ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಬಿಟ್ಟು ಮೋದಿ ನಾಡಿಗೆ ಬಯೋಕಾನ್ ?

By Mahesh
|
Google Oneindia Kannada News

Biocon eyes Gujarat
ಬೆಂಗಳೂರು, ಸೆ.12: ಭಾರತದ ಪ್ರಮುಖ ಬಯೋ ಫಾರ್ಮ ಕಂಪನಿ ಬಯೋಕಾನ್ ಸಂಸ್ಥೆ ಬೆಂಗಳೂರು ಬಿಟ್ಟು ನರೇಂದ್ರ ಮೋದಿ ನಾಡಿಗೆ ಕಾಲಿಡಲಿದೆಯೇ? ಸ್ಪಷ್ಟತೆ ಇಲ್ಲ. ಆದರೆ, ಅಹಮದಾಬಾದಿನಲ್ಲಿ ಬೃಹತ್ ಉತ್ಪಾದನಾ ಘಟಕ ಆರಂಭಿಸಲು ಕಿರಣ್ ಮುಜುಂದಾರ್ ಶಾ ಕಂಪನಿ ಮನಸ್ಸು ಮಾಡಿದೆ ಎಂದು ಮೋದಿ ನಾಡಿನಿಂದ ಸುದ್ದಿ ಸಿಕ್ಕಿದೆ.

'ಗುಜರಾತಿನಲ್ಲಿ ಉತ್ಪಾದನಾ ಘಟಕ ಆರಂಭಿಸಲು ಬಯೋಕಾನ್ ಅನುಮತಿ ಕೋರಿ ಮನವಿ ಸಲ್ಲಿಸಿದೆ. ಇನ್ನು ಮಾತುಕತೆ ಹಂತದಲ್ಲಿರುವುದರಿಂದ ಹೆಚ್ಚಿನ ವಿವರಗಳನ್ನು ನೀಡಲಾಗುವುದಿಲ್ಲ' ಎಂದು ಗುಜರಾತ್ ಆಹಾರ ಮತ್ತು ಔಷಧ ನಿಯಂತ್ರಣ ಪ್ರಾಧಿಕಾರ(FDCA) ಆಯುಕ್ತ ಎಚ್ ಜಿ ಕೋಶಿಯಾ ಹೇಳಿದ್ದಾರೆ.

ಡಯಾಬಿಟಿಸ್, ಅಂಕಾಲಜಿ, ನೆಫ್ರಾಲಜಿ, ಕಾರ್ಡಿಯಾಲೊಜಿ, ಇನ್ಮೂನೊಥೆರಪಿ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ 1555.85 ಕೋಟಿ ಮೌಲ್ಯದ ಬಯೋಕಾನ್ ಕಂಪನಿ ಮನವಿಗೆ ಸಿಎಂ ಮೋದಿ ಅವರು ಕೂಡಾ ಒಪ್ಪಿಗೆ ನೀಡುವ ಸಾಧ್ಯತೆ ಹೆಚ್ಚಿದೆ.

ಬಯೋಕಾನ್ ಉತ್ತರವೇನು?: ಉದ್ದೇಶಿತ ಘಟಕದ ಮೇಲೆ ಸುಮಾರು 250-300 ಕೋಟಿ ರು ಹೂಡಿಕೆ ಮಾಡುವ ಸಾಧ್ಯತೆಯಿದೆ. ಆದರೆ, ಈ ಬಂಡವಾಳ ಹೂಡಿಕೆ ಬಗ್ಗೆ ಬಯೋಕಾನ್ ಸಂಸ್ಥೆ ಯಾವುದೇ ಮಾಹಿತಿ ಹೊರ ಹಾಕಿಲ್ಲ.

