ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲ್ಯಗೆ ರಿಲೀಫ್, ಕಿಂಗ್ ಫಿಷರ್ ಲೈಸನ್ಸ್ ಸೇಫ್

By Mahesh
|
Google Oneindia Kannada News

Vijay Mallya
ನವದೆಹಲಿ, ಆ.22: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ಸದ್ಯಕ್ಕೆ 'ಸೇಫ್' ಆಗಿದೆ. ನಾಗರೀಕ ವಿಮಾನಯಾನ ನಿರ್ದೇಶನಾಲಯ(DGCA) ನಡೆಸಿದ ವಿಮಾನಯಾನ ಸುರಕ್ಷತಾ ಸಮೀಕ್ಷೆಯಲ್ಲಿ ಕಿಂಗ್ ಫಿಷರ್ ಸಂಸ್ಥೆ ಪಾಸ್ ಆಗಿದೆ. ಈ ಮೂಲಕ ಕಿಂಗ್ ಫಿಷರ್ ಸಂಸ್ಥೆ ಲೈಸನ್ಸ್ ರದ್ದುಗೊಳಿಸುವುದು ಈಗ ಸದ್ಯಕ್ಕಿಲ್ಲ ಎಂಬ ಸಂದೇಶ ಹೊರಬಿದ್ದಿದೆ.

ಪೈಲಟ್ ಗಳ ಮುಷ್ಕರ, ವಿಮಾನ ಹಾರಾಟ ರದ್ದು, ವಿಮಾನಯಾನ ಸಂಸ್ಥೆ ಉಳಿಸಲು ಇತರೆ ಆಸ್ತಿ ಮಾರಾಟ ಮುಂತಾದ ಕಷ್ಟಕರ ಪರಿಸ್ಥಿತಿ ಎದುರಿಸಿದ್ದ ಮಲ್ಯರಿಗೆ ಈಗ ಕೊಂಚ ನಿರಾಳತೆ ಮೂಡಿದೆ.

ಲೈಸನ್ಸ್ ಕ್ಯಾನ್ಸಲ್ ಮಾಡುವುದು ಸುಲಭ ಆದರೆ, ಮತ್ತೆ ನೀಡುವುದು ಕಷ್ಟ. ಪ್ರಯಾಣಿಕರ ಹಿತ ದೃಷ್ಟಿಯಿಂದ ಸದ್ಯಕ್ಕೆ ಕಿಂಗ್ ಫಿಷರ್ ಲೈಸನ್ಸ್ ರದ್ದು ಮಾಡುವ ಸಾಧ್ಯತೆ ಇಲ್ಲ ಎಂದು ಡಿಜಿಸಿಎ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಿಂಗ್ ಫಿಷರ್ ನ ಆರ್ಥಿಕ ವಿಭಾಗ ಮುಖ್ಯಸ್ಥ ಸಂಜಯ್ ಅಗರವಾಲ್ ಅವರು, ಏರ್ ಲೈನ್ಸ್ ನ ಕಾರ್ಯಕ್ಷಮತೆ, ಆರ್ಥಿಕ ಬಿಕ್ಕಟ್ಟಿಗೆ ತೆಗೆದುಕೊಂಡ ಕ್ರಮ, ವಿಮಾನ ಹಾರಾಟ ರದ್ದು ಸರಿಪಡಿಸುವಿಕೆ ಬಗ್ಗೆ ಡಿಜಿಸಿಎ ಮುಖ್ಯಸ್ಥ ಅರುಣ್ ಮಿಶ್ರಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

6 ವಿಮಾನಗಳು ಮಾತ್ರ ಹಾರಾಟ ನಿಲ್ಲಿಸಿದೆ. ಪೈಲಟ್ ಗಳ ಸಮಸ್ಯೆ ಬಗೆಹರಿದಿದ್ದು, ಮಾರ್ಚ್ ತಿಂಗಳಿನಿಂದ ಬರಬೇಕಿದ್ದ ಸಂಬಳ ನೀಡಲಾಗಿದೆ. ಸಂಸ್ಥೆಯಲ್ಲಿ ಯಾವುದೇ ಬಿಕ್ಕಟ್ಟಿಲ್ಲ ಎಂದು ಸಂಜಯ್ ಹೇಳಿದ್ದಾರೆ.

