• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕದ ಮಾರ್ಷ್ ಖರೀದಿಸಿದ ಇನ್ಫಿ ಬಿಪಿಒ

By Mahesh
|

ಬೆಂಗಳೂರು, ಸೆ.11: ಅಮೆರಿಕದ ಬಿಪಿಒ ಸಂಸ್ಥೆ ಮಾರ್ಷ್ ಖರೀದಿಸಿರುವುದಾಗಿ ಇನ್ಫೋಸಿಸ್ ಬಿಪಿಒ ಸೋಮವಾರ(ಸೆ.10) ಪ್ರಕಟಿಸಿದೆ.

ಯುಸ್ ಮೂಲದ ಮಾರ್ಷ್ ಹಾಗೂ ಮೆಕ್ ಲೆನ್ನಾನ್ ಸಮೂಹ ಕಂಪನಿಗೆ ಸೇರಿದ ಮಾರ್ಷ್ ಹೊರಗುತ್ತಿಗೆ ಸಂಸ್ಥೆ ಈಗ ಇನ್ಫೋಸಿಸ್ ತೆಕ್ಕೆಗೆ ಬಿದ್ದಿದೆ.

ಅಯೊವಾದ ಡೆಸ್ ಮೊಯಿನೆಸ್ ನಲ್ಲಿರುವ ಮಾರ್ಷ್ ಬಿಪಿಒ ಸಂಸ್ಥೆಯಲ್ಲಿ ಸುಮಾರು 87 ಉದ್ಯೋಗಿಗಳಿದ್ದಾರೆ. 6,00,000ಕ್ಕೂ ಅಧಿಕ ಜನರಿಗೆ ವಿಮೆ ಒದಗಿಸಿರುವ ಸುಮಾರು 7 ವಿಮೆ ಸಂಸ್ಥೆಗಳು ಮಾರ್ಷ್ ಸಂಸ್ಥೆ ಗ್ರಾಹಕರ ಪಟ್ಟಿಯಲ್ಲಿದೆ.

ಮಾರ್ಷ್ ಕಂಪನಿ ಖರೀದಿಗೆ ಬಗ್ಗೆ ಹರ್ಷ ವ್ಯಕ್ತಪಡಿಸಿದ ಇನ್ಫೋಸಿಸ್ ಬಿಪಿಒ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಡಿ. ಸ್ವಾಮಿನಾಥನ್ ಅವರು, "ಈ ಸಂಸ್ಥೆ ಖರೀದಿಯಿಂದ ನಮ್ಮ ಬಿಪಿಒ ಕಾರ್ಯ ನಿರ್ವಹಣೆ ಮಟ್ಟ ಇನ್ನಷ್ಟು ಎತ್ತರಕ್ಕೆ ಏರಲಿದೆ.

ಉತ್ತಮ ಕಾರ್ಯಕ್ಷಮತೆ ಸಾಧಿಸಲು ಸಾಧ್ಯವಾಗಲಿದೆ. ಮಾರ್ಷ್ ಸಂಸ್ಥೆ ಖರೀದಿಯಿಂದಾಗಿ ವಾರ್ಷಿಕ ಆದಾಯ ಸುಮಾರು 10-12 ಮಿಲಿಯನ್ ಡಾಲರ್ ಹೆಚ್ಚಾಗುವ ಸಾಧ್ಯತೆಯಿದೆ. ವಿಮೆ ಹಾಗೂ ವಾಣಿಜ್ಯ ವಲಯ ಸಂಸ್ಥೆಗಳಿಗೆ ಎಂಟರ್ ಪ್ರೈಸ್ ಸಲ್ಯೂಷನ್ ನೀಡುವಲ್ಲಿ ಇನ್ಫೋಸಿಸ್ ಸಂಸ್ಥೆ ಇನ್ನಷ್ಟು ಸಮರ್ಥವಾಗಲಿದೆ' ಎಂದು ಹೇಳಿದ್ದಾರೆ.

