ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋ ಡ್ಯಾಡಿ, ಡೊಮಿನೋಸ್ ವೆಬ್ ಹ್ಯಾಕ್ಡ್

By Mahesh
|
Google Oneindia Kannada News

go Daddy, Dominos web hacked
ಬೆಂಗಳೂರು, ಸೆ.11: ಅತ್ಯಂತ ಜನಪ್ರಿಯ ಪಿಜ್ಜಾ ಸಗಟು ಮಾರಾಟ ಸಂಸ್ಥೆ ಡೊಮಿನೋಸ್ ಪಿಜ್ಜಾ ಸರ್ವೀಸ್ ನಲ್ಲಿ ಇವತ್ತು ಸಕತ್ ಕಿರಿಕ್ ಆಗಿದೆ. ಆನ್ ಲೈನ್ ಮೂಲಕ ಬುಕ್ ಮಾಡಿದ ಗ್ರಾಹಕರು ಸರಿಯಾಗಿ ಪಿಜ್ಜಾ ಸಿಗದೆ ಒದ್ದಾಡಿದ್ದಾರೆ. ಪಿಜ್ಜಾ ಸಂಸ್ಥೆ ವೆಬ್ ಸೈಟ್ ಹ್ಯಾಕ್ ಆಗಿದೆ.

ಇದರ ಜೊತೆಗೆ ಜನಪ್ರಿಯ ವೆಬ್ ಹೋಸ್ಟಿಂಗ್ ಸಂಸ್ಥೆ ಗೋ ಡ್ಯಾಡಿ ಕೂಡಾ ಅತಿಕ್ರಮಿಗಳ ಕಾಟಕ್ಕೆ ತುತ್ತಾಗಿದೆ. ಸುಮಾರು 37,000 ಖಾತೆಗಳ ಹೆಸರು, ವಿಳಾಸ, ಇಮೇಲ್, ಪಾಸ್ ವರ್ಡ್ ಎಲ್ಲವೂ ಸೋರಿಕೆಯಾಗಿದೆ ಎಂದು ಬಿಸಿನೆಸ್ ಸ್ಟಾಂಡರ್ಡ್ ವರದಿ ಮಾಡಿದೆ.

ಟರ್ಕಿ ಮೂಲದ ಹ್ಯಾಕರ್ ಸಂಸ್ಥೆ ಟರ್ಕೀಸ್ ಅಜಾನ್ ಹ್ಯಾಕರ್ ಸಮೂಹ ಈ ಕೃತ್ಯ ಎಸೆಗಿರುವ ಶಂಕೆ ವ್ಯಕ್ತವಾಗಿದೆ.

ಗೋ ಡ್ಯಾಡಿ ಹೋಸ್ಟಿಂಗ್ ಸಂಸ್ಥೆಯ ಗ್ರಾಹಕ ವೆಬ್ ತಾಣಗಳು ಹಾಗೂ ಇಮೇಲ್ ಗಳು ಡೌನ್ ಆಗಿದೆ. ಗೋ ಡ್ಯಾಡಿ ಸೇವೆಯಲ್ಲಿ ವ್ಯತ್ಯಯವಾಗಲು ಅನಾಮಧೇಯ ಹ್ಯಾಕರ್ ಸಂಸ್ಥೆ ಕಾರಣ ಎಂದು ತಿಳಿದು ಬಂದಿದೆ.

ಆದರೆ, ಎಷ್ಟು ವೆಬ್ ತಾಣಗಳು ಇದರಿಂದ ತೊಂದರೆ ಅನುಭವಿಸಿದೆ ಎಂಬ ಸ್ಪಷ್ಟ ಮಾಹಿತಿ ಇನ್ನೂ ಸಿಕ್ಕಿಲ್ಲ. ಸೋಮವಾರ ಮಧ್ಯಾಹ್ನದಿಂದಲೇ ಆರಿಜೋನಾ ಮೂಲದ Scottsdale ಸ್ಥಗಿತಗೊಂಡಿದೆ.

"Anonymous Own3r" ಎಂಬ ಏಕ ವ್ಯಕ್ತಿ ಕೃತ್ಯ ಇದಾಗಿದ್ದು, ಯಾವುದೇ ಸಂಘಟನೆ ಈ ಅತಿಕ್ರಮದ ಹಿಂದೆ ಇಲ್ಲ ಎಂದು ನಂತರ ಟ್ವೀಟ್ಟರ್ ಮೂಲಕ ತಿಳಿದು ಬಂದಿದೆ. ನಿಮ್ಮ ವೆಬ್ ಸೈಟ್ ಗೋ ಡ್ಯಾಡಿ ಬಳಸಿ ಹೋಸ್ಟ್ ಮಾಡಿದ್ದರೆ ಒಮ್ಮೆ ಪರೀಕ್ಷಿಸಿಕೊಳ್ಳಿ. ಸುಮಾರು 10.5 ಮಿಲಿಯನ್ ಗ್ರಾಹಕರನ್ನು ಗೋ ಡ್ಯಾಡಿ ಹೊಂದಿದೆ.

Stop Online Piracy Act, or SOPA ಕಾಯಿದೆಗೆ ಗೋ ಡ್ಯಾಡಿ ಬೆಂಬಲ ನೀಡಿದ್ದರೆ ಪರಿಣಾಮ ವೆಬ್ ಸೈಟ್ ಹ್ಯಾಕ್ ಆಗಿರಬಹುದು ಎಂದು ಶಂಕಿಸಲಾಗಿದೆ. ಸುಮಾರು 52 ಮಿಲಿಯನ್ ಡೊಮೈನ್ ಹೆಸರುಗಳು ಹಾಗೂ 5 ಮಿಲಿಯನ್ ವೆಬ್ ತಾಣಗಳನ್ನು ತನ್ನ ಸರ್ವರ್ ಗಳಲ್ಲಿ ಹೋಸ್ಟ್ ಮಾಡಿರುಅ ದಾಖಲೆಯನ್ನು ಗೋ ಡ್ಯಾಡಿ ಹೊಂದಿದೆ. 2007 ಹಾಗೂ 2009 ರಲ್ಲಿ ಇದೇ ರೀತಿ ಗೋ ಡ್ಯಾಡಿ ತಾಣ ಹ್ಯಾಕ್ ಆಗಿತ್ತು.

Go Daddy ‏@GoDaddy : Most customer hosted sites back online. We're working out the last few kinks for our site

English summary
Domino's Pizza, one of the most popular pizza retailers in India, suffered a setback today as its India website was hacked. A Business Standard report says that a Turkish Hacker group called Turkish Ajan Hacker Group is expected to be behind this hacking incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X