• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಮತಾ, ವಿನಯ್ ಗೆ ಏಕಲವ್ಯ ಪ್ರಶಸ್ತಿ ಗೌರವ

By Mahesh
|

ಬೆಂಗಳೂರು, ಆ.27: ಕ್ರೀಡಾಕ್ಷೇತ್ರದಲ್ಲಿ ಸರ್ವಶ್ರೇಷ್ಠ ಸಾಧನೆ ಮೆರೆದ ಕ್ರೀಡಾಪಟುಗಳಿಗೆ 2011-12ನೇ ಸಾಲಿನ ಏಕಲವ್ಯ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ, ಕ್ರಿಕೆಟರ್ ವಿನಯ್ ಕುಮಾರ್ ಹಾಗೂ ಕಬಡ್ಡಿ ಚಾಂಪಿಯನ್ ಮಮತಾ ಪೂಜಾರಿ ಸೇರಿದಂತೆ ಒಟ್ಟು 15 ಕ್ರೀಡಾಳುಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಘೋಷಿಸಲಾಗಿದೆ ಎಂದು ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಹೇಳಿದ್ದಾರೆ.

ಜೀವಮಾನದ ಸಾಧನೆಗಾಗಿ ಹಿರಿಯ ಕ್ರೀಡಾಪಟುಗಳಿಗೂ ಇದೇ ಸಂದರ್ಭದಲ್ಲಿ ಪ್ರಶಸ್ತಿ ಘೋಷಿಸಲಾಗಿದೆ. ಏಕಲವ್ಯ ಪ್ರಶಸ್ತಿ ವಿಜೇತರಿಗೆ 2 ಲಕ್ಷ ರು ನಗದು ಬಹುಮಾನ, ಬೆಳ್ಳಿ ಫಲಕ, ಪ್ರಮಾಣ ಪತ್ರ ದೊರೆಯಲಿದೆ. ಮಹಿಳಾ ಅಥ್ಲೀಟ್ ಗಳಿಗೆ ಪ್ರಶಸ್ತಿ ಫಲಕದ ಜೊತೆಗೆ ಮೈಸೂರು ರೇಷ್ಮೆ ಸೀರೆ ನೀಡಿ ಗೌರವಿಸಲಾಗುತ್ತದೆ. ಪುರುಷ ಕ್ರೀಡಾಪಟುಗಳಿಗೆ ಸೂಟ್ ದಿರಿಸು ನೀಡಲಾಗುತ್ತದೆ ಎಂದು ಅಪ್ಪಚ್ಚು ರಂಜನ್ ಹೇಳಿದರು.

