ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಆ.22 ರಿಂದ ಎರಡು ದಿನ ಬ್ಯಾಂಕ್ ಮುಷ್ಕರ

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Bank Strike
  ಬೆಂಗಳೂರು, ಆ.20: ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಸುಧಾರಣೆ, ಉದ್ದೇಶಿತ ಬ್ಯಾಂಕ್ ಕಾನೂನು ತಿದ್ದುಪಡಿ ಪ್ರಸ್ತಾವ ಖಂಡಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ನೌಕರರ ಸಂಘಟನೆಗಳು ಆ.22ರಿಂದ ಎರಡು ದಿನಗಳ ಕಾಲ ಮುಷ್ಕರ ಹೂಡಲಿದೆ.

  ಸುಮಾರು 27 ಸರ್ಕಾರಿ ಸ್ವಾಮ್ಯದ ಬ್ಯಾಂಕ್, 12 ಹಳೆ ಕಾಲದ ಖಾಸಗಿ ಬ್ಯಾಂಕ್ ಹಾಗೂ 8 ವಿದೇಶಿ ಬ್ಯಾಂಕ್ ಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿದೆ ಎಂದು ಆಲ್ ಇಂಡಿಯಾ ಎಂಪ್ಲಾಯಿಸ್ ಅಸೋಸಿಯೇಷನ್ ಕಾರ್ಯದರ್ಶಿ ವಿಶ್ವಾಸ್ ಉಟಗಿ ಹೇಳಿದ್ದಾರೆ.

  ಆ. 22 ಮತ್ತು 23ರಂದು ಮುಷ್ಕರದ ಹಿನ್ನೆಲೆಯಲ್ಲಿ ಆ.21ರಂದು ಸಭೆ ನಡೆಯಲಿದೆ ನಂತರ ಮುಷ್ಕರದ ಬಗ್ಗೆ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ವಿಶ್ವಾಸ್ ಹೇಳಿದರು.

  ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮತ್ತು ಖಾಸಗೀಕರಣಕ್ಕೆ ಅವಕಾಶ ಕಲ್ಪಿಸುವ ಸರ್ಕಾರದ ಪ್ರಸ್ತಾವದ ಬಗ್ಗೆ ಬ್ಯಾಂಕ್ ಯೂನಿಯನ್ ಗಳು ವಿರೋಧ ವ್ಯಕ್ತಪಡಿಸಿದೆ. ಈ ಮುಷ್ಕರದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚಿನ ಬ್ಯಾಂಕ್ ಅಧಿಕಾರಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

  ಬ್ಯಾಂಕಿಂಗ್ ಕಾಯ್ದೆ 1949 ರ ತಿದ್ದುಪಡಿ ಮಾಡಿ ಬ್ಯಾಂಕ್ ಗಳ ವಿಲೀನ, ಖಾಸಗಿ ಮತ್ತು ವಿದೇಶಿ ಬಂಡವಾಳ ಹೂಡಿಕೆ, ನಿರ್ಬಂಧವಿಲ್ಲದ ಮತದಾನದ ಹಕ್ಕು ಹಾಗೂ ಕಾರ್ಪೊರೆಟ್ ಬಿಸಿನೆಸ್ ಹೌಸ್ ಗಳಿಗೆ ಬ್ಯಾಂಕ್ ಸ್ಥಾಪನೆಗೆ ಲೈಸನ್, ಖಾಸಗಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ವಿವಿಧ ರಾಷ್ಟ್ರಗಳ ಬ್ಯಾಂಕ್ ಗಳ ಸಂಪರ್ಕ, ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಎಫ್ ಡಿಐಗೆ ಅವಕಾಶ ಮುಂತಾದ ಮಹತ್ವದ ಬದಲಾವಣೆಗೆ ಸರ್ಕಾರ ಮುಂದಾಗಿರುವುದನ್ನು ಬ್ಯಾಂಕ್ ಕಾರ್ಮಿಕರ, ಅಧಿಕಾರಿಗಳ ಸಂಘಟನೆ ವಿರೋಧಿಸುತ್ತದೆ ಎಂದು ವಿಶ್ವಾಸ್ ತಿಳಿಸಿದರು.

  ಸರ್ಕಾರ ಈ ತಿದ್ದುಪಡಿಗಳೊಂದಿಗೆ ಕಾನೂನು ಜಾರಿಗೊಳಿಸಿದರೆ, ಗ್ರಾಮೀಣ ಬ್ಯಾಂಕ್ ಗಳನ್ನು ಮುಚ್ಚಬೇಕಾಗುತ್ತದೆ. ಗ್ರಾಮೀಣ ಬ್ಯಾಂಕ್ ಗಳ ಖಾಸಗಿಕರಣದಿಂದ ಸಣ್ಣ ಹೂಡಿಕೆದಾರರಿಗೆ ನಷ್ಟವುಂಟಾಗಲಿದೆ. ಹೊರಗುತ್ತಿಗೆ ನಿಯಮಗಳು ಕೂಡಾ ಕಾರ್ಮಿಕರ ಕಾನೂನು ಉಲ್ಲಂಘನೆಯಾಗಿದೆ. ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗ ಮರಿಚೀಕೆಯಾಗಲಿದೆ ಎಂದು ವಿಶ್ವಾಸ್ ಹೇಳಿದ್ದಾರೆ.

  United Forum of Bank Unions (UFBU) ಅಡಿಗೆ ಒಳ ಪಡುವ ಎಲ್ಲಾ 9 ಬ್ಯಾಂಕ್ ಯೂನಿಯನ್ ಗಳಾದ All India Bank Employees Association (AIBEA), All India Bank Officers Confederation (AIBOC), National Confederation Of Bank Employees (NCBE), All India Bank Officers Association (AIBOA), Bank Employees Federation Of India (BEFI), Indian National Bank Employees Federation (INBEF), Indian National Bank Officers Congress (INBOC), National Organisation Of Bank Workers (NOBW) ಗಳು ಮುಷ್ಕರದಲ್ಲಿ ಭಾಗವಹಿಸಲಿದೆ.

  ಸರ್ಕಾರಿ ಸ್ವಾಮ್ಯದ 47 ಬ್ಯಾಂಕ್ ಗಳು 87,000 ಬ್ರಾಂಚ್ ಗಳು ಕೆಲಸ ನಿಲ್ಲಿಸಲಿದೆ. ಬ್ಯಾಂಕ್ ಮಾನವ ಸಂಪನ್ಮೂಲ ನೀತಿ ಕುರಿತು ಕೇಂದ್ರ ಸರ್ಕಾರ ನೇಮಿಸಿದ ಖಂಡೇಲ್ ವಾಲ್ ಸಮಿತಿ ನೀಡಿರುವ ಶಿಫಾರಸುಗಳನ್ನು ಬ್ಯಾಂಕ್ ಯೂನಿಯನ್ ಗಳು ವಿರೋಧಿಸಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Over a million employees and officers of 27 public sector banks, 12 old generation private banks and eight foreign banks will go on two day strike from Aug.22 said All India Bank Employees Association secretary Vishwas Utagi.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more