ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಐಸಿಗೆ ಸೆ.1ರಂದು ಹುಟ್ಟುಹಬ್ಬದ ಸಂಭ್ರಮ

By Prasad
|
Google Oneindia Kannada News

LIC celebrating 56th birthday
ಅರ್ಧ ಶತಮಾನದಿಂದ ಭಾರತೀಯರ ಜೀವರಕ್ಷೆಯಾಗಿರುವ ಭಾರತೀಯ ಜೀವವಿಮಾ ನಿಗಮ ಸೆಪ್ಟೆಂಬರ್ 1ರಂದು 56ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ಎಲ್ಐಸಿ ಸ್ಥಾಪಿತವಾಗಿದ್ದು 1956ರ ಸೆ.1ರಂದು. ಜನರ ದುಡ್ಡನ್ನೇ ಬಳಸಿ ಎಲ್ಐಸಿ ಪಾಲಿಸಿದಾರರ ಕಲ್ಯಾಣಕ್ಕಾಗಿ ಮತ್ತು ಸಮಾಜದ ಒಳಿತಿಗಾಗಿ ದುಡಿಯುವುದು ಜೀವವಿಮಾ ನಿಗಮದ ಮುಖ್ಯ ಉದ್ದೇಶ. ಈ ಶುಭಸಂದರ್ಭದಲ್ಲಿ 'ಜೀವನ ದೀಪ್' ಎಂಬ ಮೈಕ್ರೋ ಇನ್ಶೂರನ್ಸ್ ಪ್ರಾಡಕ್ಟ್ ಅನ್ನು ಆರಂಭಿಸಲಾಗುತ್ತಿದೆ.

2011-12ರಲ್ಲಿ 357 ಲಕ್ಷ ಪಾಲಿಸಿ ಹೊಸ ಪಾಲಿಸಿಗಳನ್ನು ಮಾರಾಟ ಮಾಡಲಾಯಿತು. ಇದು ವಿಮಾ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾದ ಎಲ್ಲ ಹೊಸ ಪಾಲಿಸಿಗಳಲ್ಲಿ ಶೇ.80.9ರಷ್ಟು ಎಲ್ಐಸಿಯದಾಗಿದೆ. ಒಟ್ಟಾರೆ 81,514.49 ಕೋಟಿ ರು.ನಷ್ಟು ಆದಾಯ ಈ ಪಾಲಿಸಿಗಳಿಂದ ಬಂದಿದ್ದು, 38,955.06 ಕೋಟಿ ರು.ನಷ್ಟು ಆದಾಯ ಪಿಂಚಣಿ ಮತ್ತು ಗ್ರೂಪ್ ಇನ್ಶೂರನ್ಸ್‌ನಿಂದ ಬಂದಿದೆ. ಸಾಂಪ್ರದಾಯಿತ ವ್ಯಾಪಾರದಡಿಯಲ್ಲಿ 284.12 ಲಕ್ಷ ಮತ್ತು ಸಾಮಾಜಿಕ ಭದ್ರತಾ ಸ್ಕೀಂ ಅಡಿಯಲ್ಲಿ 94.44 ಲಕ್ಷ ಪಾಲಿಸಿಗಳನ್ನು ಹೊಸ ವಿಮೆ ಮಾಡಲಾಗಿದೆ.

ಕಳೆದ ವರ್ಷದಲ್ಲಿ 185.7 ಲಕ್ಷ ಜನರ 66,022.82 ಕೋಟಿ ರು.ನಷ್ಟು ಹಣವನ್ನು ಸೆಟ್ಲ್ ಮಾಡಲಾಗಿದೆ. ಪಾವತಿಯ ಅವಧಿ ಮುಗಿಯುವ ಮೊದಲೇ ಶೇ.93.19ನಷ್ಟು ಪಾಲಿಸಿಗಳನ್ನು ಸೆಟ್ಲ್ ಮಾಡಲಾಗಿದೆ. ಶೇ.94.34ನಷ್ಟು ಮರಣಾನಂತರದ ಪಾವತಿಗಳನ್ನು ಕೋರಿಕೆಯಾದ 15 ದಿನಗಳೊಳಗೆ ಪಾವತಿ ಮಾಡಲಾಗಿದೆ. ಒಟ್ಟಾರೆಯಾಗಿ 112,911.82 ಕೋಟಿ ರು.ನಷ್ಟು ಹಣವನ್ನು ಕಳೆದ ವರ್ಷ ಹಿಂತಿರುಗಿಸಲಾಗಿದೆ ಎಂದು ಎಲ್ಐಸಿಯ ಪತ್ರಿಕಾ ಪ್ರಕಟಣೆ ಹೇಳಿದೆ.

