ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಸೇನೆ ಹೆಲಿಕಾಪ್ಟರ್ ಅಪಘಾತ, 9 ಸಾವು

By Mahesh
|
Google Oneindia Kannada News

ಜಾಮ್ ನಗರ(ಗುಜರಾತ್), ಆ.30: ಭಾರತೀಯ ವಾಯುಸೇನೆಗೆ ಸೇರಿದ ಎರಡು ತರಬೇತಿ ಹೆಲಿಕಾಪ್ಟರ್ ಗಳು ಆಗಸದಲ್ಲಿ ಡಿಕ್ಕಿ ಹೊಡೆದು ಬಹುದೊಡ್ಡ ಅಪಘಾತ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ 9 ಜನ ವಾಯುಸೇನೆ ಸಿಬ್ಬಂದಿಗಳು ಈ ದುರಂತದಲ್ಲಿ ಅಸುನೀಗಿದಾರೆ. MI-175 ಹೆಲಿಕಾಪ್ಟರ್ ಗಳು ತರಬೇತಿ ನಿರತರಾಗಿದ್ದರು.

ಈ ಅಪಘಾತಕ್ಕೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಲಭ್ಯ ಮಾಹಿತಿ ಪ್ರಕಾರ ತರಬೇತಿ ಸಮಯದಲ್ಲಿ ಎರಡು ಕಾಪ್ಟರ್ ಗಳು ಅಪಾಯದ ಮುನ್ಸೂಚನೆ ಮೀರಿ ಹತ್ತಿರವಾಗಿ ಚಲಿಸುತ್ತಿದ್ದದ್ದು ದುರಂತಕ್ಕೆ ಕಾರಣವಾಗಿದೆ.

Air Force choppers in mid-air collision in Guj; 9 dead
ಆಕಾಶದಲ್ಲೇ ಎರಡು ಹೆಲಿ ಕಾಪ್ಟರ್ ಗಳು ಡಿಕ್ಕಿ ಹೊಡೆದು ನೆಲಕ್ಕುರುಳಿದೆ. ಅಪಘಾತದ ಪರಿಣಾಮ ಕಾಪ್ಟರ್ ಗಳಿಗೆ ಬೆಂಕಿ ಹತ್ತಿಕೊಂಡು ಬೆಂಕಿಯುಂಡೆಯಂತೆ ನೆಲಕ್ಕುರಳಿದವು. ಎರಡು ಹೆಲಿಕಾಪ್ಟರ್ ಪೈಲಟ್ ಗಳು ಇನ್ನೂ ತರಬೇತಿ ಹಂತದಲ್ಲಿದ್ದರು. ನುರಿತ ಪೈಲಟ್ ಗಳಾಗಿರಲಿಲ್ಲ ಎಂದು ತಿಳಿದುಬಂದಿದೆ.

ಘಟನೆ ಬಗ್ಗೆ ತಿಳಿದ ತಕ್ಷಣ ಹಿರಿಯ IAF ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ನಂದಿಸಲಾಗಿದ್ದು, ಶವಗಳನ್ನು ಹೊರ ತೆಗೆಯಲಾಗಿದೆ. ಭಾರತೀಯ ವಾಯುಸಸೇನೆಗೆ ಸೇರಿರುವ ಎರಡು ಹೆಲಿಕಾಪ್ಟರ್ ಗಳ ಅಪಘಾತದ ನಿಖರ ಕಾರಣ ಹಾಗೂ ಹೆಚ್ಚಿನ ಮಾಹಿತಿ ತಿಳಿಯಲು ಕಾಪ್ಟರ್ ಗಳಲ್ಲಿದ್ದ ಬ್ಲಾಕ್ ಬಾಕ್ಸ್ ಗಳನ್ನು ಪಡೆಯಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

English summary
Two Indian Air Force choppers were involved in a mid-air collision near Jamnagar in Gujarat. Initial reports suggest that 9 AIF personnel died in the crash. The copters involved were MI-17s.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X