• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದಲ್ಲಿ ವರ್ಣರಂಜಿತ ಸಿಗರೇಟ್‌ ಪ್ಯಾಕ್‌ಗೆ ಹೊಗೆ

By Srinath
|

ನವದೆಹಲಿ, ಸೆ. 6: ಭಾರತದಲ್ಲಿ ಸಿಗರೇಟ್ ಸೇದುವ ಅಭ್ಯಾಸಕ್ಕೆ ಅತ್ಯಗತ್ಯವಾಗಿ ತಣ್ಣೀರೆರಚಲು ಕೇಂದ್ರ ಸರಕಾರ ಮುಂದಾಗಿದೆ. ಆಸ್ಟ್ರೇಲಿಯಾದ ಮಾದರಿಯಲ್ಲಿ ಸಾಗಿರುವ ಭಾರತ ಸರಕಾರವು ದೇಶದಲ್ಲಿ ಸಿಗರೇಟ್ ಪ್ಯಾಕ್‌ಗಳನ್ನು ಬಣ್ಣಬಣ್ಣವಾಗಿ ಮುದ್ರಿಸಿ, ಆಕರ್ಷಕಗೊಳಿಸುವುದಕ್ಕೆ ಕಡಿವಾಣ ಹಾಕುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.

ಆಸ್ಟ್ರೇಲಿಯಾದಲ್ಲಿ ಏನಾಗಿದೆಯೆಂದರೆ ಸಿಗರೇಟ್‌ ಪ್ಯಾಕ್‌ ಅನ್ನು ಆಕರ್ಷಿತವಲ್ಲದ ರೀತಿಯಲ್ಲಿ ಮುದ್ರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಅಂದರೆ ಸಿಗರೇಟ್‌ ಪ್ಯಾಕ್‌ಗಳನ್ನು ಬಣ್ಣಬಣ್ಣವಾಗಿ ಮುದ್ರಿಸುವುದಕ್ಕೆ ನಿಷೇಧ ಹೇರುವ ಚಿಂತನೆ ನಡೆಸಿದೆ. ಜತೆಗೆ, ಸಿಗರೇಟ್‌ ಸೇವನೆ ಆರೋಗ್ಯಕ್ಕೆ ಹಾನಿಕರ ಎಂಬ ಚಿತ್ರಸಹಿತ ಸಂದೇಶವನ್ನು ದೊಡ್ಡದಾಗಿ ಪ್ರಕಟಿಸುವುದನ್ನು ಕಡ್ಡಾಯ ಮಾಡಲಾಗಿದೆ. ಈ ನಿಯಮಗಳು ಇದೇ ಡಿಸೆಂಬರಿನಿಂದ ಜಾರಿಗೆ ಬರಲಿದೆ.

ಆಸ್ಟ್ರೇಲಿಯಾ ಸರ್ಕಾರದ ತಂದಿರುವ ಈ ಕಠಿಣ ಕಾನೂನು ಇಡೀ ವಿಶ್ವದ ಗಮನ ಸೆಳೆದಿದೆ. ಅಂತೆಯೇ ಈ ವಿಷಯವು ಭಾರತದ ಆರೋಗ್ಯ ಸಚಿವಾಲಯದ ಗಮನವನ್ನೂ ಸೆಳೆದಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲೂ ಇಂತಹ ಕಾನೂನು ಜಾರಿಗೆ ತರುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯಲ್ಲಿನ ತಂಬಾಕು ನಿಯಂತ್ರಣ ವಿಭಾಗದ ನಿರ್ದೇಶಕ ಅಮಲ್‌ ಪುಷ್ಪ್ ಹೇಳಿದ್ದಾರೆ.

ಈ ಸಿಗರೇಟ್‌ ಪ್ಯಾಕ್‌ಗಳನ್ನು ಬಣ್ಣಬಣ್ಣವಾಗಿ ಮುದ್ರಿಸಿ, ಉತ್ತಮ ಗುಣಮಟ್ಟದ ಪ್ಯಾಕಿಂಗ್‌ ನಲ್ಲಿ ಮಾರಾಟ ಮಾಡಿದಾಗ ಏನಾಗುತ್ತದೆಂದರೆ ಯುವಜನತೆಗೆ 'ಅಂತಹ ಚಿತ್ತಾಕರ್ಷಕ ಸಿಗರೇಟನ್ನೇಕೆ ಟ್ರೈ ಮಾಡಬಾರದು?' ಎನಿಸುವಷ್ಟು ಅದರತ್ತ ಆಕರ್ಷಣೆ ಉಂಟಾಗುತ್ತದೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಸಿಗರೇಟ್‌ ಪ್ಯಾಕ್‌ಗಳನ್ನು ಬಣ್ಣಬಣ್ಣವಾಗಿ ಮುದ್ರಿಸುವುದಕ್ಕೆ ಆಸ್ಟ್ರೇಲಿಯಾ ಮಾದರಿಯನ್ನನುಸರಿಸಿ ಅದಕ್ಕೆ ನಿಷೇಧ ಹೇರುವ ಬಗ್ಗೆ ಚಿಂತನೆ ನಡೆಸಿದೆ. ಆಸ್ಟ್ರೇಲಿಯಾ ಸರ್ಕಾರದ ತಂದಿರುವ ಈ ಕಠಿಣ ಕಾನೂನು ಇಡೀ ವಿಶ್ವದ ಗಮನ ಸೆಳೆದಿದೆ.

English summary
India mulls plain packaging of cigarettes. INDIA is considering plain packaging of cigarettes in line with new Australian laws that ban all logos and brand descriptions, says Amal Pushp, director of tobacco control at the health ministry in New Delhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more