ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

24 ಸಾವಿರ ಕೋಟಿ ತಾನೇ ಕೊಡೋಣ ಬಿಡಿ: ಸಹಾರಾ

By Mahesh
|
Google Oneindia Kannada News

Subrata Roy
ನವದೆಹಲಿ, ಸೆ.3: ಸುಪ್ರೀಂಕೋರ್ಟ್ ನೀಡಿದ ಆಘಾತಕಾರಿ ತೀರ್ಪಿಗೆ ಸೋಮವಾರ(ಸೆ.3) ಪ್ರತಿಕ್ರಿಯಿಸಿರುವ ಸಹಾರಾ ಪರಿವಾರದ ಮುಖ್ಯಸ್ಥ ಸುಬ್ರತೋ ರಾಯ್, ತನ್ನ ಹೂಡಿಕೆದಾರರ ಹಿತ ಕಾಯುವುದಾಗಿ ಹೇಳಿದ್ದಾರೆ. ಎಲ್ಲಾ ಹೂಡಿಕೆ ಸುರಕ್ಷಿತವಾಗಿದೆ ಎಂದು ಪ್ರಮುಖ ದಿನ ಪತ್ರಿಕೆಗಳಲ್ಲಿ ಒಂದು ಪುಟದ ಜಾಹೀರಾತು ನೀಡಿದ್ದಾರೆ.

ಭಾರತ ಮಾತಾ ಚಿತ್ರದ ಜೊತೆಗೆ emotionally speaking ಎಂಬ ತಲೆ ಬರಹದೊಂದಿಗೆ ಆರಂಭವಾಗುವ ಈ ಸಮಜಾಯಿಷಿ ಜಾಹೀರಾತಿನಲ್ಲಿ ನೀವು ಹೂಡಿರುವ 24000ಕ್ಕೂ ಅಧಿಕ ಕೋಟಿ ರು ಸುರಕ್ಷಿತವಾಗಿದೆ. ಒಂದೇ ಒಂದು ದಿನದ ವಿಳಂಬವಿಲ್ಲದೆ ಹಣ ಹಿಂತಿರುಗಿಸಲು ಸಹಾರಾ ಸಿದ್ಧವಿದೆ ಎಂದು ಹೇಳಲಾಗಿದೆ.

ಸಹರಾ ಪರಿವಾರ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿಯ ಕಾನೂನು ಉಲ್ಲಂಘಿಸಿ ಹೂಡಿಕೆ ಸಂಗ್ರಹಿಸಿದೆ. ತನ್ನ ಹೂಡಿಕೆದಾರರಿಗೆ 24,000 ಕೋಟಿ ಹೂಡಿಕೆಯನ್ನು ಶೇ. 15 ಬಡ್ಡಿಯೊಂದಿಗೆ ಹಿಂತಿರುಗಿಸತಕ್ಕದ್ದು ಎಂದು ಶುಕ್ರವಾರ ಸುಪ್ರೀಂಕೋರ್ಟ್ ನೀಡಿತ್ತು.

ಕಂಪನಿಯು ನಿಯಮಗಳನ್ನು ಉಲ್ಲಂಘಿಸಿ ಸಂಗ್ರಹಿಸಿದ್ದ ರೂ. 24,000 ಕೋಟಿ ಹೂಡಿಕೆಯನ್ನು ಶೇ. 15 ಬಡ್ಡಿಯೊಂದಿಗೆ ಹಿಂದಿರುಗಿಸುವಂತೆ ಸುಪ್ರೀಂ ಕೋರ್ಟ್ ಸಹರಾ ಪರಿವಾರಕ್ಕೆ ಆದೇಶಿಸಿತ್ತು. ಭಾರತೀಯ ಶೇರು ಮಾರುಕಟ್ಟೆ ನಿಯಂತ್ರಣ ಮಂಡಳಿ (ಸೆಬಿ) ನಿಯಮಗಳಿಗೆ ವಿರುದ್ಧವಾಗಿ ರೂ. 24,029 ಕೋಟಿ ರೂ. ಸಂಗ್ರಹಿಸಿದ್ದ ಸಹರಾ ಗ್ರೂಪ್ ಸಂಕಷ್ಟಕ್ಕೆ ಸಿಲುಕಿಕೊಂಡಿತ್ತು. 2008 ಮತ್ತು 2011ರ ನಡುವೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗದಿರುವ ತನ್ನ ಎರಡು ಕಂಪನಿಗಳ ಮೂಲಕ ರೂ. 24,029 ಕೋಟಿ ನಿಯಮ ಉಲ್ಲಂಘಿಸಿ ಸಂಗ್ರಹಿಸಲಾಗಿತ್ತು.

