ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬಾಮಾ ಬಿಟ್ಟರೆ ಅಮೆರಿಕಕ್ಕೆ ಆಪತ್ತು : ಕ್ಲಿಂಟನ್

By Mahesh
|
Google Oneindia Kannada News

Bill Clinton
ಚಾರ್ಲೋಟ್‌(ಉತ್ತರ ಕರೋಲಿನಾ), ಸೆ.6: ಬರಾಕ್ ಒಬಾಮಾ ಅಮೆರಿಕದ ಅದ್ಭುತ ಆಡಳಿತಗಾರ, ಆತನನ್ನು ಕಳೆದುಕೊಂಡರೆ ನಮಗೆ ಆಪತ್ತು. ಮುಂಬರುವ ಚುನಾವಣೆಯಲ್ಲಿ ಅವರೇ ನಮ್ಮ ಅಭ್ಯರ್ಥಿ ಎಂದು ಡೆಮೊಕ್ರೆಟಿಕ್ ಪಕ್ಷ ಮುಖಂಡ, ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರು ಘೋಷಿಸಿದ್ದಾರೆ.

ಡೆಮೊಕ್ರೆಟಿಕ್ ನ್ಯಾಷನಲ್ ಕನ್ವೇಂಷನ್ (DNC) ಮೊದಲ ದಿನ ಒಬಾಮಾ ಪತ್ನಿ ಮಿಚೆಲ್ ಒಬಾಮಾ ಅವರ ಭಾಷಣದಿಂದ ಪುಳಕಿತರಾಗಿದ್ದ ಅಮೆರಿಕ ಜನತೆಗೆ ಗುರುವಾರ(ಸೆ.6) ಬಿಲ್ ಕ್ಲಿಂಟನ್ ಮತ್ತಷ್ಟು ಹುರುಪು ತುಂಬಿದರು.

ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಆಡಳಿತಾರೂಢ ಡೆಮೊಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಹಾಲಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ವಿರೋಧಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮಿಟ್ ರೋಮ್ನಿ ಅವರ ನಡುವೆ ಸಮಬಲದ ಸ್ಪರ್ಧೆ ಏರ್ಪಡಲಿದೆ ಎಂದು ಸಮೀಕ್ಷೆ ಹೊರ ಬಿದ್ದ ನಂತರ ಡೆಮೊಕ್ರೆಟಿಕ್ ಪಕ್ಷ ಬಿರುಸಿನ ಪ್ರಚಾರ ಆರಂಭಿಸಿದೆ.

ಕ್ಲಿಂಟನ್ ಭಾಷಣದ ಮುಖ್ಯಾಂಶ:
ಆರ್ಥಿಕ ನೀತಿ: ನಾಲ್ಕು ವರ್ಷದಲ್ಲಿ ಆರ್ಥಿಕ ಕುಸಿತವನ್ನು ಸುಧಾರಿಸುವುದು ಯಾರಿಗೆ ಆಗಲಿ ಕಷ್ಟದ ಕೆಲಸ. ಆದರೆ, ಜನಹಿತ ಸುಧಾರಣೆಗಳನ್ನು ತರುವ ಮೂಲಕ ಒಬಾಮಾ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಕ್ಲಿಂಟನ್ ಹೇಳಿದರು.

ಸಾಲ: ರಾಷ್ಟ್ರೀಯ ಸಾಲವನ್ನು 4 ಟ್ರಿಲಿಯನ್ ಡಾಲರ್ ಗಿಂತ ಕೆಳಗಿಳಿಸಲು ಎದುರಾಳಿ ರಿಪಬ್ಲಿಕ್ ಪಕ್ಷದ ಮಿಟ್ ರೊಮ್ನಿ ಕೊಟ್ಟಿರುವ ಸುಧಾರಣೆ ವಿಧಾನಕ್ಕಿಂತ ಒಬಾಮಾ ವಿಧಾನ ಹೆಚ್ಚು ಸೂಕ್ತ ಹಾಗೂ ಪರಿಣಾಮಕಾರಿಯಾಗಿದೆ. ತೆರಿಗೆ ಹೆಚ್ಚಳದಿಂದ ಸಾಲ ಕಡಿಮೆಯಾಗುವ ಬದಲು ಹೆಚ್ಚಾಗುತ್ತಾ ಹೋಗುತ್ತದೆ ಎಂಬುದು ರೊಮ್ನಿಗೆ ತಿಳಿದಿಲ್ಲ.