ಬಡತನ ರೇಖೆಗಿಂತ ಕೆಳಗಿರುವ ಜನರಿಗೆ 'ಜನಶ್ರೀ ಬಿಮಾ ಯೋಜನಾ' ಮತ್ತು 'ಆಮ್ ಆದ್ಮಿ ಬಿಮಾ ಯೋಜನಾ' ಎಂಬ ಎರಡು ಪಾಲಿಸಿಗಳನ್ನು ಸಾಮಾಜಿಕ ಭದ್ರತಾ ಗ್ರೂಪ್ ಸ್ಕೀಂ ಅಡಿಯಲ್ಲಿ ನೀಡಲಾಗುತ್ತಿದೆ. ಜನಶ್ರೀ ಬಿಮಾ ಯೋಜನಾ ಮತ್ತು ಆಮ್ ಆದ್ಮಿ ಬಿಮಾ ಯೋಜನಾ ಪಾಲಿಸಿ ಹೊಂದಿರುವವರ ಮಕ್ಕಳಿಗೆ 'ಶಿಕ್ಷಾ ಸಹಯೋಗ ಯೋಜನಾ' ಎಂಬ ಉಚಿತ ಸ್ಕಾಲರ್ಶಿಪ್ ನೀಡಲಾಗುತ್ತಿದೆ.

ಎಲ್ಐಸಿಯ ಗೋಲ್ಡನ್ ಜ್ಯುಬಿಲಿ ಆಚರಣೆಯ ಅಂಗವಾಗಿ ದೇಶದಾದ್ಯಂತ 211 ಯೋಜನೆಗಳಿಗೆ ಭಾರತೀಯ ಜೀವವಿಮಾ ನಿಗಮ ಬೆಂಬಲ ನೀಡಿದೆ. ಸರಕಾರೇತರ ಸಂಸ್ಥೆಗಳ ಮುಖಾಂತರ ಆರ್ಥಿಕವಾಗಿ ದುರ್ಬಲವಾಗಿರುವ ಜನತೆಗೆ ಹಣಕಾಸು ನೆರವನ್ನು ಒದಗಿಸಿ ಸಾಮಾಜಿಕ ಕಳಕಳಿಯನ್ನು ಎಲ್ಐಸಿ ಮೆರೆದಿದೆ. ಸತತವಾಗಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಎಲ್ಐಸಿ ರೀಡರ್ಸ್ ಡೈಜೆಸ್ಟ್ ಟ್ರಸ್ಟ್ ಬ್ರಾಂಡ್ ಅವಾರ್ಡ್, ಬಿಸಿನೆಸ್ ಸೂಪರ್ ಬ್ರಾಂಡ್ಸ್, ಇಟಿ ಬ್ರಾಂಡ್ ಇಕ್ವಿಟಿ ಅವಾರ್ಡ್ಸ್, ಗೋಲ್ಡನ್ ಪಿಕಾಕ್ - ಇನೋವೇಟಿವ್ ಪ್ರಾಡಕ್ಟ್ ಅವಾರ್ಡ್, ಔಟ್‌ಲುಕ್ ಮನಿ ಅವಾರ್ಡ್ ಮುಂತಾದ ಪ್ರಶಸ್ತಿಗಳನ್ನು ಎಲ್ಐಸಿ ಪಡೆದಿದೆ.

ಅಂದ ಹಾಗೆ, ಎಲ್ಐಸಿ ಪ್ರೀಮಿಯಂ ಸರಿಯಾದ ಸಮಯಕ್ಕೆ ಕಟ್ತಿದ್ದೀರಿ ತಾನೆ?

English summary
Life Insurance Corporation of India turns 56 on 1st September, 2012. One of the objectives of the Corporation is the use of people’s money for people’s welfare and the life funds are deployed for the best advantage of LIC policyholders as well as for the community.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X