ಖರೀದಿ ನಂತರ ಡೆಸ್ ಮೊಯಿನೆಸ್ ನಲ್ಲಿ ಮುಂದಿನ ಎರಡು ಮೂರು ತಿಂಗಳಿನಲ್ಲಿ 20 ರಿಂದ 25 ಉದ್ಯೋಗಿಗಳ ನೇಮಕಾತಿ ನಡೆಯುವ ಸಾಧ್ಯತೆಯಿದೆ.

ಸ್ವಿಸ್ ಮೂಲದ ಜಾಗತಿಕ ಮ್ಯಾನೇಜ್ಮೆಂಟ್ ಕನ್ಸಲ್ಟೆನ್ಸಿ ಸಂಸ್ಥೆ ಲೊಡೆಸ್ಟೋನ್ ಹೋಲ್ಡಿಂಗ್ ಎಜಿ ಸಂಸ್ಥೆಯನ್ನು ಸುಮಾರು 350 ಮಿಲಿಯನ್ ಡಾಲರ್ ಮೊತ್ತ ನೀಡಿ ಖರೀದಿಸುತ್ತಿರುವ ಸುದ್ದಿಯನ್ನು ಇನ್ಫೋಸಿಸ್ ಸಂಸ್ಥೆ ದೃಢಪಡಿಸಿತ್ತು.

ಇದಲ್ಲದೆ, ಅಲ್ಲದೆ ಸ್ಪೇನ್ ಮೂಲದ ಎವೆರಿಸ್ ಸಂಸ್ಥೆ ಖರೀದಿಗೂ ಇನ್ಫೋಸಿಸ್ ಮುಂದಾಗಿದೆ ಎಂಬ ಸುದ್ದಿ ಹಬ್ಬಿತ್ತು. ಹೀಗಾಗಿ ಸೋಮವಾರ ಇನ್ಫೋಸಿಸ್ ಷೇರುಗಳು ಮೇಲ್ಮುಖವಾಗಿ ಚಲಿಸಿ ಹೂಡಿಕೆದಾರರಲ್ಲಿ ಸಂತಸ ತಂದಿತ್ತು. ಹೊಸ ಹೊಸ ಕಂಪನಿಗಳ ಖರೀದಿಗೆ ಮುಂದಾಗಿರುವ ಇನ್ಫೋಸಿಸ್ ಸಂಸ್ಥೆ ಬಳಿ ಸದ್ಯಕ್ಕೆ $3.24 ಬಿಲಿಯನ್ (ರು 18,031 ಕೋಟಿ) ಅಪತ್ ಧನವಿದೆ.(ಜೂ.30, 2012)

ಸೋಮವಾರ ಮಾರುಕಟ್ಟೆ ಮುಕ್ತಾಯದ ಹೊತ್ತಿಗೆ 3.54 ಗಂಟೆಗೆ 2511.00 ರು (15.10 ಏರಿಕೆ) ಶೇ 0.60 ರಷ್ಟು ಏರಿಕೆಯಾಗಿತ್ತು. ಎನ್ ಎಸ್ ಇನಲ್ಲಿ 2512.35 ರು ನಂತೆ (16.35 ರು ಏರಿಕೆ) ಶೆ 0.66 ರಷ್ಟು ಏರಿಕೆ ಹೊಂದಿತ್ತು.

ಆದರೆ, ಮಂಗಳವಾರ, ಕೊಂಚ ಬದಲಾಗಿದೆ. ಬಿಎಸ್ ಇನಲ್ಲಿ 12.35 ರ ಹೊತ್ತಿಗೆ 2,507.00 ರು ನಂತೆ ಶೇ 0.16 ರಷ್ಟು ಇಳಿಕೆಯಾಗಿದೆ. ಎನ್ ಎಸ್ ಇನಲ್ಲೂ 2506 ರು ನಂತೆ ಶೇ 0.25 ರಷ್ಟು ಇಳಿಕೆ ಕಂಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Infosys on Monday(Sep.10) said that it has acquired US-based Marsh BPO, which is outsourcing arm of the US-based Marsh & McLennan Companies. Marsh BPO, based in Des Moines, Iowa has 87 employees and serves seven insurers and covers more than 600,000 insured lives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more