ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಮೆಟ್ರೋ: ರಾಜ್ಯೋತ್ಸವಕ್ಕೆ ಮಾಲ್, ದರ್ಶಿನಿ ದರ್ಶನ

By Srinath
|
Google Oneindia Kannada News

namma-metro-stations-to-buzz-with-darshini-malls
ಬೆಂಗಳೂರು, ಆ.20: ಬೆಂಗಳೂರಿನ ಹೆಗ್ಗುರುತಾಗಿ ನಿರ್ಮಾಣವಾಗುತ್ತಿರುವ 'ನಮ್ಮ ಮೆಟ್ರೊ' ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಮಾಲ್, ದರ್ಶಿನಿಗಳ ಮಾರಾಟ ಭರಾಟೆ ಕಂಡುಬರಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಕನ್ನಡ ರಾಜ್ಯೋತ್ಸವ ವೇಳೆಗೆ ಇವು ಕಾರ್ಯರಂಭಿಸಲಿವೆ.

ಸದ್ಯಕ್ಕೆ ರೀಚ್- 1ರ ಮಾರ್ಗದಲ್ಲಿ ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿವರೆಗೆ ಮಾತ್ರ ನಮ್ಮ ಮೆಟ್ರೊ ಸಂಚರಿಸುತ್ತಿದೆ. ಈ ಮಾರ್ಗದಲ್ಲಿ ಐದು ನಿಲ್ದಾಣಗಳಿವೆ. ಇಲ್ಲೆಲ್ಲಾ ನಾನಾ ಬಗೆಯ 36 ಮಾರಾಟ ಮಳಿಗೆಗಳಿಗೆ ಲೈಸನ್ಸ್ ನೀಡಲು ಬೆಂಗಳೂರು ಮೆಟ್ರೊ ರೈಲು ನಿಗಮ (BMRCL) ಉದ್ದೇಶಿಸಿದೆ.

ಸೆಪ್ಟೆಂಬರ್ 14 ಬಿಡ್ ಗೆ ಕೊನೆ: ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ಕಾರ್ಯಗತವಾಗಲಿದೆ. ಬಿಡ್‌ಗಳನ್ನು ಸೆಪ್ಟೆಂಬರ್ 14ರೊಳಗೆ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ. ಈಗಾಗಲೇ ಎರಡು ನಿಲ್ದಾಣಗಳಲ್ಲಿ ಕಾಫಿ ಶಾಪ್‌ಗಳ ಪ್ರಾರಂಭಕ್ಕೆ ಕರೆದಿದ್ದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಫಿ ಶಾಪ್‌ಗಳು ಮುಂದಿನ ತಿಂಗಳು ಪ್ರಾರಂಭವಾಗುವ ಸಾಧ್ಯತೆ ಇದೆ.

ಟೆಂಡರ್ ಅಂತಿಮಗೊಳ್ಳುತ್ತಿದ್ದಂತೆ ಔಷಧ ಮಳಿಗೆ, ಕ್ಷೌರದಂಗಡಿ ಸಲೂನ್, ಟೀ-ಕಾಫಿ ಕೆಫೆ, ಹೂ ಮಳಿಗೆ, ದರ್ಶಿನಿ ರೆಸ್ಟೋರೆಂಟ್, ಪುಸ್ತಕದಂಗಡಿ ಮುಂತಾದ ಮಾರಾಟ ಮಳಿಗೆಗಳು ಸದ್ಯದಲ್ಲೇ ಈ ಐದೂ ನಿಲ್ದಾಣಗಳಲ್ಲಿ ಕಾರ್ಯಾರಂಭ ಮಾಡಲಿವೆ.

ನೀವಿಲ್ಲಿ ಗಮನಿಸಲೇಬೇಕಾದ ಮುಖ್ಯ ಸಂಗತಿಯೆಂದರೆ ದರ್ಶಿನಿಯಲ್ಲಿ ತಿಂಡಿ-ತಿನಿಸುಗಳನ್ನು ಖರೀದಿಸಬಹುದಾದರೂ ಅದನ್ನು ರೈಲಿನೊಳಗೆ ತಿನ್ನುವಂತಿಲ್ಲ. ನೈರ್ಮಲ್ಯಕ್ಕೆ ವಿಶೇಷ ಗಮನ ನೀಡಿರುವ BMRCL, ಖಂಡಿತ ಪ್ರಯಾಣಿಕರು ರೈಲು ಬೋಗಿಗಳನ್ನು ಗಬ್ಬೆಬ್ಬಿಸಿಲು ಬಿಡುವುದಿಲ್ಲ.

ಉದ್ದೇಶಿತ ಮಳಿಗೆಗಳ ವಿವರ:
* ಉಡುಗೊರೆ-ಆಟಿಕೆ: ಪುಸ್ತಕ, ಶುಭಾಶಯ ಪತ್ರ, ಡಿವಿಡಿ, ಉಡುಗೊರೆ, ಆಟಿಕೆ ಮಾರಾಟ ಮಳಿಗೆ.
* ಹಣ ವಿನಿಮಯ: ವಿದೇಶಿ ಕರೆನ್ಸಿಗಳ ವಿನಿಮಯ ಮತ್ತಿತರ ಸೇವೆ ಒದಗಿಸುವ ಮಳಿಗೆ.
* ಔಷಧ ಮಳಿಗೆ: ದಿನದ 24 ಗಂಟೆಯೂ ತೆರೆದಿರುವ ಔಷಧಿಗಳ ಮಾರಾಟ ಮಳಿಗೆ.
* ಲಾಂಡ್ರಿ: ಉಡುಪುಗಳ ಇಸ್ತ್ರಿ, ಡ್ರೈ ಕ್ಲೀನಿಂಗ್ ಮಾಡಿಕೊಡುವ ಲಾಂಡ್ರಿ ಶಾಪ್.
* ಹೂ ಮಳಿಗೆ: ಅಲಂಕಾರಿಕ ಹೂವುಗಳು ಮತ್ತು ಪುಷ್ಪಗುಚ್ಛಗಳನ್ನು ಮಾರುವ ಮಳಿಗೆ.
* ರೆಡ್ಡಿ ಮೇಡ್ ಫುಡ್ ಕೋರ್ಟ್: ಬೇಕರಿ ಪದಾರ್ಥ, ಉಪಾಹಾರ, ಸಿಹಿ ತಿನಿಸು ಮಳಿಗೆ.
* ಸಲೂನ್: ಕ್ಷೌರ, ಕೇಶ ಸಿಂಗಾರ, ಮುಖಾಲಂಕಾರ, ಮಸಾಜ್ ಸೇವೆಗಳಿರುವ ಅಂಗಡಿ.
* ರಿಪೇರಿ ಮಳಿಗೆ: ಮೊಬೈಲು, ಗಡಿಯಾರ, ಬ್ಯಾಗು, ಛತ್ರಿ, ಬೀಗದ ಕೀ ರಿಪೇರಿ ಅಂಗಡಿ.
* ತಿಂಡಿ ತಿನಿಸು, ತಂಪು ಪಾನೀಯ, ನಿಯತಕಾಲಿಕೆ ವಿತರಿಸುವ ATM ಮಾದರಿ ಯಂತ್ರಗಳು.

English summary
Soon, you will be able to enjoy lip-smacking dishes at Namma Metro stations. Bangalore Metro Rail Corporation Ltd (BMRCL) is planning to start food courts, on the lines of darshinis, in and around the stations on its Reach 1 from Byappanahalli to MG Road.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X