ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೀಟೈಲ್ ನಲ್ಲಿ ಎಫ್ ಡಿಐ, ಕಲಾಂ ಸಲಾಂ

By Mahesh
|
Google Oneindia Kannada News

Abdul Kalam
ಕೋಲ್ಕತ್ತಾ, ಆ.26: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಯಾವುದೇ ಅಪಾಯವಿಲ್ಲ ಎಂದಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರಗಳು ಈ ಎಫ್ ಡಿಐ ಸೌಲಭ್ಯ ಸಮರ್ಥವಾಗಿ ಬಳಸಿಕೊಂಡರೆ ಪೈಪೋಟಿಯುಕ್ತ ಯುಗದಲ್ಲಿ ಬೆಳೆಯಲು ಸಾಧ್ಯ ಎಂದು ಹೇಳಿದ್ದಾರೆ.

ಭಾರತ್ ಚೇಂಬರ್ ಆಫ್ ಕಾಮರ್ಸ್ ನಲ್ಲಿ ಉಪನ್ಯಾಸ ನೀಡಿದ ಕಲಾಂ, 'ಎಫ್ ಡಿಐ ಅಪಾಯಕಾರಿಯಲ್ಲ. ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ಎಫ್ ಡಿಐ ತರುತ್ತಿರುವ ಯುಪಿಎ ಕ್ರಮ ಸ್ವಾಗತಾರ್ಹ ಎಂದರು.

ಜಾಗತೀಕರಣವನ್ನು ಅಳವಡಿಸಿಕೊಂಡಿರುವ ರಾಷ್ಟ್ರಗಳು ಅಭಿವೃದ್ಧಿ ಹೊಂದಿದ ದೇಶಗಳ ಜೊತೆ ಈ ರೀತಿ ಕೈ ಜೋಡಿಸುವುದರಲ್ಲಿ ತಪ್ಪೇನಿಲ್ಲ ಎಂದು ಕಲಾಂ ಹೇಳಿದರು.

ಸುಮಾರು 250 ಮಿಲಿಯನ್ ಟನ್ ಗಳಷ್ಟು ಆಹಾರಧಾನ್ಯಗಳನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಭಾರತ ಈಗ ಈ ವಿಷಯದಲ್ಲಿ ಸ್ವತಂತ್ರವಾಗಿದೆ. ಅದೇ 400 ಮಿಲಿಯನ್ ಟನ್ ಗಳಷ್ಟು ಆಹಾರಧಾನ್ಯ ಉತ್ಪಾದನೆಯಾದರೆ, ನಾವು ಅದನ್ನು ಮಾರಾಟ ಮಾಡದೆ ವಿಧಿಯಿಲ್ಲ. ಯಾವ ರಾಷ್ಟ್ರಕ್ಕೆ ಅಗತ್ಯವಿದೆಯೋ ಅಲ್ಲಿಗೆ ರಫ್ತು ಮಾಡಬೇಕಾಗುತ್ತದೆ. ರಫ್ತು ಹೆಚ್ಚಿದ್ದಷ್ಟು ನಮಗೆ ಲಾಭ ಎಂದು ಕಲಾಂ ಹೇಳಿದರು.

ತಮಿಳುನಾಡಿನ ವಿವಾದಿತ ಕುಂಡಕುಳಂ ಅಣುಶಕ್ತಿ ಸ್ಥಾವರ ಯೋಜನೆಯ ಪರ ಮಾತನಾಡಿದ ಕಲಾಂ, ಈ ಯೋಜನೆ ಅಣುವಿಕಿರಣ ತೊಂದರೆಗಳಿಂದ ಮುಕ್ತವಾಗಿದ್ದು, ಸುರಕ್ಷಿತವಾಗಿದೆ. ಅಣುಶಕ್ತಿ ನಾನು ವಿರೋಧಿಸುತ್ತಿಲ್ಲ. ಮಾಲಿನ್ಯಕಾರಿ ಇಂಧನ ಉತ್ಪಾದಿಸುವ ಯಾವುದೇ ಸ್ಥಾವರವಾದರೂ ನನ್ನ ವಿರೋಧವಿರುತ್ತದೆ ಎಂದು ಕಲಾಂ ಹೇಳಿದರು.

ಒಂದೇ ಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ಶೇ.100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿ, ಅಧಿಸೂಚನೆ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಚಿಲ್ಲರೆ ವಹಿವಾಟು ಎಂದರೇನು?: ಸರಕುಗಳ ವಿತರಣೆ ಅಥವಾ ಮಾರಾಟ ವಹಿವಾಟು ನಡೆಸುವ ಸಂಸ್ಥೆಯೊಂದು ನಿರ್ದಿಷ್ಟ ಉತ್ಪನ್ನವೊಂದನ್ನು ತಯಾರಿಸಿ ಅದರ ಒಡೆತನದ ಜೊತೆಗೆ ಅದನ್ನು ಎಲ್ಲೆಡೆ ಸ್ವತಃ ತಾನೇ ಮಾರಾಟ ಮಾಡುವುದಕ್ಕೆ ಏಕ ಬ್ರಾಂಡ್ ಚಿಲ್ಲರೆ ವಹಿವಾಟು ಎನ್ನುವರು.

ಉದಾ: Koutons Retail(ಜವಳಿ ಬ್ರ್ಯಾಂಡ್)(ಶೇ. 20 ರಷ್ಟು ಏರಿಕೆ ಕಂಡಿದೆ ಜ.12)ಇದರಿಂದ ಇಟಲಿ ಮತ್ತು ಫ್ರಾನ್ಸ್‌ನ ಫ್ಯಾಷನ್ ಬ್ರಾಂಡ್‌ಗಳು ಭಾರತದ ಮಾರುಕಟ್ಟೆಯಲ್ಲಿ ತಮ್ಮ ವಹಿವಾಟನ್ನು ಇನ್ನಷ್ಟು ವಿಸ್ತರಿಸಬಹುದಾಗಿದೆ.ಇದು ಪರೋಕ್ಷವಾಗಿ ದೇಶಿ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಿಸಲಿದೆ.

ಇದೇ ವೇಳೆ, ಬಹು ಬ್ರ್ಯಾಂಡ್ ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ಸುಮಾರು 80 ಲಕ್ಷ ಉದ್ಯೋಗವಕಾಶಗಳು ಸೃಷ್ಟಿಯಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary
Former President A P J Abdul Kalam came out in support of FDI in retail, saying for a developing world to become developed, an atmosphere of competitiveness and aggressiveness should be there.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X