ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಡರರ್ ಕನಸು ಭಗ್ನ, ಯುಎಸ್ ಓಪನ್ ನಿಂದ ಹೊರಕ್ಕೆ

By Mahesh
|
Google Oneindia Kannada News

Roger Federer crashed out of US Open 2012
ನ್ಯೂಯಾರ್ಕ್, ಸೆ.5: ಸತತವಾಗಿ 6 ಯುಎಸ್ ಓಪನ್ ಟೆನಿಸ್ ಪ್ರಶಸ್ತಿ ಗೆದ್ದು 87 ವರ್ಷದಲ್ಲಿ ಯಾರು ಮಾಡದ ಸಾಧನೆ ಮೆರೆಯುವ ಕನಸು ಹೊತ್ತಿದ್ದ ರೋಜರ್ ಫೆಡರರ್ ಗೆ ನಿರಾಶೆಯಾಗಿದೆ. ಸ್ವಿಸ್ ಹೀರೋ ರೋಜರ್ ಅವರನ್ನು ಜೆಕ್ ನ ಟೊಮಸ್ ಬೆರ್ಡಿಕ್ ಸೋಲಿಸಿ ಮನೆಗೆ ಕಳಿಸಿದ್ದಾರೆ.

17 ಬಾರಿ ಗ್ರ್ಯಾಂಡ್ ಸ್ಲಾಮ್ ಪದಕ ಗೆದ್ದಿರುವ ಫೆಡರರ್ 33ನೇ ಗ್ರ್ಯಾಂಡ್ ಸ್ಲಾಮ್ ಸೆಮಿಫೈನಲ್ ಹಾಗೂ ಸತತ 9ನೇ ಯುಎಸ್ ಓಪನ್ ಸೆಮಿಸ್ ಪ್ರವೇಶಿಸುವ ನಿರೀಕ್ಷೆಯಿತ್ತು. ಆದರೆ, ಗುರುವಾರ ಮುಂಜಾನೆ ನಡೆದ ಕ್ವಾಟರ್ ಫೈನಲ್ ಪಂದ್ಯದಲ್ಲಿ 7-6 (7/1), 6-4, 3-6, 6-3 ಅಂತರದಿಂದ 6ನೇ ಸೀಡ್ ನ ಬೆರ್ಡಿಕ್ ಗೆಲುವು ಸಾಧಿಸಿದ್ದಾರೆ. ಸೆಮಿಸ್ ನಲ್ಲಿ ಇಂಗ್ಲೆಂಡಿನ ಆಂಡಿ ಮರ್ರೆಯನ್ನು ಬೆರ್ಡಿಕ್ ಎದುರಿಸಲಿದ್ದಾರೆ.

'ವಿಂಬಲ್ಡನ್ ಗೆದ್ದು ನಂ.1 ಆದ ಮೇಲೆ ಈ ಸೋಲು ಅರಗಿಸಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತಿದೆ. ನಾನು ಮತ್ತೆ ನನ್ನ ತಂತ್ರಗಳನ್ನು ಬದಲಿಸಬೇಕಾಗುತ್ತದೆ' ಎಂದು ಫೆಡರರ್ ಪಂದ್ಯ ನಂತರ ದುಃಖದಿಂದ ಪ್ರತಿಕ್ರಿಯಿಸಿದ್ದಾರೆ.

2003ರಲ್ಲಿ ಡೇವಿಡ್ ನಲ್ಬಾಂಡಿಯನ್ ವಿರುದ್ಧ ನಾಲ್ಕನೇ ಸುತ್ತಿನಲ್ಲಿ ಸೋತಿದ್ದ ನಂತರ ಇದು ಫೆಡರರ್ ಅವರ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ಕ್ವಾಟರ್ ಫೈನಲ್ ಗೂ ಮುನ್ನ 15 ಬಾರಿ ಫೆಡರರ್ ಹಾಗೂ ಬೆರ್ಡಿಕ್ ಪರಸ್ಪರ ಸೆಣಸಾಟ ನಡೆಸಿದ್ದು, ಬೆರ್ಡಿಕ್ 4 ಬಾರಿ ಗೆದ್ದಿದ್ದರೆ, ರೋಜರ್ 11 ಬಾರಿ ಗೆಲುವು ಸಾಧಿಸಿದ್ದರು.

