• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇನ್ಫೋಸಿಸ್ ಬಿಪಿಒ ನಿಂದ 8,000 ನೇಮಕಾತಿ

By Mahesh
|

ಬೆಂಗಳೂರು, ಸೆ.7: ಸಾಫ್ಟ್ ವೇರ್ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಪ್ರಸಕ್ತ ವರ್ಷದಲ್ಲಿ ತನ್ನ ಹೊರಗುತ್ತಿಗೆ ವಿಭಾಗದಲ್ಲಿ ಸುಮಾರು 8,000 ನೇಮಕಾತಿ ಮಾಡಲಿದೆ ಎಂದು ಸಂಸ್ಥೆ ಸಿಇಒ ಸ್ವಾಮಿ ಸ್ವಾಮಿನಾಥನ್ ಹೇಳಿದ್ದಾರೆ.

ನಾಸ್ಕಾಂ ಬಿಪಿಒ ಸಭೆಯಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದ ಸ್ವಾಮಿನಾಥನ್ 2012-13ರಲ್ಲಿ ನಡೆಯಲಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಶೇ 20ರಷ್ಟು ನೇಮಕಗಳು ಹಿರಿಯ ಹಾಗೂ ಮಧ್ಯಮ ಸ್ತರದ ಅಧಿಕಾರಿಗಳ ಮಟ್ಟದಲ್ಲಿ ಆಗಲಿದೆ ಎಂದಿದ್ದಾರೆ.

2013 ರ ಆರ್ಥಿಕ ವರ್ಷದಲ್ಲಿ ಸುಮಾರು 10,000-12,000 ಜನರನ್ನು ಉದ್ಯೋಗ ನೀಡಲು ಯೋಜಿಸಲಾಗಿದೆ. ಅದರಲ್ಲಿ 4,000 ಜನರಿಗೆ ಆಗಲೇ ಉದ್ಯೋಗ ನೀಡಲಾಗಿದೆ. ನೇಮಕಗೊಂಡವರಲ್ಲಿ ಶೇ 15-20 ರಷ್ಟು ಮಂದಿ ಮಧ್ಯಮ ಮತ್ತು ಹಿರಿಯ ಸ್ತರದ ವೃತ್ತಿಪರರಾಗಿದ್ದಾರೆ, ಕೆಲವು ಸೂಪರ್ ವೈಸರ್ ಹುದ್ದೆಗಳಿಗೂ ನೇಮಕಾತಿ ಆಗಿದೆ ಎಂದು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಸ್ವಾಮಿನಾಥನ್ ಹೇಳಿದ್ದಾರೆ.

2012-13 ವರ್ಷದಲ್ಲಿ ಶೇ 15 ರಿಂದ 18 ರಷ್ಟು ಪ್ರಗತಿ ಸಾಧಿಸುವ ನಿರೀಕ್ಷೆಯಿದೆ. ಹೊರಗುತ್ತಿಗೆ ಕ್ಷೇತ್ರದಲ್ಲಿ ಈಗ ಸಾಕಷ್ಟು ಬದಲಾವಣೆಗಳಾಗಿದೆ. ಜನಸ್ನೇಹಿ ಮಾಧ್ಯಮವಾದ್ದರಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ವಿಶೇಷ ಗಮನ ಹರಿಸಬೇಕಾಗುತ್ತದೆ, ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ನಮ್ಮ ತಂತ್ರಗಳನ್ನು ಬದಲಾಯಿಸಬೇಕಾಗುತ್ತದೆ ಎಂದು ಸ್ವಾಮಿನಾಥನ್ ಹೇಳಿದರು.

ಜೂನ್ ತಿಂಗಳ ತನಕದ ಲೆಕ್ಕಾಚಾರದಂತೆ ಇನ್ಫೋಸಿಸ್ ಬಿಪಿಒ ವಿಭಾಗದಲ್ಲಿ ಸುಮಾರು 24,000 ಜನ ಉದ್ಯೊಗಿಗಳಿದ್ದಾರೆ. ಏಪ್ರಿಲ್ -ಜೂನ್ ತ್ರೈಮಾಸಿಕದಲ್ಲಿ ಸಂಸ್ಥೆಯ ಆದಾಯ ಸುಮಾರು 109.34 ಮಿಲಿಯನ್ ಯುಎಸ್ ಡಾಲರ್ ಆದಾಯ ಹಾಗೂ 16.6 ಮಿಲಿಯನ್ ಡಾಲರ್ ಲಾಭ ದಾಖಲಿಸಿದೆ.

