ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಂಕಿತ ಉಗ್ರರ ಪಟ್ಟಿ, & ಹಾಕಿರುವ ಕೇಸುಗಳು

By Mahesh
|
Google Oneindia Kannada News

Suspected Terrorists Details Bangalore
ಬೆಂಗಳೂರು, ಸೆ.2: ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ಸಿಸಿಬಿ ಪೊಲೀಸರು ಶಂಕಿತ ಉಗ್ರರ ಜಾಲವನ್ನು ಬಹುತೇಕ ಕತ್ತರಿಸಿ ಹಾಕಿದ್ದಾರೆ. ಸುಮಾರು 20 ಜನರ ತಂಡಕ್ಕೆ ತರಬೇತಿ ನೀಡಲಾಗಿದ್ದು, ಎಲ್ಲರೂ ಲಷ್ಕರ್ ಇ ತೋಯ್ಬಾ, ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿಕ್ ಸಂಘಟನೆ ಸಂಪರ್ಕಿತರನ್ನು ಸೆರೆ ಹಿಡಿಯಲಾಗಿದೆ. ಆದರೆ, ಈ 20 ರ ತಂಡ 150ಕ್ಕೂ ವಿದ್ಯಾರ್ಥಿಗಳ ತಲೆಯಲ್ಲಿ ವಿಷಬೀಜ ಬಿತ್ತಿರುವ ಆತಂಕದ ಸಂಗತಿ ಹೊರ ಬಿದ್ದಿದೆ.

ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಭಟ್ಕಳ, ಮಹಾರಾಷ್ಟ್ರ, ಹೈದರಾಬಾದ್ ಮುಂತಾದೆಡೆ ಜಾಲ ಹೊಂದಿದ್ದ ಈ ಬಂಧಿತರು ನಗರ ಅನೇಕ ಕಾಲೇಜಿನ ಅಯ್ದ ವಿದ್ಯಾರ್ಥಿಗಳನ್ನು ಉಗ್ರವಾದದತ್ತ ಆಕರ್ಷಿಸುವಂತೆ ಮಾಡುವಲ್ಲಿ ಸಫಲರಾಗಿದ್ದರು ಎಂಬುದು ತಿಳಿದು ಬಂದಿದೆ.

ಆದರೆ, ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ತಾಳ್ಮೆಯಿಂದ ವರ್ತಿಸಬೇಕು, ಉಗ್ರರನ್ನು ಮಟ್ಟ ಹಾಕಲು ನಮ್ಮ ಪೊಲೀಸ ಪಡೆ ಕಂಕಣ ತೊಟ್ಟಿದೆ. ಸಾರ್ವಜನಿಕರು ಸಹಕಾರ ನೀಡಿದರೆ ಸಾಕು ಎಂದು ನಗರ ಪೊಲೀಸ್ ಅಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಬಂಧಿತ ಶಂಕಿತ ಉಗ್ರರ ಪಟ್ಟಿ :
* ಮಹಮ್ಮದ್ ಅಕ್ರಂ ಅಲಿಯಾಸ್ ಇಮ್ರಾನ್
* ಉಬೇದುಲ್ಲಾ ರೆಹಮಾನ್ ಅಲಿಯಾಸ್ ಇರ್ಶಾದ್ ಮಹಮದ್
* ಮತಿ ಉರ್ ರೆಹಮಾನ್ ಸಿದ್ಧಿಕಿ, [ಪತ್ರಕರ್ತ, 26 ವರ್ಷ]
* ಇಜಾಜ್ ಮಹಮ್ಮದ್ ಮಿರ್ಜಾ, [ಡಿಆರ್ ಡಿಒದಲ್ಲಿ ಜ್ಯೂ. ವಿಜ್ಞಾನಿ, 25 ವರ್ಷ]
* ಶೋಯಿಬ್ ಅಹ್ಮದ್ ಮಿರ್ಜಾ ಅಲಿಯಾಸ್ ಛೋಟು, [ಎಂಸಿಎ ಪದವೀಧರ, 25 ವರ್ಷ]
* ಮೊಹಮ್ಮದ್ ಯೂಸುಫ್ ನಾಲಬಂದ್, [ಸೇಲ್ಸ್ ಮನ್, 28 ವರ್ಷ]
* ರಿಯಾಜ್ ಅಹಮ್ಮದ್ ಬ್ಯಾಹಟ್ಟಿ, ಬಿಸಿಎ ಪದವೀಧರ, [ಸೇಲ್ಸ್ ಮನ್, 28 ವರ್ಷ]
* ಒಬೇದುಲ್ಲಾ ಅಲಿಯಾಸ್ ಇಮ್ರಾನ್ ಬಹದ್ದೂರ್ ಅಲಿಯಾಸ್ ಸಮೀರ್, [ವಿದ್ಯಾರ್ಥಿ, 24 ವರ್ಷ]
* ಮೊಹಮ್ಮದ್ ಸಾಧಿಕ್ ಲಷ್ಕರ್ ಅಲಿಯಾಸ್ ರಾಜು, [28 ವರ್ಷ]
* ವಾಹಿದ್ ಹುಸೇನ್ ಅಲಿಯಾಸ್ ಸಾಹಿಲ್, [26 ವರ್ಷ]
* ಬಾಬಾ ಅಲಿಯಾಸ್ ಮೆಹಬೂಬ್ ಬಾಗಲಕೋಟೆ, [26 ವರ್ಷ]
* ಡಾ. ಜಾಫರ್ ಇಕ್ಬಾಲ್ ಸೋಲಾಪುರ್, [27 ವರ್ಷ]
* ಅಬ್ದುಲ್ಲಾ ಅಲಿಯಾಸ್ ಅಬ್ದುಲ್ ಹಕೀಂ, [25 ವರ್ಷ]