* ವಿನಯ್ ಕುಮಾರ್-ಕ್ರಿಕೆಟ್

* ಪ್ರತೀಕ್ ರಾಜ್ -ರೋಲರ್ ಸ್ಕೇಟಿಂಗ್

* ರಾಕೇಶ್ ಮನ್ಪತ್- ಶೂಟಿಂಗ್

* ಸಾಬು ಈಶ್ವರ್ ಗಾಣೀಗೇರ್- ಸೈಕ್ಲಿಂಗ್

* ಕಾಶಿನಾಥ್ ನಾಯ್ಕ್-ಅಥ್ಲೆಟಿಕ್ಸ್

* ಸ್ಟ್ಯಾನಿ-ಚೆಸ್

* ಚಿಯಣ್ಣ-ಹಾಕಿ

* ನೇಹಾ-ಪವರ್ ಲಿಫ್ಟಿಂಗ್

* ರಾಜಣ್ಣ-ಅಂಗವಿಕಲ ಅಥ್ಲೀಟ್

* ಎಚ್ ಚಂದ್ರಶೌರಿ ದೇವಿ-ವೇಯ್ಟ್ ಲಿಫ್ಟಿಂಗ್

* ಮಮತಾ ಪೂಜಾರಿ-ಕಬಡ್ಡಿ

* ನಾಡಿಯಾ ಹರಿದಾಸ್ -ಈಕ್ವೆಸ್ಟ್ರಿಯನ್

* ಕೃತಿಕಾ ಲಕ್ಷ್ಮಣ್- ಬಾಸ್ಕೆಟ್ ಬಾಲ್

* ಶ್ವೇತಾ ಎನ್- ವಾಲಿಬಾಲ್

* ಎ.ಪಿ. ಗಗನ್ ಉಲ್ಲಾಳ್ ಮಠ- ಈಜು

ಕ್ರೀಡಾಕ್ಷೇತ್ರದಲ್ಲಿನ ಜೀವಮಾನದ ಸಾಧನೆಗಾಗಿ ಹಾಕಿ ತರಬೇತುಗಾರ ಸಿ.ಯು. ಅಶ್ವಥ್, ವೇಯ್ಟ್ ಲಿಫ್ಟಿಂಗ್ ತರಬೇತುಗಾರ್ತಿ ಶ್ಯಾಮಲಾ ಶೆಟ್ಟಿ ಹಾಗೂ ಸೈಕ್ಲಿಂಗ್ ತರಬೇತಿಗಾರ ಚಂದ್ರಪ್ಪ ಮಲ್ಲಪ್ಪ ಕುರಣಿ ಅವರಿಗೆ ಪ್ರಶಸ್ತಿ ನೀಡಲಾಗಿದೆ.

ಪ್ರತಿವರ್ಷ 15 ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ನೀಡಲು ಅವಕಾಶವಿದೆ. ಆದರೆ, 2010ರಲ್ಲಿ 12 ಜನರಿಗೆ ಮಾತ್ರ ಈ ಪ್ರಶಸ್ತಿ ನೀಡಲಾಗಿತ್ತು. ಹೀಗಾಗಿ ಬಾಕಿ ಉಳಿದಿದ್ದ 3 ಪ್ರಶಸ್ತಿಗಳಿಗೂ ಈ ಬಾರಿ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವ ಅಪ್ಪಚ್ಚು ರಂಜನ್ ಹೇಳಿದರು.

ಬೆಳಗಾವಿಯ ರಾಜೇಶ್ ಶಿಂಧೆ (ಅಂಗವಿಕಲ ಕ್ರೀಡಾಪಟು/ ಈಜು), ದಕ್ಷಿಣ ಕನ್ನಡ ಜಿಲ್ಲೆಯ ರೋಷನ್ ಫರಾವೋ (ಬಾಡಿ ಬಿಲ್ಡಿಂಗ್) ಹಾಗೂ ಮಂಡ್ಯ ಜಿಲ್ಲೆಯ ಎಸ್.ನವೀನ್ (ಕರಾಟೆ) ಅವರನ್ನು ಆಯ್ಕೆ ಮಾಡಲಾಗಿದೆ.

ಏಕಲವ್ಯ ಪ್ರಶಸ್ತಿಗಾಗಿ ಸುಮಾರು 93 ಅರ್ಜಿಗಳು ಬಂದಿದ್ದವು. ಜೀವಮಾನದ ಪ್ರಶಸ್ತಿಗಾಗಿ ಸುಮಾರು 40 ಅರ್ಜಿಗಳು ಬಂದಿತ್ತು.

ಕ್ರೀಡಾಪಟುಗಳು ಅಂತಾರಾಷ್ಟ್ರೀಯ, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ತೋರಿದ್ದನ್ನು ಪರಿಗಣಿಸಿ ಈ ಬಾರಿ ಏಕಲವ್ಯ ಪ್ರಶಸ್ತಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗಿದ್ದು, ಸಂಪೂರ್ಣವಾಗಿ ಪಾರದರ್ಶಕವಾಗಿದೆ.ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಕ್ಕೆ ಪ್ರತಿಯೊಂದಕ್ಕೂ ಅಂಕಗಳನ್ನು ನಿಗದಿ ಮಾಡಲಾಗಿತ್ತು.

ಈ ಮೂಲಕ ಪ್ರತಿಯೊಂದು ವಿಭಾಗದಲ್ಲೂ ಅತಿ ಹೆಚ್ಚು ಅಂಕಗಳನ್ನು ಪಡೆದ ಕ್ರೀಡಾಪಟುಗಳನ್ನೇ ಆಯ್ಕೆ ಮಾಡಲಾಗಿದೆ. ವಿಧಾನಸೌಧದ ಬಾಂಕ್ವೆಟ್ ಹಾಲ್‌ನಲ್ಲಿ ಕ್ರೀಡಾ ದಿನವಾದ ಆ.29 ರಂದು ಸಂಜೆ 6 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಅಪ್ಪಚ್ಚು ರಂಜನ್ ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Cricketer Vinay Kumar and Kabaddi Player Mamta Poojari and 13 others have been selected for Eklavya Award. Ekalavya award is the highest sports award of the state Eklavya Award consists Rs 2 lakh, memento and certificate of honour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more