2011-11 ಆರ್ಥಿಕ ವರ್ಷದ ಪ್ರಕಟಣೆಯಂತೆ 426.79 ಮಿಲಿಯನ್ ಯುಎಸ್ ಡಾಲರ್ ಮೌಲ್ಯ ಹೊಂದಿದೆ. ಜಾಗತಿಕ ಮಟ್ಟದಲ್ಲಿ 12ಕ್ಕೂ ಅಧಿಕ ಕೇಂದ್ರಗಳನ್ನು ಹೊಂದಿದ್ದು 19,000ಕ್ಕೂ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದರು.

90ಕ್ಕೂ ಅಧಿಕ ಕ್ಲೈಂಟ್ ಗಳನ್ನು ಸಂಸ್ಥೆ ಹೊಂದಿದೆ. ಬೆಂಗಳೂರು, ಚೆನ್ನೈ, ಗುರ್ ಗಾಂವ್, ಜೈಪುರ, ಪುಣೆ, ಮಾಂಟೆರ್ರಿ (ಮೆಕ್ಸಿಕೋ), ಲೊಜ್ (ಪೋಲ್ಯಾಂಡ್), ಬ್ರಾನೊ (ಜೆಕ್ ರಿಪಬ್ಲಿಕ್), ಪ್ರೇಗ್ ( ಜೆಕ್ ರಿಪಬ್ಲಿಕ್), ಅಟ್ಲಾಂಟಾ (ಅಮೆರಿಕ), ಹ್ಯಾಂಗ್ ಜೋ (ಚೀನಾ), ಮನೀಲಾ (ಫಿಲಿಫೈನ್ಸ್), ಬೆಲೊ ಹಾರಿಜಾಂಟೆ (ಬ್ರೆಜಿಲ್) ನಲ್ಲಿ ಇನ್ಫೋಸಿಸ್ ತನ್ನ ಬಿಪಿಒ ಕೇಂದ್ರಗಳನ್ನು ಹೊಂದಿದೆ.

ಇನ್ಫೋಸಿಸ್ ಸಂಸ್ಥೆಯ ಹೊರಗುತ್ತಿಗೆ ವಿಭಾಗದ ಮುಖ್ಯಸ್ಥ ರಿತೇಶ್ ಇದ್ನಾನಿ ಅವರು ತಮ್ಮ ಸಿಒಒ ಹುದ್ದೆಗೆ ಮಂಗಳವಾರ (ಮೇ.29) ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಸದ್ಗುರು ಶ್ರೀ ಸಾಯಿ ಜ್ಯೋತಿಷ್ಯ ಪೀಠ- ದೈವಜ್ಞ ಪ್ರಧಾನ ಜ್ಯೋತಿಷ್ಯರು ಶ್ರೀ ಶ್ರೀನಿವಾಸ್ ಗುರೂಜಿ ಉದ್ಯೋಗದಲ್ಲಿ ತೊಂದರೆ, ಮದುವೆ ವಿಳಂಬ, ಸತಿ- ಪತಿ ಕಲಹ, ಡೈವರ್ಸ್ ಪ್ರಾಬ್ಲಮ್, ಶತ್ರು ಪೀಡೆ, ಅತ್ತೆ -ಸೊಸೆ ಕಲಹ, ಸಂತಾನ ಸಮಸ್ಯೆ, ಆರೋಗ್ಯ ಸಮಸ್ಯೆ, ರಾಜಕೀಯದಲ್ಲಿ ಶತ್ರುಗಳ ಕಾಟ, ಸಿನಿಮಾ ಪ್ರವೇಶ ಇನ್ನೂ ಯಾವುದೇ ಗುಪ್ತ ಸಮಸ್ಯೆಗೆ ಗುರೂಜಿ ಅವರನ್ನು ನೇರವಾಗಿ ಭೇಟಿಯಾಗಬಹುದು. ಗುರೂಜಿ ಅವರ ಸಲಹೆ ಮತ್ತು ಪರಿಹಾರ ಪಡೆದುಕೊಂಡಂಥ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವಿಳಾಸ # 37, 4th block, ಜಯನಗರ, ಬೆಂಗಳೂರು- 9986623344

English summary
Infosys BPO will hire 8,000 people this fiscal, said its chief executive officer Swami Swaminathan at NASSCOM summit. In FY 2013, we are looking at hiring 10,000-12,000 people. Of this 4,000 have already been hired. About 15-20 per cent of these would be middle- and senior-level professionals
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X