ಉಳಿದಂತೆ ಮಹಾರಾಷ್ಟ್ರದಲ್ಲಿ ನಾಲ್ವರು, ಚಿಕ್ಕಮಗಳೂರಿನ ಕೊಪ್ಪದಲ್ಲಿ ಒಬ್ಬ ಶಂಕಿತ ಉಗ್ರನ ಬಂಧನವಾಗಿದ್ದು, ಅವರ ಗುರುತು ಪರಿಚಯದ ವಿವರಗಳನ್ನು ಸಿಸಿಬಿ ಪೊಲೀಸರು ಹೊರ ಹಾಕಿಲ್ಲ. ಬಿಜಾಪುರ, ಬಾಗಲಕೋಟೆಗಳಲ್ಲೂ ಶಂಕಿತ ಉಗ್ರರ ಬಂಧನದ ಸುದ್ದಿ ಟಿವಿ ಮಾಧ್ಯಮಗಳನ್ನು ಕಾಣಿಸಿಕೊಂಡಿದ್ದರೂ ಪೊಲೀಸರು ಇನ್ನೂ ಸ್ಪಷ್ಟಪಡಿಸಿಲ್ಲ. [ಟಾರ್ಗೆಟ್ ಸ್ಥಳ ಪಟ್ಟಿ]

ಪ್ರಕರಣಗಳು: ಶಂಕಿತ ಉಗ್ರರ ಮೇಲೆ ಬೆಂಗಳೂರು ನಗರ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ Cr.No.384/12 u/s 120(B), 121, 121(A), 122, 123, 153 (A), 307, 379 IPC, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959ರ ಸೆಕ್ಷನ್. 3 ಹಾಗು 25 ಮತ್ತು ವಿಧ್ವಂಸಕ ಕೃತ್ಯ(ತಡೆ) ಕಾಯ್ದೆ 1967ರ ಅಡಿಯಲ್ಲಿ ಸೆಕ್ಷನ್ 10, 12, 13, 15, 16 & 18 ನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಂಕಿತ ಉಗ್ರರ ವಿಚಾರಣೆ ಜಾರಿಯಲ್ಲಿದ್ದು, ವಿಚಾರಣೆ ಬಳಿಕ ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.

ವಶವಾದ ವಸ್ತುಗಳು: ಎರಡು 7.65 mm ಪಿಸ್ತೂಲ್ 7 cartridges, 16 ಮೊಬೈಲ್, 8 ಸಿಮ್, 4 ಎಟಿಎಂ ಕಾರ್ಡ್, 3 ಪೆನ್ ಕಾರ್ಡ್, 2 ಲ್ಯಾಪ್ ಟಾಪ್, 1 ಹೀರೋ ಹೋಂಡಾ ಸ್ಪ್ಲೈಂಡರ್, 1 dragger, 7 ಜಿಹಾದಿ ಪುಸ್ತಕಗಳು, 2o ಚೆನ್ನೈ ನಕಾಶೆ, 1 ಭಾರತದ ಭೂಪಟ, 1 ಇರಾನ್ ಮ್ಯಾಪ್, ಕೆಲವು ಉರ್ದು ಪತ್ರಿಕೆಗಳು ಹಾಗೂ 1,500 ರು.ನಗದು ಮೊದಲ ಹಂತದ ಬೇಟೆಯಲ್ಲಿ ಸಿಕ್ಕಿದೆ. ಮಿಕ್ಕ ವಿವರಗಳನ್ನು ನಿರೀಕ್ಷಿಸಲಾಗಿದೆ.

English summary
Bangalore city commissioner Jyoti Prakash Mirji has given assurance to Bangaloreans not to worry about the security and terror threat. CCB police have almost clearing the network set up by terrorist in Karnataka and advised students not to listen to strangers
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X