ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಸ್ತುಗೆ ಅಂಜಿ ವಿಧಾನಸೌಧಕ್ಕೆ ಗಡಪಾರಿಯಿಟ್ಟ ಶಾಸಕ

By Srinath
|
Google Oneindia Kannada News

ಬೆಂಗಳೂರು, ಆ. 29: ಶಾಸಕ ಮಹಾಶಯನೊಬ್ಬ ತನಗೆ ಅಧಿಕಾರ ಬಂದ ಕಾಲಕ್ಕೆ ವಾಸ್ತುಗೆ ಅಂಜಿ ವಿಧಾನಸೌಧಕ್ಕೇ ಗಡಪಾರಿಯಿಕ್ಕಿದ ಘಟನೆ ನಡೆದಿದೆ. ಇದ ಕಂಡು ಚಿರನಿದ್ರೆಯಲ್ಲಿರುವ ವಿಧಾನಸೌಧದ ಶಿಲ್ಪಿ ಕೆಂಗಲ್ ಹನುಮಂತಯ್ಯ ಸಮಾಧಿಯಲ್ಲಿ ಮಗ್ಗಲು ಬದಲಿಸಿರಲೂಬಹುದು.

ಯಡಿಯೂರಪ್ಪನವರ ಆಣತಿಯಂತೆ ಧಾರವಾಡ ನವಲಗುಂಡ ಕ್ಷೇತ್ರದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಅವರನ್ನು ಸನ್ಮಾನ್ಯ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ತಮ್ಮ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಂಡಿದ್ದೇ ಬಂತು ಅಧಿಕಾರದ ಗದ್ದುಗೆಗೇರುವ ಭರದಲ್ಲಿ ಶಾಸಕ ಶಂಕರ ಪಾಟೀಲರು ವಿಧಾನಸೌಧದ ಗೋಡೆಯನ್ನೇ ಕೆಡವಿದ್ದಾರೆ.

vaastu-bjp-mla-shankar-patil-vidhana-soudha-wall

ಇದರೊಂದಿಗೆ ಜನಪ್ರತಿನಿಧಿಗಳಿಗಾಗಿ ಮತ್ತು ಸರಕಾರದ ಸುಗಮ ಆಡಳಿತಕ್ಕೆ ಅನುಕೂಲವಾಗಿರಲೆಂಬ ಮಹತ್ತರ ಆಶಯದೊಂದಿಗೆ ವಿಧಾನ ಸೌಧ ನಿರ್ಮಿಸಿದ ಕೆಂಗಲ್ ಅವರ ಆಶಯಗಳನ್ನು ಮಣ್ಣುಪಾಲು ಮಾಡಿದ್ದಾರೆ.

ಸನ್ಮಾನ್ಯ ಶಾಸಕ ಶಂಕರ ಪಾಟೀಲರಿಗೆ ಹೈಕೋರ್ಟ್ ಎದುರಿಗೆ ಬರುವ ವಿಧಾನಸೌಧದ ಆಯಕಟ್ಟಿನ ಮೂರನೆಯ ಮಹಡಿಯಲ್ಲಿ 340 ಮತ್ತು 340A ಸಂಖ್ಯೆಯ ಕೊಠಡಿಗಳನ್ನು ನಿಗದಿಪಡಿಸಲಾಗಿತ್ತು.

'ಸರಕಾರದ ಕೆಲಸ ದೇವರ ಕೆಲಸ' ಎಂಬ ಕೆತ್ತನೆಯನ್ನು ಹೊಂದಿರುವ ಪವಿತ್ರ ಸ್ಥಳ ವಿಧಾನಸೌಧದಲ್ಲಿ ವಾಸ್ತು ದೋಷ ಕಂಡ ಶಂಕರ ಪಾಟೀಲರು ಈ ಕೊಠಡಿಗಳು ತಮಗೆ ಆಗಿಬರುವುದಿಲ್ಲ ಎಂಬ ತೀರ್ಮಾನಕ್ಕೆ ಬಂದು ಒಂದು ಗೋಡೆಯನ್ನು ಕೆಡವಿ ಆ ಜಾಗದಲ್ಲಿ ಬಾಗಿಲನ್ನು ಅಳವಡಿಸಿದ್ದಾರೆ.

ಆದರೆ ಶಂಕರ ಪಾಟೀಲರ ಈ ಗಡಪಾರಿಯಿಕ್ಕಿರುವ ಕೆಲಸ ವಿಧಾನಸೌಧದ ರಕ್ಷಣೆಯ ಹೊಣೆಹೊತ್ತ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಥವಾ ಸ್ಪೀಕರ್ ಕೆಜಿ ಬೋಪಯ್ಯ ಅವರ ಗಮನಕ್ಕೆ ಬಂದಿಲ್ಲ. ವಿಧಾನಸೌಧದ ಒಂದೇ ಒಂದು ಇಟ್ಟಿಗೆಯನ್ನೂ ಕೆಡುವ ದುಸ್ಸಾಹಸಕ್ಕೆ ಇದುವರೆಗೆ ಯಾರೂ ಕೈಹಾಕಿರಲಿಲ್ಲ.

ಶಾಸಕ ಶಂಕರ ಪಾಟೀಲ್ ವಜಾಕ್ಕೆ ಆಗ್ರಹ
: 'ಕಳೆದ ನಾಲ್ಕೂ ಚಿಲ್ರೆ ವರ್ಷಗಳಲ್ಲಿ ಸರ್ವ ರೀತಿಯಲ್ಲೂ ವಿಧಾನಸೌಧದ ಪಾವಿತ್ರ್ಯ ಹಾಳು ಮಾಡಿರುವ ಆಳಿತಾರೂಢ ಬಿಜೆಪಿ ಮಂದಿಯಿಂದ ಇದೊಂದು ಕೆಲಸ ಬಾಕಿಯಿತ್ತು' ಎಂದು ರಾಜಧಾನಿ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ವಿಧಾನಸೌಧ ಆಶಯಕ್ಕೆ ಎಳ್ಳು ನೀರು ಬಿಟ್ಟ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಅವರನ್ನು ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಬೀಳಿಸುವಂತೆ ಜೆಡಿಎಸ್ ಹಿರಿಯ ನಾಯಕ ಎಂಸಿ ನಾಣಯ್ಯ ಅವರು ಆಗ್ರಹಿಸಿದ್ದಾರೆ.

English summary
Navalagund BJP MLA Shankar Patil Munenakoppa brings down Vidhana Soudha wall thanks to Vaastu belief.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X