ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡರ್ಟಿ ಪಿಕ್ಚರ್ ಎಂಎಂಎಸ್ ಕಳಿಸಿದ್ದಕ್ಕೆ ನೌಕರ ಅಮಾನತು

By Mahesh
|
Google Oneindia Kannada News

Dirty Picture Watching Govt Official Puttur
ಪುತ್ತೂರು, ಆ.31: ಗ್ರಾಮ ಪಂಚಾಯತಿ ನೌಕರನೊಬ್ಬ ತನ್ನ ಕಚೇರಿಯ ಸಹ ಸಿಬ್ಬಂದಿಯನ್ನು ಮೋಹ ಜಾಲಕ್ಕೆ ಸಿಲುಕಿಸಿ, ರಾಸಲೀಲೆ ನಡೆಸಿ, ಎಂಎಂಎಸ್ ಚಿತ್ರೀಕರಿಸಿಕೊಂಡಿದ್ದಾನೆ. ಇದು ಸಾಲದೆಂಬಂತೆ ಎಂಎಂಎಸ್ ತನ್ನ ಸ್ನೇಹಿತರಿಗೂ ಹಂಚಿ, ಇಂಟರ್ನೆಟ್ ನಲ್ಲೂ ಹರಿಯಬಿಟ್ಟಿದ್ದಾನೆ. ಯುವತಿಯ ಮಾನ ಹಾನಿ ಮಾಡಿದ ಈ ಭೂಪ ಪೊಲೀಸರ ಅತಿಥಿಯಾಗಿದ್ದು, ಗ್ರಾಮ ಪಂಚಾಯತಿಯಲ್ಲಿದ್ದ ನೌಕರಿಯನ್ನು ಕಳೆದುಕೊಂಡಿದ್ದಾನೆ.

ಯುವತಿಯ ಮಾನ ಹರಣಗೊಳಿಸಿದ ಪ್ರಕರಣದ ಆರೋಪಿ ಹೆಸರು ಸುಧಾಕರ ನಾಯ್ಕ. ಅರಿಯಡ್ಕ ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಇತ್ತೀಚೆಗೆ ಸಾಮಾಜಿಕ ಜಾಲ ತಾಣಗಳು, ಪೋರ್ನ್ ತಾಣಗಳನ್ನು ಜಾಲಾಡುತ್ತಿದ್ದ. ಈ ತಾಣಗಳಿಗೆ ತಾನು ಒಂದಿಷ್ಟು ಕೊಡುಗೆ ನೀಡಬೇಕು ಎಂಬಂತೆ ನಾಚಿಗೆಗೆಟ್ಟು ತನ್ನ ಕಾಮಲೀಲೆಯ ದೃಶ್ಯಗಳಿದ್ದ ಕ್ಲಿಪಿಂಗ್ ಗಳನ್ನು ಸೇರಿಸಿದ್ದಾನೆ.

ಯುವತಿಯೊಬ್ಬಳೊಂದಿಗೆ ತಾನು ನಡೆಸಿದ ಕೃತ್ಯದ ಅಶ್ಲೀಲ ದೃಶ್ಯವನ್ನು ಮೊಬೈಲ್ ಮೂಲಕ ಚಿತ್ರಿಸಿ, ಬಳಿಕ ಅದನ್ನು ಮೊಬೈಲ್ ಹಾಗೂ ಇಂಟರ್ ನೆಟ್ ಮೂಲಕ ರವಾನಿಸಿದ ತಪ್ಪಿಗೆ ಈಗ ಸುಧಾಕರನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಚೌಟರ ಅಧ್ಯಕ್ಷತೆಯಲ್ಲಿ ಗುರುವಾರ(ಆ.30) ನಡೆದ ಪಂಚಾಯತ್ ಸಮಾನ್ಯ ಸಭೆಯಲ್ಲಿ ಆರೋಪಿ ಸಿಬ್ಬಂದಿ ಸುಧಾಕರ ನಾಯ್ಕನನ್ನು ಸೇವೆಯಿಂದ ವಜಾಗೊಳಿಸುವ ನಿರ್ಣಯ ಕೈಗೊಳ್ಳಲಾಗಿದೆ.

ಅರಿಯಡ್ಕ ಗ್ರಾಮ ಪಂಚಾಯತ್‌ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿದ್ದ ಅರಿಯಡ್ಕ ಗ್ರಾಮದ ಶೇಕಮಲೆ ನಿವಾಸಿ ಸುಧಾಕರ ನಾಯ್ಕ ತನ್ನದೇ ಕಚೇರಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಉದ್ಯೋಗಿಯಾಗಿದ್ದ ಈಶ್ವರಮಂಗಲ ಸಮೀಪದ ಯುವತಿಯೊಬ್ಬಳನ್ನು ತನ್ನ ಕಾಮತೃಷೆಗೆ ಬಳಸಿಕೊಂಡು, ಬಳಿಕ ಆ ದೃಶ್ಯಾವಳಿಯನ್ನು ಮೊಬೈಲ್ ಮೂಲಕ ರವಾನಿಸಿದ್ದಲ್ಲದೆ ಇಂಟರ್‌ನೆಟ್ ಮೂಲಕವೂ ಪಸರಿಸಿ ಯುವತಿಯ ಮಾನ ಹರಾಜು ಹಾಕಿದ್ದ.

ಈ ಪ್ರಕರಣ ಬಯಲಾದ ಹಿನ್ನೆಲೆಯಲ್ಲಿ ಯುವತಿ ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆರೋಪಿ ಸುಧಾಕರ ನಾಯ್ಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಈ ವಿದ್ಯಮಾನದ ಹಿನ್ನೆಲೆಯಲ್ಲಿ ಈ ಹಿಂದೆ ನಡೆದ ಅರಿಯಡ್ಕ ಗ್ರಾಮ ಪಂಚಾಯತ್ ಸಭೆಯಲ್ಲಿ ಆರೋಪಿಯನ್ನು ಸೇವೆಯಿಂದ ಅಮಾನತುಗೊಳಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ.

English summary
Ariyadka Gram Panchayat computer operator Sudhakar Naik arrested by Dakshina Kannada police for allegedly sending the Illicite MMS which had dirty pictures and clippings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X