ವಿಶ್ವದ ನಂ.1 ಆಟಗಾರನನ್ನು ಸೋಲಿಸಿರುವುದು ಸಹಜವಾಗಿ ಖುಷಿ ತಂದಿದೆ. ಇನ್ನಷ್ಟು ಉತ್ಸಾಹದಿಂದ ಸೆಮಿಫೈನಲ್ ನಲ್ಲಿ ಆಡುತ್ತೇನೆ ಎಂದು 26 ವರ್ಷದ ಚೆಕ್ ಗಣರಾಜ್ಯದ ಆಟಗಾರ ಬೆರ್ಡಿಕ್ ಹೇಳಿದ್ದಾರೆ. 2010ರ ವಿಂಬಲ್ಡನ್ ಫೈನಲ್ ನಲ್ಲಿ ಫೆಡರರ್ ವಿರುದ್ಧ ಸೋಲುಂಡಿದ್ದ ಬೆರ್ಡಿಕ್ ಈಗ ಅದರ ಸೇಡು ತೀರಿಸಿಕೊಂಡಿದ್ದಾರೆ. ಆದರೆ, 2010ರ ವಿಂಬಲ್ಡನ್ ಯಶಸ್ಸಿನ ನಂತರ ಮತ್ತೊಮ್ಮೆ ಉತ್ತಮ ಆಡುತ್ತಿರುವ ಬೆರ್ಡಿಕ್ ಈಗ ಯುಸ್ ಓಪನ್ ಸೆಮಿಸ್ ಪ್ರವೇಶಿಸಿದ್ದಾರೆ.

ಇದಕ್ಕೂ ಮುನ್ನ ನಾಲ್ಕನೇ ಸುತ್ತಿನಲ್ಲಿ ಅರ್ಜೆಂಟೀನಾದ ಯುವಾನ್ ಮಾರ್ಟಿನ್ ಡೆಲ್ ಪೊಟ್ರೊ ವಿರುದ್ಧ ಸೋಲುಂಡ ಅಮೆರಿಕದ ಜನಪ್ರಿಯ ಆಟಗಾರ ಆಂಡಿ ರಾಡಿಕ್ ಕಣ್ಣೀರಿಡುತ್ತಾ ಟೆನಿಸ್ ಗೆ ಗುಡ್ ಬೈ ಹೇಳಿದ್ದರು.

ಮರ್ರೆ ಹಾಗೂ ಬೆರ್ಡಿಕ್ ಸೆಮಿಸ್ ಪಂದ್ಯದಲ್ಲಿ ಸೆಣಸಲಿದ್ದು, ಇನ್ನೆರಡು ಕ್ವಾಟರ್ ಫೈನಲ್ ಪಂದ್ಯಗಳ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಡೆವಿಡ್ ಫೆರರ್ ಹಾಗೂ ಜಾಂಕೋ ಟಿಪ್ಸರೆವಿಕ್ ಮತ್ತು ಜೋಕೊವಿಕ್ ಹಾಗೂ ಯುವಾನ್ ಡೆಲ್ ಪೊಟ್ರೊ ಪಂದ್ಯ ನಡೆಯಬೇಕಿದೆ.

English summary
The 17-time Grand Slam title winner, Roger Federer dream of playing 33rd Grand Slam semi-final, shattered by Czech Tomas Berdych on Thursday. Roger was was beaten 7-6 (7/1), 6-4, 3-6, 6-3 by sixth-seeded Berdych.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X