ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೀಫಾ ಶ್ರೇಯಾಂಕ : ಮತ್ತೆ ಕುಸಿತ ಕಂಡ ಭಾರತ

By Mahesh
|
Google Oneindia Kannada News

Fifa Ranking
ಲಂಡನ್, ಫೆ.6: ನೆಹರೂ ಕಪ್ ಫುಟ್ಬಾಲ್ ಟೂರ್ನಮೆಂಟ್‌ನ ಅಂತಿಮ ಹಣಹಣಿಯಲ್ಲಿ ಬಲಿಷ್ಠ ಕ್ಯಾಮರೂನ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-5 ಅಂತರದಿಂದ ಮಣಿಸಿ ಸತತ ಮೂರನೆ ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ಭಾರತ ಸಂಭ್ರಮಸಿತ್ತು. ಆದರೆ, ನೆಹರೂ ಕಪ್ ಗೆದ್ದರೂ ಭಾರತದ ಫೀಫಾ ಶ್ರೇಯಾಂಕ ಮಾತ್ರ ಕುಸಿತ ಕಂಡಿದೆ.

ಸುನಿಲ್ ಛೆಟ್ರಿ ನಾಯಕತ್ವದ ಭಾರತ ತಂಡ ಯುರೋ ಕಪ್ ಸಮಯದಲ್ಲಿ ಬಿಡುಗಡೆಗೊಂಡ ಫೀಫಾ ಶ್ರೇಯಾಂಕ ಪಟ್ಟಿಯಲ್ಲಿ 164ನೇ ಸ್ಥಾನ ಪಡೆದಿತ್ತು. ಆದರೆ, ಬುಧವಾರ(ಸೆ.5) ರಾತ್ರಿ ಪ್ರಕಟವಾದ ಫೀಫಾ ಹೊಸ ಶ್ರೇಯಾಂಕ ಪಟ್ಟಿಯಂತೆ ಭಾರತ 169ನೇ ಸ್ಥಾನಕ್ಕೆ ಕುಸಿದಿದೆ. ನೆಹರೂ ಕಪ್ ನಲ್ಲಿ ಭಾಗವಹಿಸಿದ್ದ ಮಾಲ್ಡೀವ್ಸ್ (159), ನೇಪಾಳ(166) ಸ್ಥಾನದಲ್ಲಿರುವುದು ಭಾರತದ ಗಾಯದ ಮೇಲೆ ಉಪ್ಪು ಸುರಿದಂತೆ ಆಗಿದೆ.

ಒಲಿಂಪಿಕ್ಸ್ ನಲ್ಲಿ ಕಳಪೆ ಸಾಧನೆ ತೋರಿಸಿದರೂ 1617 ಅಂಕಗಳೊಂದಿಗೆ ಹಾಲಿ ವಿಶ್ವ ಚಾಂಪಿಯನ್ ಸ್ಪೇನ್ ತಂಡ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಇಂಗ್ಲೆಂಡ್ ತಂಡ ಮೂರನೇ ಸ್ಥಾನ ಉಳಿಸಿಕೊಂಡಿದ್ದರೆ, ಉರುಗ್ವೆ 5ನೇ ಸ್ಥಾನಕ್ಕೆ ಕುಸಿದೆ.

ಏಷ್ಯಾದ 46 ತಂಡಗಳಲ್ಲಿ 31ನೇ ಸ್ಥಾನ ಪಡೆದಿರುವ ಭಾರತ ನೇಪಾಳದಲ್ಲಿ ನಡೆದ ಎಫ್ ಸಿ ಚಾಲೆಂಜ್ ಕಪ್ ನಂತರ ಯಾವುದೇ ಪಂದ್ಯಗಳನ್ನಾಡಿಲ್ಲ.ಬ್ಲೂ ಟೈಗರ್ಸ್ ಭಾರತ ತಂಡ ಆಗಸ್ಟ್ ನಲ್ಲಿ ನೆಹರೂ ಕಪ್ ಆಡುವ ಸಾಧ್ಯತೆಯಿದೆ.

ಈಕ್ವೆಡರ್ ಹಾಗೂ ಸ್ವಿಜರ್ಲೆಂಡ್ ತಂಡ ಟಾಪ್ 20ಯೊಳಗೆ ಜಿಗಿದು ಅಚ್ಚರಿ ಮೂಡಿಸಿದ್ದರೆ, ಐದು ಬಾರಿ ವಿಶ್ವ ಚಾಂಪಿಯನ್ ಬ್ರೆಜಿಲ್ ತಂಡ 12ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.

ಕಳೆದ ಜೂನ್ ನಲ್ಲಿ ಬಿಡುಗಡೆಗೊಂಡ ಪಟ್ಟಿಯಂತೆ ನೇಪಾಳ 149 ಹಾಗೂ ಬಾಂಗ್ಲಾದೇಶ 152ನೇ ಸ್ಥಾನ ಪಡೆದಿತ್ತು.. ಆಸ್ಟ್ರೇಲಿಯಾವನ್ನು ಹಿಂದಿಕ್ಕಿರುವ ಜಪಾನ್ ತಂಡ 23ನೇ ಸ್ಥಾನಕ್ಕೇರಿತ್ತು.

ಸೆ.5ರಂತೆ ಫೀಫಾ ಶ್ರೇಯಾಂಕ ಪಟ್ಟಿ:
1. ಸ್ಪೇನ್
2. ಜರ್ಮನಿ
3. ಇಂಗ್ಲೆಂಡ್
4. ಪೋರ್ಚುಗಲ್ (+1)
5. ಉರುಗ್ವೆ (-1)
6. ಇಟಲಿ
7. ಅರ್ಜೆಂಟೀನಾ
8. ನೆದರ್ಲೆಂಡ್
9. ಕ್ರೋಷಿಯಾ
10. ಡೆನ್ಮಾರ್ಕ್
11. ಗ್ರೀಸ್ (+1)
12. ಬ್ರೆಜಿಲ್ (+1)
13. ರಷ್ಯಾ (-2)
14. ಚಿಲಿ (+1)
15. ಫ್ರಾನ್ಸ್ (-1)
16. ಐವರಿ ಕೋಸ್ಟ್
17. ಈಕ್ವೆಡರ್ (+3)
18. ಸ್ವೀಡನ್ (-1)
19. ಜೆಕ್ ರಿಪಬ್ಲಿಕ್
20. ಸ್ವಿಜರ್ಲೆಂಡ್ (+3)

English summary
England have retained their position at number three while Uruguay dropped down to fifth place in the latest FIFA rankings released on Wednesday(Sep.5). Inspite of winning Nehru Cup India is placed at 169.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X