• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದಲ್ಲಿ ನಿನ್ನೆಯಿಂದ ಮೊಬೈಲ್ ಸೇವೆ ಸ್ಥಗಿತ

By Srinath
|
pak-suspends-mobile-phone-services-in-4-cities
ಇಸ್ಲಾಮಾಬಾದ್, ಆ. 20: ಪಾಕಿಸ್ತಾನದಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಮೊಬೈಲ್ ಫೋನ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಇದೇನಿದು ಅಸ್ಸಾಂ ಹಿಂಸಾಚಾರಕ್ಕೆ ಕಾರಣವಾದ ಮೊಬೈಲ್ ಎಸ್ಎಂಎಸ್ ಗಳನ್ನು ಹತ್ತಿಕ್ಕಲು ಪಾಕಿಸ್ತಾನ ಈ ಕ್ರಮ ಕೈಗೊಂಡಿದೆಯೇ ಎಂದು ಆಶ್ಚರ್ಯ ಪಡಬೇಡಿ.

ಭಸ್ಮಾಸುರರ ಮೊಬೈಲ್ ವಾರ್: ಏಕೆಂದರೆ ರಂಜಾನ್ ಆಚರಣೆ ಮುನ್ನಾ ಕಾಲದಲ್ಲಿ ಪಾಕಿಸ್ತಾನದ ಜನತೆಗೆ ಭಯೋತ್ಪಾದಕರು ಭಾರಿ ಧಮಕಿಯನ್ನೇ ಹಾಕಿದ್ದು, ಪಾಕ್ ಸರಕಾರಕ್ಕೆ ಭಯಕಾಡತೊಡಗಿದೆ.

ಭಸ್ಮಾಸುರ ಭಯೋತ್ಪಾದಕ ಸಂಘಟನೆಗಳು ಮೊಬೈಲ್ ಫೋನುಗಳನ್ನು ಬಳಸಿ, ಬಾಂಬುಗಳನ್ನು ವಿಸ್ಫೋಟಿಸುವ ಬೆದರಿಕೆಯೊಡ್ಡಿವೆ. ಹಾಗಾಗಿ, ಪಾಕಿಸ್ತಾನದ ಪ್ರಮುಖ ನಾಲ್ಕು ನಗರಗಳಲ್ಲಿ ಮೊಬೈಲ್ ಸೇವೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದೆ.

ಏನೋ ಮಾಡಲು ಹೋಗಿ...ಏನು ಮಾಡಿದೆ ನೀನು: ಒಳಾಡಳಿತ ಸಚಿವಾಲಯ ಹೊರಡಿಸಿರುವ ಈ ಸುಗ್ರೀವಾಜ್ಞೆಯಿಂದ ಲಾಹೋರ್, ಮುಲ್ತಾನ್, ಕರಾಚಿ ಮತ್ತು ಕ್ವೆಟ್ಟಾ ನಗರಗಳಲ್ಲಿ ಕೋಟ್ಯಂತರ ಮಂದಿಗೆ ದೂರವಾಣಿ ಕರೆ/ ಸಂದೇಶಗಳನ್ನು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ರಂಜಾನ್ ಸಂದರ್ಭದಲ್ಲಿ ಮುಸ್ಲಿಂ ಬಾಂಧವರು ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಳ್ಳಲಾಗದೆ ಚಡಪಡಿಸುವಂತಾಗಿದೆ.

ಮೊಬೈಲ್ ಬಾಂಬುಗಳು ಸ್ಫೋಟಿಸದಂತೆ ಮುಂಜಾಗರೂಕತೆ ಕ್ರಮವಾಗಿ ಮೊಬೈಲ್ ಸೇವೆಗಳನ್ನು ನಿಷೇಧಿಸಲಾಗಿದೆ ಎಂದು ಒಳಾಡಳಿತ ಸಚಿವ ರಹಮಾನ್ ಮಲ್ಲಿಕ್ ಪ್ರಕಟಿಸಿದ್ದಾರೆ. ಅಗತ್ಯಬಿದ್ದಲ್ಲಿ ಇಸ್ಲಾಮಾಬಾದ್ ನಗರದಲ್ಲೂ ಮೊಬೈಲ್ ಸೇವೆ ನಿಷೇಧಿಸಲಾಗುವುದು ಎಂದು ಅವರು ಮುನ್ಸೂಚನೆ ನೀಡಿದ್ದಾರೆ.

ಈದ್-ಉಲ್-ಫಿತರ್ ಹಬ್ಬಾಚರಣೆಗಿಂತ ನಮಗೆ ನಮ್ಮ ಜನರ ಪ್ರಾಣ ಮುಖ್ಯ. ಹಬ್ಬದ ಸಂದರ್ಭದಲ್ಲಿ ಇಂತಹ ಕಸಿವಿಸಿ ತಲೆದೋರಿದೆ. ಆದರೂ ಸರಕಾರದ ಜತೆ ಸಂಪೂರ್ಣವಾಗಿ ಸಹಕರಿಸುವಂತೆ ಸಚಿವರು ಕೋರಿದ್ದಾರೆ. ಗುಪ್ತಚರ ಮೂಲಗಳು ನೀಡಿರುವ ಮಾಹಿತಿಯನ್ನಾಧರಿಸಿ, ಸರಕಾರ ತೆಗೆದುಕೊಂಡಿರುವ ಈ ನಿರ್ಧಾರದ ವಿರುದ್ಧ ಜನ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Due to terror threat Pakistan suspends mobile services in 4 cities- Lahore, Multan, Karachi, Quetta and in Islamabad too in the event of any emergency to prevent terrorist attacks using bombs triggered with mobile phones, Interior Minister Rehman Malik said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more