• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರವೀಣ್ ಗೊಡ್ಖಿಂಡಿ 'ಗಾಡ್ಸ್ ಬನ್ಸಿ' ನಿನಾದ

By Mahesh
|

ಬೆಂಗಳೂರು, ಆ.21: ಸದಾ ಹೊಸತನದ ಹುಡುಕಾಟದಲ್ಲಿರುವ ಪ್ರಸಿದ್ಧ ಕೊಳಲು ವಾದಕ ಪಂಡಿತ್ ಪ್ರವೀಣ್ ಗೋಡ್ಕಿಂಡಿ ಅವರ ವಿಶೇಷ ಕೊಳಲು ವಾದನ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಏರ್ಪಡಿಸಲಾಗಿತ್ತು. ಪ್ರವೀಣ್ ಗೋಡ್ಕಿಂಡಿ ಅವರ ಕನಸಿನ ವಾದ್ಯ 8 ಅಡಿ ಉದ್ದದ ಅಪರೂಪದ ಕೊಳಲನ್ನು ಇದೇ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.

ಪಂಡಿತ್ ಪ್ರವೀಣ್ ಅವರು ಈ ವಾದ್ಯಕ್ಕೆ 'ಗಾಡ್ ಬನ್ಸಿ' ಎಂದು ಪ್ರೀತಿಯಿಂದ ಹೆಸರಿಟ್ಟಿದ್ದಾರೆ. ವಾದ್ಯದ ಬಗ್ಗೆ ಪರಿಚಯ ನೀಡಿ, ಗಾಡ್ ಬನ್ಸಿ ಊದುತ್ತಿದ್ದರೆ ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಉಪಸ್ಥಿತರಿದ್ದ ಗಣ್ಯರು ತಲೆದೂಗುತ್ತಾ ಪ್ರವೀಣ್ ಅವರಿಗೆ ಅಭಿನಂದಿಸಿದರು.

"ಕೆಂಟಾಬಾಸ್ ಫ್ಲೂಟ್" ಎಂದೇ ಹೆಸರಾದ ಈ ವಾದನದಿಂದ ಸ್ವರ ಹೊಮ್ಮಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಸದಾ ಕಾಲ ಹೊಸ ಬಗೆ ಕೊಳಲು, ಬಾನ್ಸುರಿ ವಾದನಗಳನ್ನು ಪರಿಚಯಿಸುವುದರಲ್ಲಿ

ಸಿದ್ಧಹಸ್ತರಾದ ಪ್ರವೀಣ್ ಅವರು ಗಾಡ್ ಬನ್ಸಿಯನ್ನು ಸಂಗೀತ ಲೋಕದ ವಿಶಿಷ್ಟ ವಾದ್ಯ ಎಂದು ಕರೆದಿದ್ದಾರೆ. ಬಹುಶಃ ಈ ವಿಶಿಷ್ಟ ಹಾಗೂ ಭಾರಿ ಮೌಲ್ಯದ ಬಾನ್ಸುರಿಯನ್ನು ನಿರಾಯಾಸವಾಗಿ

ಬಾರಿಸಿದವರಲ್ಲೇ ಪ್ರವೀಣ್ ಗೋಡ್ಖಿಂಡಿ ಅವರೇ ಮೊದಲಿಗರು ಎಂಬುದು ಕನ್ನಡಿಗರ ಪಾಲಿಗೆ ಹೆಮ್ಮೆಯ ವಿಷಯ.

ಉಳಿದಂತೆ ಸಮಾರಂಭದಲ್ಲಿ ಪ್ರೆಸ್ ಕ್ಲಬ್ ಅಧ್ಯಕ್ಷ ಇ.ವಿ. ಸತ್ಯನಾರಾಯಣ್, ಪ್ರಧಾನ ಕಾರ್ಯದರ್ಶಿ ಬಿ.ಪಿ. ಮಲ್ಲಪ್ಪ ಉಪಾಧ್ಯಕ್ಷ ಅಶೋಕ್ ಕುಮಾರ್ ಅವರು ಪಂಡಿತ್ ಪ್ರವೀಣ್ ಗೋಡಖಿಂಡಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸಮಾರಂಭಕ್ಕೆ ಪ್ರವೀಣ್ ಅವರು ನೀಡಿದ್ದ ಅಹ್ವಾನವೂ ಅವರಷ್ಟೇ ಸರಳ, ಸ್ಪಷ್ಟವಾಗಿತ್ತು. ಅವರದೇ ಪದಗಳಲ್ಲಿ ಬಂದ ಆಹ್ವಾನ ಹಾಗೂ ವಾದ್ಯದ ವಿವರ ಇಂತಿದ್ದು,

ಪ್ರವೀಣ್ ಮನದಾಳದ ಮಾತು: ಕೊಳಲು ನನ್ನ ಬದುಕೂ ಹೌದು ನನ್ನ ಪ್ರೀತಿಯೂ ಹೌದು, ಜಗತ್ತಿನ ಮೂಲೆಮೂಲೆಯಲ್ಲಿರುವ ಎಲ್ಲಾ ರೀತಿಯ ಕೊಳಲುಗಳನ್ನ ಸಂಗ್ರಹಿಸಿ ಅದನ್ನು ನುಡಿಸುವುದು ನನ್ನ ಹುಚ್ಚು. ಇಂಥದ್ದೇ ಒಂದು ವಿಶಿಷ್ಟವಾದ್ಯ 8 ಅಡಿ ಕೊಳಲು. ನನ್ನ ಈ ಹೊಸ 'ಗಾಡ್ಸ್ ಬನ್ಸಿ'. ಬನ್ಸಿ ಅಂದರೆ ಬಾನ್ಸುರಿ. ದೇವರ ಕೊಳಲು ದೇವರಿಗೆ ಸಮರ್ಪಿತ ಎಂಬ ಅರ್ಥ.

