನು ಬದ್ಧವಾಗಿಲ್ಲ ಎಂದು ವರದಿ ನೀಡಿತ್ತು.

ಒಂದು ವೇಳೆ ಕಾರು ಆಮದಿಗೆ ಸೈಫ್ 30 ಲಕ್ಷ ರೂ 'ವೈಟ್ ಮನಿ' ನೀಡಿದ್ದರೆ ತೆರಿಗೆ (ಡ್ಯೂಟಿ) ಬಾಬ್ತು ಕೇವಲ 30ಸಾವಿರ ರೂಪಾಯಿ ಭರಿಸಬೇಕಿತ್ತು. ಆದರೆ ಈಗ ಡ್ಯೂಟಿ ವಂಚಿಸಲು ಹೋಗಿ ಆತ 90 ಲಕ್ಷ ರೂಪಾಯಿ ದಂಡ ಶುಲ್ಕ ಭರಿಸಬೇಕಿದೆ ಎಂದು ಇಡಿ ಅಧಿಕಾರಿಗಳು ಹೇಳಿದ್ದಾರೆ.

ವಿಚಾರಣೆ ವೇಳೆ ಸೈಪ್ ಆರೋಪ ಸಾಬೀತಾದರೆ ಆತ ವಿದೇಶಿ ವಿನಿಮಯ ಆಡಳಿತ ಕಾಯ್ದೆ ಅನ್ವಯ 100 ಪಟ್ಟು ತೆರಿಗೆ ತುಂಬಬೇಕಾಗುತ್ತದೆ. 'ದುಬೈ ಡೀಲರಿಗೆ ಹೇಗೆ ಹಣ ರವಾನಿಸಲಾಗಿತ್ತು ಎಂಬುದರ ಬಗ್ಗೆ ಸೈಫ್‌ನಲ್ಲಿ ಪ್ರಶ್ನಿಸಲಾಗಿದ್ದು, ಉತ್ತರ ದಾಖಲಿಸಿಕೊಳ್ಳಲಾಗಿದೆ' ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

'ಈಗಾಗಲೇ ಕಾರು ಪ್ರಕರಣದ ಕುರಿತಂತೆ ಸಾಕಷ್ಟು ಸುದ್ದಿಗಳು ಪ್ರಕಟಗೊಂಡಿವೆ. ಹಾಗಾಗಿ ಆ ಬಗ್ಗೆ ನಾನು ಹೇಳುವಂತಹದ್ದೇನೂ ಬಾಕಿ ಉಳಿದಿಲ್ಲ' ಎಂದು ಸುದ್ದಿಗಾರರಿಗೆ ಸೈಪ್ ತಿಳಿಸಿದ್ದಾನೆ.

ಲೋಕವೆಲ್ಲ ಸೈಫ್ ಅಲಿ ಖಾನ್ ಮದುವೆ ಬಗ್ಗೆ ಚರ್ಚೆ ನಡೆಸುತ್ತಿರುವಾಗ, ಆದಷ್ಟು ಬೇಗ ಮದುವೆ ಆಗುವ ಅವಸರದಲ್ಲಿ ಸೈಫೀನಾ ಜೋಡಿ ಇರುವಾಗ ಸೈಫ್ ಅವರ ಕೊರಳಿಗೆ ಎಂಟು ವರ್ಷ ಹಳೆ ಕೇಸು ಜೋತು ಬಿದ್ದಿರುವುದು ಸೈಫ್ ಹಾಗೂ ಕರೀನಾಗೆ ಕಿರಿಕಿರಿ ತಂದಿರುವುದಂತೂ ನಿಜ.

English summary
Bollywood actor Saif Ali Khan has been paid tax of Rs 90 lakh in an alleged "hawala" transaction case under FEMA act related to purchase of luxury car from Dubai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X