ಎಚ್ ಡಿ ಎಫ್ ಸಿ ಬ್ಯಾಂಕ್ ಅನ್ನು ರಿಕವೆರಿ ಏಜೆಂಟ್ ಆಗಿ ವಿಮಾನಯಾನ ಸಂಸ್ಥೆಯ ಆಸ್ತಿ ಮೌಲ್ಯ ಹಾಕಿದ ಘಟನೆ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಮೊದಲಿಗೆ ಮುಂಬೈನಲ್ಲಿರುವ ವಿಲೆ ಪರ್ಲೆ ಕಿಂಗ್ ಫಿಷರ್ ಹೌಸ್ ನಂತರ ಗೋವಾದಲ್ಲಿರುವ ವಿಲ್ಲಾಗಳು ಮಾರಾಟವಾದ ಬಗ್ಗೆ ವರದಿ ಬಂದಿತ್ತು.

ಕಿಂಗ್ ಫಿಷರ್ ನ ಮುಂಬೈ ಹೌಸ್ ಕಚೇರಿ ಖಾಲಿಗೊಳಿಸಿ ದಿ ಕ್ಯೂಬ್ ಎನ್ನುವ ಇನ್ನೊಂದು ಕಚೇರಿಗೆ ವರ್ಗಾಯಿಸಲಾಗಿದೆ. ಹೀಗಾಗಿ ಖಾಲಿ ಇರುವ ಕಚೇರಿ ಸ್ವಾದೀನಪಡಿಸಿಕೊಳ್ಳುವ ಕುರಿತು ಮಾತುಕತೆ ನಡೆದಿತ್ತು ಅಷ್ಟೇ. ಅದನ್ನು ಸಾಲ ವಸೂಲಾತಿಗೆ ಸೇರಿಸಿಕೊಳ್ಳುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಕಿಂಗ್ ಫಿಷರ್ ವಕ್ತಾರರು ಹೇಳಿದ್ದಾರೆ.

ಕಿಂಗ್ ಫಿಷರ್ ಸಂಸ್ಥೆ 269.06 ಕೋಟಿ ಆದಾಯ ತೆರಿಗೆ ಹಾಗೂ 280 ಕೋಟಿ ರು ಏರ್ ಲೈನ್ಸ್ ಅಥಾರಿಟಿ ಆಫ್ ಇಂಡಿಯಾಗೆ ನೀಡಬೇಕಿದೆ. ಭಾರತದ ನಂ.2 ವಿಮಾನಯಾನ ಸಂಸ್ಥೆಯಾಗಿದ್ದ ಕಿಂಗ್ ಫಿಷರ್ ಸಂಸ್ಥೆ ನಿರಂತರವಾಗಿ ನಷ್ಟ ಅನುಭವಿಸಿದೆ.

ಬ್ಯಾಂಕು ಗಳ ಅಂದಾಜಿನ ಪ್ರಕಾರ 'ಕಿಂಗ್ ಫಿಷರ್' ಬ್ರಾಂಡ್ ಮೌಲ್ಯ ಸುಮಾರು 4,100 ಕೋಟಿ ಇದೆ. ವಿಜಯ್ ಮಲ್ಯ ಸಂಸ್ಥೆ ವೈಯಕ್ತಿಕ ಗ್ಯಾರಂಟಿಯಾಗಿ 248.97 ಕೋಟಿ ರು ತೂಗುತ್ತಿದ್ದಾರೆ. ಯುನೈಟೆಡ್ ಬ್ರೂವೆರೀಸ್ ಸಂಸ್ಥೆ ಕಾರ್ಪೊರೇಟ್ ಗ್ಯಾರಂಟಿ ಮೊತ್ತ 1,601.43 ಕೋಟಿ ರು ದಾಟುತ್ತದೆ.

ಇದಲ್ಲದೆ ಕಿಂಗ್ ಫಿಷರ್ ಸಂಸ್ಥೆ ಸಾಲದ ಪಾವತಿಗೆ ಆಧಾರವಾಗಿ 5,238.59 ಕೋಟಿ ಹಣ ಇದ್ದು, ಕಿಂಗ್ ಫಿಷರ್ ಹೌಸ್, ಗೋವಾ ವಿಲ್ಲಾ, ಹೆಲಿಕಾಪ್ಟರ್ ಅಡವಾಗಿ ಇಡಲಾಗಿದೆ.

English summary
Directorate General of Civil Aviation (DGCA) is carrying out a safety audit of Kingfisher Airlines (KFA) and it is almost a clear that KFA license cancellation is unlikely. KFA said the pilots are now being paid their March salaries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X