ಅಲ್ಲದೇ ಪ್ರೀತಿಯಿಂದ ಗೆಳೆಯರು ನನ್ನನ್ನ ಕರೆಯೋದು 'ಗಾಡ್ಸ್' ಅಂತ ಹಾಗಾಗಿ ಈ ಹೆಸರು-ಗಾಡ್ಸ್ ಬನ್ಸಿ.

ಮೂಲತಃ ಕೊಮ್ಟ್ರಾಬಾಸ್ ಫ್ಲೂಟ್ ಎಂದು ಕರೆಸಿಕೊಳ್ಳುವ ಈ ವಾದ್ಯವನ್ನು ಭಾರತ ದೇಶದಲ್ಲಿ ನುಡಿಸುವ ಮೊಟ್ಟ ಮೊದಲಿಗನೆಂದು ತಿಳಿಸಲು ಹೆಮ್ಮೆ ಪಡುತ್ತೇನೆ. ಇಡೀ ವಿಶ್ವದಲ್ಲೇ ಹಿಂದೂಸ್ತಾನಿ ಸಂಗೀತವನ್ನು ಇದರಲ್ಲಿನುಡಿಸುವ ಮೊಟ್ಟಮೊದಲ ಕೊಳಲುವಾದಕನೆಂಬುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ಭಾವಿಸಿದ್ದೇನೆ.

ಇದರ ನಾದ ಮನಮೋಹಕ, ಬಾನ್ಸುರಿಯಲ್ಲಿ ನಿಲುಕದ ಮಂದ್ರ ಸಪ್ತಕದ ಸ್ವರಗಳನ್ನು ಲೀಲಾಜಾಲವಾಗಿ ನುಡಿಸಬಹುದಾದ ಈ ಅಪರೂಪದ ವಾದ್ಯದಲ್ಲಿ ಅನೇಕ ಶಾಸ್ತ್ರೀಯ ರಾಗಗಳು ಸುಂದರವಾಗಿ ಮೂಡಿ ಬರುವುದು. ಮನಸ್ಸಿಗೆ ನೆಮ್ಮದಿ ಮತ್ತು ಉಲ್ಲಾಸ ನೀಡುವ ಅದ್ಭುತ ವಾದ್ಯ ಈ ಗಾಡ್ಸ್ ಬನ್ಸಿ.

ಶಾಸ್ತ್ರೀಯ ಸಂಗೀತಕ್ಕೆ ಬೇಕಾಗುವ ಮೀಂಡು ಗಳು ಮತ್ತಿ ಗಮಕ್ ಗಳನ್ನು ಹೊರಡಿಸಲು ಪ್ರಯತ್ನ ಪಟ್ಟಿದ್ದೇನೆ. ಯಶಸ್ವಿಯೂ ಆಗಿದ್ದೇನೆ. ಶಾಸ್ತ್ರೀಯ ಸಂಗೀತವಲ್ಲದೆ Fusion ಸಂಗೀತದಲ್ಲೂ ಇದನ್ನು ಬಳಸುವ ಯೋಚನೆಗಳನ್ನ ಹೊಂದಿದ್ದೇನೆ.

ಬೇಸ್ ಗಿಟಾರ್ ಮಾಡೊ ಈ ಕೆಲಸವನ್ನು ಈ ವಾದ್ಯದಲ್ಲಿ ನುಡಿಸಬಹುದಾಗಿದೆ. ಅಲ್ಲದೆ, ಗಾಳಿಯನ್ನು ಹಾಕದೆ ರಂಧ್ರಗಲ ಮೇಲಿರುವ 'ಕೀ' ಗಳನ್ನ ಬೆರಳಿನಿಂದ ಅಮುಕಿ ಅನೇಕ ಲಯವಾದ್ಯಗಳ ನಾದವನ್ನು ಹೊರಡಿಸಬಹುದು. ಒಟ್ಟಿನಲ್ಲಿ ಕೇಳುಗರಿಗೆ ಒಂದು ಹೊಸ ಅನುಭವ ಮನೋಲ್ಲಾಸ ನೀಡಬಲ್ಲ ಅತ್ಯಂತ ವಿಶೇಷ ವಾದ್ಯ ಈ ಗಾಡ್ಸ್ ಬನ್ನಿ.

ಹೊಸ ವಾದ್ಯದ ಬೆಲೆ 20,000 ಅಮೆರಿಕನ್ ಡಾಲರ್ಸ್. ಆದರೆ, ನನಗೆ ನನ್ನ ಮಿತ್ರ ನೆಡ್ ಅವರ ವಾದ್ಯ ಲಭಿಸಿದೆ ಹಾಗಾಗಿ ನಾನು ನಿರ್ಲಿಪ್ತನಾಗಿ ಉಸಿರಾಡಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Pandit Praveen GOdkhindi unveiled special instrument a huge 8 feet flute recently in Bangalore Press club. which he calls it as GOD’S BANSI’ which is known as the contrabass flute in the western world. Later Praveen was felicitated by Bangalore Press club president EV Sathyanarayana and team.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more