ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಬ್ಬರು ವಿದ್ಯಾರ್ಥಿನಿಯರ ಜತೆ ಕಾಮುಕ ಶಿಕ್ಷಕ ಪರಾರಿ

By Srinath
|
Google Oneindia Kannada News

molest-delhi-constable-held-teacher-elopes-with-2-girls
ನವದೆಹಲಿ, ಆ. 20: ರಾಷ್ಟ್ರದ ರಾಜಧಾನಿಯಲ್ಲಿ ಮತ್ತೊಂದು ರೇಪ್ ನಡೆದಿದೆ. ಈ ಬಾರಿ ರಕ್ಷಣೆಗೆ ನಿಲ್ಲಬೇಕಾದ ಪೇದೆಯೇ ಅತ್ಯಾಚಾರವೆಸಗಿ, ಕಂಬಿ ಎಣಿಸುತ್ತಿದ್ದಾನೆ. ದಕ್ಷಿಣ ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಅನೇಕ ದಿನಗಳಿಂದ ಪರಿಚಯವಿರುವ 15 ವರ್ಷದ ಬಾಲಕಿಯ ಮೇಲೆ ಕಾಮುಕ ಪೇದೆ ಅತ್ಯಾಚಾರವೆಸಗಿದ್ದಾನೆ.

ಜಾಮಿಯಾ ನಗರ ಪೊಲೀಸ್ ಠಾಣೆಯ ಪೇದೆ ಅನ್ಯಾಯದ ಇನ್ಸಾಫ್ ಖಾನ್ 8ನೇ ತರಗತಿಯ ಬಾಲಕಿಯ ಮೇಲೆ ತನ್ನ ಪೈಶಾಚಿಕ ವರಸೆ ತೋರಿದ್ದಾನೆ. ಬಾಧಿತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿ, ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.

ಹಾಗಾಗಿ, ಪೇದೆ ಇನ್ಸಾಫ್ ಖಾನ್ ನನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಿಹಾರ ಮೂಲದ ಆರೋಪಿ ಪೇದೆ ಇನ್ಸಾಫ್ ಖಾನ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಫೂಲ್ ಪ್ರಹ್ಲಾದಪುರದಲ್ಲಿ ತನ್ನ ಗೆಳೆಯನ ಅಪಾರ್ಟ್ ಮೆಂಟಿನಲ್ಲಿ ಪೇದೆಯು ನನ್ನ ಮೇಲೆ ಶುಕ್ರವಾರ ಅತ್ಯಾಚಾರವೆಸಗಿದ್ದಾನೆ ಎಂದು ಬಾಧಿತ ಬಾಲಕಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ. ಅದೊಂದು ದಿನ ಸ್ಥಳೀಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಸದರಿ ಬಾಲಕಿಯೊಂದಿಗೆ ಪೇದೆ ಪರಿಚಯ ಬೆಳೆಸಿಕೊಂಡಿದ್ದ ಎನ್ನಲಾಗಿದೆ.

ವಿದ್ಯಾರ್ಥಿನಿಯರೊಂದಿಗೆ ವಿಚ್ಛೇದಿತ ಕಾಮುಕ ಶಿಕ್ಷಕ ಪರಾರಿ: ಇಲ್ಲಿಂದ 20 ಕಿಮೀ ದೂರದಲ್ಲಿರುವ ಪದಾಧರಿಯಲ್ಲಿ ಪ್ರತಿಷ್ಠಿತ ಶಾಲೆಯಲ್ಲಿ ಆತ ಮುಖ್ಯ ಶಿಕ್ಷಕನಾಗಿದ್ದ. 50 ವರ್ಷದ ಆ ಶಿಕ್ಷಕ ವಿಚ್ಛೇದಿತನೂ ಆಗಿದ್ದ. ಇಂತಿಪ್ಪ ಶಿಕ್ಷಕ ಅದ್ಯಾವುದೋ ಮಾಯದಲ್ಲಿ ತನ್ನಿಬ್ಬರು ವಿದ್ಯಾರ್ಥಿನಿಯರೊಂದಿಗೆ ಪ್ರೇಮಕ್ಕೆ ಬಿದ್ದು, ಅವರೊಂದಿಗೆ ಈಗ ಪರಾರಿಯಾಗಿದ್ದಾನೆ.