ಉದ್ಯೋಗ ಸೃಷ್ಟಿ: ಕಳೆದ 52 ವರ್ಷಗಳಲ್ಲಿ ಡೆಮೊಕ್ರೆಟಿಕ್ ಅಧ್ಯಕ್ಷರು ಹೆಚ್ಚೆಚ್ಚು ಉದ್ಯೋಗ ಸೃಷ್ಟಿಸಿದ್ದಾರೆ. 1961 ರಿಂದ ವೈಟ್ ಹೌಸ್ ರಿಪಬ್ಲಿಕ್ ಅಧೀನದಲ್ಲಿ 28 ವರ್ಷ ಹಾಗೂ ಡೆಮೊಕ್ರೆಟಿಕ್ ಅಧೀನದಲ್ಲಿ 24 ವರ್ಷ ಕಂಡಿದೆ. 66 ಮಿಲಿಯನ್ ಖಾಸಗಿ ವಲಯ ಉದ್ಯೋಗ ಸೃಷ್ಟಿಯಾಗಿದೆ. ಇದರಲ್ಲಿ 42 ಮಿಲಿಯನ್ ಉದ್ಯೊಗ ಡೆಮೊಕ್ರೆಟಿಕ್ ಆಡಳಿತ ಅವಧಿಯಲ್ಲಿ ಸೃಷ್ಟಿಯಾಗಿದ್ದು ಎಂಬುದು ಗಮನಾರ್ಹ.

ಆಟೋ ಕೈಗಾರಿಕೆ: 250,000 ಕ್ಕೂ ಅಧಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಜನರಲ್ ಮೋಟರ್ಸ್, ಕ್ರೈಸ್ಲರ್ ಸೇರಿದಂತೆ ಅನೇಕ ಬೃಹತ್ ಸಂಸ್ಥೆಗಳು ಇದರಲ್ಲಿ ಸೇರಿದೆ. ಈ ಸಂಸ್ಥೆಗಳು ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿದ್ದಾಗ ಕೈ ಹಿಡಿದು ಮೇಲಕ್ಕೆತ್ತಿದ್ದು ಒಬಾಮಾ ಅವರೇ ಹೊರರೂ ರೊಮ್ನಿ ಅಲ್ಲ. ಈ ಕ್ಷೇತ್ರದಲ್ಲಿ ಒಬಾಮಾ ಸ್ಕೋರ್ 250,000 ಅದರೆ, ರೊಮ್ನಿ 0

ಆರೋಗ್ಯ ಕ್ಷೇತ್ರ: ಕಾನೂನಿನ ಪ್ರಕಾರ ಪೋಷಕರ ವಿಮೆ ಪಾಲಿಸಿಯ ಫಲವನ್ನು 19 ರಿಂದ 25 ವರ್ಷದೊಳಗಿನ ಮಕ್ಕಳು ಕೂಡಾ ಪಡೆಯಬಹುದು. 1 ಬಿಲಿಯನ್ ಡಾಲರ್ ವಿಮೆ ರಿಫಂಡ್ ನಲ್ಲಿ ತೊಡಗಿಸಲಾಗಿದೆ. ಜನರ ಸುರಕ್ಷತೆಗೆ ನಮ್ಮ ಪಕ್ಷ ಬದ್ಧವಾಗಿದೆ. ಒಬಾಮಾ ಅವರ ಮೆಡಿಕೇರ್ ನಿಯಮಗಳು ಶ್ಲಾಘನೀಯ.

ಭಾರತೀಯ ಮೂಲದ ಮತದಾರರನ್ನು ಓಲೈಸುವಲ್ಲಿ ಎರಡು ಪಕ್ಷಗಳು ನಿರತವಾಗಿವೆ. ಭಾರತದೊಂದಿಗಿನ ದೀರ್ಘಾವಧಿ ಮೈತ್ರಿಯನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದು ಚಾರ್ಲೋಟ್‌ನಲ್ಲಿ ಮಂಗಳವಾರವಷ್ಟೇ ಚುನಾವಣಾ ಪ್ರಚಾರ ಆರಂಭಿಸಿರುವ ಡೆಮೊಕ್ರಟಿಕ್ ಪಕ್ಷ ತಿಳಿಸಿದೆ.

ಭಾರತೀಯ ಮೂಲದವರಾದ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಕಮಲಾ ಡಿ.ಹ್ಯಾರಿಸ್ ,ಹಾಲಿವುಡ್ ನಟ ಕಲ್ ಪೆನ್ , ಅಮೆರಿಕದ ಜನಪ್ರತಿನಿಧಿಗಳ ಸಭೆಗೆ ಬಹುತೇಕ ಆಯ್ಕೆಯಾಗಲಿರುವ ಹಿಂದೂ ಧರ್ಮ ಅನುಯಾಯಿ ತುಳಸಿ ಗಬ್ಬಾರ್ಡ್ DNC ಪ್ರಚಾರ ಸಭೆಯಲ್ಲಿ ಒಬಾಮ ಪರ ಮತ ಯಾಚಿಸಿದ್ದಾರೆ.

ಅಮೆರಿಕದ ರಾಷ್ಟ್ರೀಯ ಸಾಲ 16 ಲಕ್ಷ ಕೋಟಿ ಡಾಲರ್‌ನಷ್ಟು ಹೆಚ್ಚಿದ್ದು, ಇದೇ ವಿಷಯವನ್ನು ರಿಪಬ್ಲಿಕನ್ ಪಕ್ಷ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ.

English summary
Former US President Bill Clinton to render his support during DNC for the first African American President of the US. He declared, "I want Barack Obama to be the next president of the United States and I proudly nominate him to the standard bearer of the Democratic Party."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X