ಸಹಾರ ಹೌಸಿಂಗ್ ಇನ್ವೆಸ್ಟ್ ಮೆಂಟ್ ಕಾರ್ಪೊರೇಶನ್ ಮತ್ತು ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಶನ್ ಮೂಲಕ ಠೇವಣಿದಾರರು ತಮಗೆ ಅಗತ್ಯವಿದ್ದಾಗ ಪರಿವರ್ತಿಸಬಹುದಾದ ಒಎಫ್ ಸಿಡಿ ಬಾಂಡ್ ಗಳನ್ನು ವಿತರಿಸುವ ಮೂಲಕ ಈ ನಿಧಿ ಸಂಗ್ರಹಿಸಲಾಗಿತ್ತು. ಠೇವಣಿ ಸಂಗ್ರಹಣೆಯ ಸ್ಪಷ್ಟ ಉದ್ದೇಶವನ್ನು ಕಂಪನಿ ಸ್ಪಷ್ಟವಾಗಿ ತಿಳಿಸಿರಲಿಲ್ಲ.

ಹೂಡಿಕೆದಾರರ ಠೇವಣಿಗೆ ಯಾವುದೇ ಖಾತರಿಯನ್ನು ಈ ಬಾಂಡ್ ಗಳು ನೀಡಿರಲಿಲ್ಲ. ಈ ವಹಿವಾಟಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕಂಪೆನಿ ಮರೆಮಾಚಿತ್ತು.

ಕಂಪನಿಯ ಈ ವಹಿವಾಟು ಸೆಬಿ ನಿಯಮಕ್ಕೆ ವಿರುದ್ಧವಾಗಿದೆ. 50ಕ್ಕಿಂತಲೂ ಹೆಚ್ಚು ಜನರಿಂದ ಠೇವಣಿ ಸಂಗ್ರಹಿಸಬೇಕಾದಲ್ಲಿ ಸೆಬಿ ಅನುಮತಿ ಕೇಳಬೇಕಾಗುತ್ತದೆ. ಠೇವಣಿದಾರರ ಹಣಕ್ಕೆ ಸೂಕ್ತ ಭದ್ರತೆ ಒದಗಿಸುವುದರೊಂದಿಗೆ ಎಲ್ಲ ದಾಖಲೆಗಳನ್ನು ನೀಡಬೇಕು. ಆದರೆ ಈ ನಿಯಮಗಳನ್ನು ಉಲ್ಲಂಘಿಸಿ ಸಹರಾ ಠೇವಣಿ ಸಂಗ್ರಹಿಸಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಭದ್ರತಾ ಮೇಲ್ಮನವಿ ಪ್ರಾಧಿಕಾರ, ಠೇವಣಿಗಳನ್ನು ಶೇ. 15ರ ಬಡ್ಡಿ ಸಮೇತ ಮರುಪಾವತಿಸಲು ಕಳೆದ ವರ್ಷ ಆದೇಶಿಸಲಾಗಿತ್ತು. ಆದರೆ ತೀರ್ಪನ್ನು ಪ್ರಶ್ನಿಸಿ ಸಹರಾ ಗ್ರೂಪ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ಕೋರ್ಟ್ ಇದೇ ತೀರ್ಪನ್ನು ಎತ್ತಿಹಿಡಿದಿತ್ತು.

ಆದರೆ, ಸುಪ್ರೀಂ ತೀರ್ಪಿಗೆ ತಲೆಬಾಗಿರುವ ಸಹಾರಾ ಸಂಸ್ಥೆ ಎಲ್ಲಾ ಹಣ ಹಿಂತಿರುಗಿಸುವ ಭರವಸೆ ನೀಡಿರುವುದು ಅಚ್ಚರಿ ಮೂಡಿಸಿದೆ. ಹೂಡಿಕೆದಾರರು ಬೇನಾಮಿ ಎಂದು ತಿಳಿದು ಬಂದರೆ ಎಲ್ಲಾ ಹಣ ಕೇಂದ್ರ ಸರ್ಕಾರದ ಪಾಲಾಗಲಿದೆ.

ಕಳೆದ 33 ವರ್ಷಗಳಲ್ಲಿ ಒಂದೇ ಒಂದು ಬೇನಾಮಿ ಖಾತೆ, ಹಣಕಾಸು ಅವ್ಯವಹಾರ ಕಾಣದೆ 12 ಕೋಟಿಗೂ ಅಧಿಕ ಹೂಡಿಕೆದಾರರನ್ನು ಸೃಷ್ಟಿಸಿದ ಸಹಾರಾ ಸಂಸ್ಥೆ ಎದೆಗುಂದದಿರುವುದು ಕುತೂಹಲಕಾರಿಯಾಗಿದೆ.

English summary
The Sahara group chairman Subrata Roy today(Sep.3) assured Sahara Pariwar depositors and investors that their money is safe and there will not be any delay in payment commitment from its side. The group also claimed that in the last 33 years there is not a single complaint of non-payment, whereas it had paid around Rs.1,40,000 crores maturity/redemption against the enrollment of around 12 crores investors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X