ಬೆಂಗಳೂರಿನ ಬೊಮ್ಮಸಂದ್ರ ಬಳಿ ಘಟಕ ವಿಸ್ತರಣೆಗೆ ಅಡ್ಡಿ ಉಂಟಾದ ಮೇಲೆ ಇತರೆ ರಾಜ್ಯಗಳತ್ತ ಸಂಸ್ಥೆಯನ್ನು ಕೊಂಡೊಯ್ಯುವ ಸೂಚನೆ ನೀಡಿದ್ದ ಕಿರಣ್ ಮುಜುಂದಾರ್ ಶಾ ಅವರು ಈಗ 'ವೈಬ್ರೆಂಟ್' ಗುಜರಾತ್ ನತ್ತ ಕಣ್ಣು ಹಾಕಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಗುಜರಾತಿನಲ್ಲಿ ಮತ್ತೊಂದು ಘಟಕ ಸ್ಥಾಪನೆ ಮಾತ್ರ ಆಗಲಿದ್ದು, ಬೆಂಗಳೂರಿನ ಮೂಲವನ್ನು ಸದ್ಯಕ್ಕೆ ಅಲ್ಲಾಡಿಸುವುದಿಲ್ಲ ಎನ್ನಲಾಗಿದೆ.

ಜಪಾನ್, ಯುರೋಪ್ ಮೂಲದ ಸುಮಾರು 20-35 ಅತಿ ದೊಡ್ಡ ಫಾರ್ಮಾ ಕಂಪನಿಗಳು ಗುಜರಾತಿನಲ್ಲಿ ಬಂಡವಾಳ ಹೂಡಲು ಮುಂದೆ ಬಂದಿದೆ. ಯುಎಸ್ ನ ಅಬ್ಬೋಟ್ ಲ್ಯಾಬ್ಸ್ ಹಾಗೂ ಇಸ್ರೇಲ್ ನ ಟೆವಾ ಫಾರ್ಮ ಗುಜರಾತ್ ಪ್ರವೇಶಿಸಲಿದೆ.

ವಡೋದರದಲ್ಲಿ 360 ಕೋಟಿ ವೆಚ್ಚದ nutraceutical ಉತ್ಪಾದನಾ ಘಟಕ ಸ್ಥಾಪನೆಗೆ ಅಬೋಟ್ ಲ್ಯಾಬ್ ಮನಸ್ಸು ಮಾಡಿದೆ. ಇದರ ಜೊತೆಗೆ ಯುಎಸ್ ನ ಪ್ರಾಕ್ಟರ್ ಅಂಡ್ ಗಾಂಬಲ್ (P & G) 250 ಕೋಟಿ ವೆಚ್ಚದ ಘಟಕವನ್ನು ಸನಂದ್ ನಲ್ಲಿ ಆರಂಭಿಸಲಿದೆ.

ವೈಎಸ್ ಜಗನ್ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದಿನಲ್ಲಿ ನಿಮ್ಮಗಡ್ಡ ಪ್ರಸಾದ್ ಬಂಧನವಾಗುತ್ತಿದ್ದಂತೆ ಔಷಧ ಮಾರುಕಟ್ಟೆ ಮೌಲ್ಯ ಇಳಿಮುಖವಾಗುತ್ತಿದೆ. ಈ ಪರಿಸ್ಥಿಯಲ್ಲಿ ಬೆಂಗಳೂರಿನತ್ತ ಮುಖ ಮಾಡಬೇಕಿದ್ದ ಕಂಪನಿಗಳನ್ನು ಗುಜರಾತ್ ನತ್ತ ತಿರುಗಿಸುವಲ್ಲಿ ನರೇಂದ್ರ ಮೋದಿ ತಂಡ ಯಶಸ್ವಿಯಾಗಿದೆ ಎಂದರೆ ತಪ್ಪಾಗಲಾರದು.

English summary
India's leading biopharma company Bangalore headquartered Biocon Ltd is eyeing Gujarat to set up a manufacturing plant near Ahmedabad, informed senior state government FDCA officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X