• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಪಾನಿನ ಯುದ್ಧ ಪತ್ರಕರ್ತೆ ದುರಂತ ಸಾವು

By Mahesh
|

ಟೊಕಿಯೋ, ಆ.21: ಸಿರಿಯಾ ರಣಭೂಮಿಯ ಆಗುಹೋಗುಗಳನ್ನು ಕ್ಷಣಕ್ಷಣಕ್ಕೆ ಪ್ರಪಂಚಕ್ಕೆ ನೀಡುತ್ತಿದ್ದ ಜಪಾನಿನ ಹಿರಿಯ ಯುದ್ಧ ಪತ್ರಕರ್ತೆ ಮಿಕಾ ಯಮಾಮೊಟೊ ಅವರು ಯುದ್ಧಭೂಮಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಜಪಾನ್ ಸರ್ಕಾರ ಮಂಗಳವಾರ(ಆ.21) ಪ್ರಕಟಿಸಿದೆ.

ಯುದ್ಧದ ಸುದ್ದಿಗಳನ್ನು ನೀಡುವುದರಲ್ಲಿ ನಿಷ್ಣಾತೆಯಾಗಿದ್ದ ಯಮಮೊಟೊ ಅವರು, ಅಲೆಪ್ಪೊ ನಗರದ ಸಮೀಪದ ಸುಲೈಮಾನ್ ಅಲ್ ಹಲಬಿ ನಗರದಲ್ಲಿ ಸಾವನ್ನಪ್ಪಿದ್ದಾರೆ. 45 ವರ್ಷದ ಪತ್ರಕರ್ತೆ ಸಿರಿಯಾದ ಮಿಲಿಟರಿ ಪಡೆ ಜೊತೆ ಜೊತೆಗೆ ಹೆಜ್ಜೆ ಹಾಕುತ್ತಾ ಧೈರ್ಯವಾಗಿ ಮುನ್ನುಗ್ಗುತ್ತಿದ್ದಾರೆ. ಆದರೆ, ಎದುರಾಳಿಯ ಗುಂಡಿನ ದಾಳಿಗೆ ಸಿಲುಕಿ ಸತ್ತಿದ್ದಾರೆ. ಯಮಮೋಟೊ ಅವರ ದೇಹವನ್ನು ಮತ್ತೊಬ್ಬ ಪತ್ರಕರ್ತ ಪತ್ತೆ ಹಚ್ಚಿ ಸುರಕ್ಷಿತವಾಗಿ ಅಲ್ಲಿಂದ ಸಾಗಿಸಿದ್ದಾರೆ.

ಸಿರಿಯಾದ ಅಧ್ಯಕ್ಷ ಬಷರ್ ಅಲ್ ಅಸದ್ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಮಿಲಿಟರಿ ಪಡೆ ಹೋರಾಟ ನಡೆಸುತ್ತಿದೆ. ಈ ಸಂದರ್ಭದಲ್ಲಿ ಜಪಾನ್ ಪತ್ರಕರ್ತೆಯನ್ನು ಸರ್ಕಾರಿ ಪಡೆ ಕೊಂದು ಹಾಕಿದೆ ಎಂದು ಬಂಡಾಯ ನಾಯಕರೊಬ್ಬರು ಹೇಳಿದ್ದಾರೆ.

ಯಮಮೊಟೊ ದೇಹವನ್ನು ಸಿರಿಯಾದಿಂದ ಟರ್ಕಿಗೆ ರವಾನಿಸಲಾಗಿದ್ದು, ನಂತರ ಜಪಾನ್ ತಲುಪಲಿದೆ. ಅಫ್ಘಾನಿಸ್ತಾನ ಹಾಗೂ ಇರಾಕ್ ಯುದ್ಧಗಳನ್ನು 2001 ಹಾಗೂ 2003ರಲ್ಲಿ ತನ್ನ ಕೆಮರಾದಲ್ಲಿ ಸೆರೆಹಿಡಿದು ವಿಸ್ತೃತ ವರದಿ ನೀಡಿದ್ದ ಯಮಮೋಟೊ ಜಪಾನಿನ ವೆಬ್ ತಾಣವೊಂದಕ್ಕೆ ವಿಶೇಷ ವರದಿ ತಯಾರಿಸುತ್ತಿದ್ದರು.

ಇತ್ತೀಚೆಗೆ ಇಬ್ಬರು ಪತ್ರಕರ್ತರನ್ನು ಸಿರಿಯಾ ಸರ್ಕಾರ ಸೆರೆ ಹಿಡಿದಿತ್ತು. ಸಿರಿಯಾದಲ್ಲಿ ಬಂಡುಕೋರರು ಹಾಗೂ ಸರ್ಕಾರದ ನಡುವಿನ ಸಮರಕ್ಕೆ ಹಿರಿಯ ಪತ್ರಕರ್ತೆ ಬಲಿಯಾಗಿರುವುದು ದುರಂತವಾಗಿದ್ದು, ಈಗಲಾದರೂ ಅಂತಾರಾಷ್ಟ್ರೀಯ ಶಾಂತಿದೂತ ರಾಷ್ಟ್ರಗಳು ಸಹಾಯ ಹಸ್ತ ಚಾಚಬಹುದು ಎಂದು ಅಲ್ಲಿನ ಜನರು ದುಃಖಿತರಾಗಿ ಹೇಳಿದ್ದಾರೆ.

English summary
A veteran Japanese war journalist, Mika Yamamoto, was killed in a crossfire in Syria while covering the civil war in the West Asian country, government sources in Japan said on Tuesday(Aug.21).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X