ದುರ್ದೈವವೆಂದರೆ ಆ ಬಾಲಕಿಯರಿಬ್ಬರೂ ಅಪ್ರಾಪ್ತವಯಸ್ಸಿನವರು. ಡಾ. ದೀಪ್ ಚಂದ್ ಗರಡಿ ಇಂಟರ್ ನ್ಯಾಷನಲ್ ಸ್ಕೂಲಿನ ಆರೋಪಿ ಶಿಕ್ಷಕನ ಹೆಸರು ಧವಲ್ ತ್ರಿವೇದಿ. ಈ ಕಾಮುಕ ಶಿಕ್ಷಕ ಪ್ರಥಮ ಪಿಯುಸಿಯ ಬಾಲಕಿಯರಿಬ್ಬರ ಜತೆ ಜುಲೈ 25ರಿಂದ ಕಾಣೆಯಾಗಿದ್ದಾನೆ.

16 ವರ್ಷದ ಈ ಇಬ್ಬರೂ ಬಾಲಕಿಯರು ವಸತಿ ಶಾಲೆಯ ಹಾಸ್ಟೆಲಿನಲ್ಲಿ ವಾಸಿಸುತ್ತಿದ್ದರು. ಆರೋಪಿ ಧವಲ್ ತ್ರಿವೇದಿ ಸಹ ಇದೇ ಹಾಸ್ಟೆಲಿನಲ್ಲಿರುತ್ತಿದ್ದ. ಒಬ್ಬ ಬಾಲಕಿ ಜಾಮ್ ನಗರದ ಲಾಲಪುರ ತಾಲೂಕಿನವಳು. ಮತ್ತೊಬ್ಬಳು ಜಮಖಾಂಬಲಿಯಾ ಪಟ್ಟಣದವಳು. ಆರೋಪಿ ಧವಲ್ ವಡೊದರಾ ಮೂಲ ನಿವಾಸಿ.

ವಿಜ್ಞಾನ ಶಿಕ್ಷಕ ತ್ರಿವೇದಿಯು ತನ್ನ ಮೊದಲ ಪತ್ನಿ ಈ ಹಿಂದೆ ನಿಧನಹೊಂದಿದ ನಂತರ ಶಾಲಾ ಶಿಕ್ಷಕಿಯನ್ನು ಮದುವೆಯಾಗಿದ್ದ. ಆದರೆ ಆ ಮದುವೆ ಬರಕತ್ತಾಗಿರಲಿಲ್ಲ. ಈ ಹಿಂದೆಯೂ ಆರೋಪಿ ತ್ರಿವೇದಿ ಮತ್ತೊಬ್ಬ ಶಿಕ್ಷಕಿಯ ಜತೆ ಓಡಿಹೋಗಿದ್ದ. ಪಂಚ ಭಾಷೆಗ ಈ ಸಕಲಕಲಾವಲ್ಲಭ ಹಣಕಾಸು ವಿಷಯದಲ್ಲೂ ಸ್ಥಿತಿವಂತನಾಗಿದ್ದು, ಡಾ. ದೀಪ್ ಚಂದ್ ಗರಡಿ ಇಂಟರ್ ನ್ಯಾಷನಲ್ ಸ್ಕೂಲಿನಲ್ಲಿ ಶೇ. 10ರಷ್ಟು ಪಾಲು ಹೊಂದಿದ್ದಾನೆ.

ಶಾಲೆಯ ವ್ಯವಸ್ಥಾಪಕ ಧರ್ಮದರ್ಶಿ ಅಶೋಕ್ ಖಂಜರಿಯಾ ಅವರು ಜುಲೈ 29ರಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಬ್ಬರೂ ಬಾಲಕಿಯರು ಜುಲೈ 25ರಂದು ಬೆಳಗಿನ ಜಾವ 3 ಗಂಟೆಯಲ್ಲಿ ಹಾಸ್ಟೆಲಿನಿಂದ ಕಳ್ಳಹೆಜ್ಜೆ ಹಾಕುತ್ತಾ ಪರಾರಿಯಾಗಿದ್ದಾರೆ. ಹಾಸ್ಟೆಲಿನ ಕೆಸಗಾರ ಇಬ್ಬರನ್ನೂ ತಡೆದು ಈ ಅವೇಳೆಯಲ್ಲಿ ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಆರೋಪಿ ಶಿಕ್ಷಕನ ಹೆಸರು ಹೇಳಿ ಅವರು ತಮಗೆ ಅನುಮತಿ ನೀಡಿದ್ದಾರೆ ಎಂದು ಸುಳ್ಳು ಹೇಳಿ ಕಳಚಿಕೊಂಡಿದ್ದಾರೆ.

ತ್ರಿವೇದಿಯ ಮೊಬೈಲ್ ಬೆನ್ನುಹತ್ತಿದ ಪೊಲೀಸರಿಗೆ ಜುಲೈ 31ರಂದು ಮೂವರೂ ಕೇರಳದಲ್ಲಿರುವುದು ಪತ್ತೆಯಾಗಿದೆ. ಆದರೆ ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದೆ.

English summary
Molestation- Delhi constable held. Divorced teacher elopes with 2 minor girls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X