• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಷದ ಹಾಲುಣಿಸಿ ಹಸುಗೂಸಿನ ಕಗ್ಗೊಲೆ

By Mahesh
|
ಬೆಂಗಳೂರು, ಆ.20: ಜ್ಯೋತಿಷಿಗಳ ಮಾತು ನಂಬಿ ತನ್ನ ಮಗುವನ್ನೇ ಬಲಿ ಕೊಟ್ಟ ಅಮಾನುಷ ಮತ್ತು ಕರಳು ಹಿಂಡುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ಸೋಮವಾರ(ಆ.20) ನಡೆದಿದೆ.

ನಂದೀಶ್ ಎಂಬ ವ್ಯಕ್ತಿ ತನ್ನ 20 ದಿನಗಳ ಹಸುಗೂಸಿಗೆ ಹಾಲಿನಲ್ಲಿ ವಿಷ ಬೆರಸಿ ಕೊಂದಿದ್ದಾನೆ. ಕತ್ತೆ ಹಾಲಿನಲ್ಲಿ ಇಷ್ಟೇ ಪ್ರಮಾಣದ ವಿಷ ಬೆರೆಸಿ ಹೇಳಿದ ಸಮಯಕ್ಕೆ ಹಾಲು ಕೊಟ್ಟರೆ ನಿನಗೆ ಭಾಗ್ಯೋದಯವಾಗುತ್ತದೆ ಎಂದು ಜ್ಯೋತಿಷಿಗಳು ಹೇಳಿದ ಮಾತನ್ನು ಪೆಕರನಂತೆ ನಂಬಿದ ನಂದೀಶ್ ತನ್ನ ಮಗುವನ್ನು ಸಾಯಿಸಿದ್ದಾನೆ.

ವೃತ್ತಿಯಿಂದ ಮೆಕ್ಯಾನಿಕ್ ಆಗಿರುವ 25 ವರ್ಷದ ನಂದೀಶ್ ನೆಲಮಂಗಲ ತಾಲೂಕಿನ ಆದಿ ಹೊಸಹಳ್ಳಿಯ ನಿವಾಸಿ. ತುಮಕೂರಿನ ಶಿರಾ ಗೇಟ್ ನಿವಾಸಿ ಸವಿತಾ ಎಂಬುವವರನ್ನು ಮದುವೆಯಾಗಿದ್ದ ಈತ ಸುಖ ಸಂಸಾರಸ್ಥನಾಗಿದ್ದ.

ಆದರೆ, ಇತ್ತೀಚೆಗೆ ಹುಟ್ಟಿದ ಮಗಳ ಭವಿಷ್ಯ ಕೇಳಲು ಹೋಗಿದ್ದಾನೆ. ಶಾಸ್ತ್ರ ಹೇಳುವವನು, ಇನ್ನು ಎರಡು ತಿಂಗಳಲ್ಲಿ ನೀನು ಅಥವಾ ನಿನ್ನ ಮಗಳು ಇಬ್ಬರಲ್ಲಿ ಒಬ್ಬರು ಮಾತ್ರ ಉಳಿಯಲು ಸಾಧ್ಯ. ನಿನ್ನ ಮಗು ಇಲ್ಲದಿದ್ದರೆ ನೀನು ಸುಖವಾಗಿರಬಹುದು ಎಂದು ಹೇಳಿದ್ದಾನೆ.

ಇದನ್ನೇ ನಂಬಿಕೊಂಡ ನಂದೀಶ್, ಕಸದ ರಾಶಿಯಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲಿ ತೆಗೆದುಕೊಂಡು ಅದರಲ್ಲಿ ಕತ್ತೆ ಹಾಲು ಹಾಕಿ, ವಿಷಬೆರಸಿ ಮಗುವಿಗೆ ಕುಡಿಸಿದ್ದಾನೆ. ಹಾಲು ಕುಡಿದ ಮಗು ಕ್ಷಣಾರ್ಧದಲ್ಲೇ ಅಸುನೀಗಿದೆ.

ಮಗುವಿನ ಸ್ಥಿತಿ ಕಂಡು ಕಂಗಾಲಾದ ಸವಿತಾ, ತನ್ನ ಪತಿ ನಂದೀಶ್ ಮೇಲೆ ದೂರು ನೀಡಿದ್ದಾಳೆ. ಸದ್ಯ ಪೊಲೀಸರ ಅತಿಥಿಯಾಗಿರುವ ನಂದೀಶ್ ತನ್ನ ಜೀವ ಉಳಿಸಿಕೊಳ್ಳಲು ಮಗುವನ್ನು ಬಲಿ ಕೊಟ್ಟೆ ಎಂದು ಹೇಳಿಕೆ ನೀಡಿದ್ದಾನೆ.

ಕಾಕತಾಳೀಯವೆಂಬಂತೆ, 'ವಿಷಯುಕ್ತ ಹಾಲು' ಸೋಮವಾರ(ಆ.20) ಎಲ್ಲಾ ಮಾಧ್ಯಮಗಳಲ್ಲಿ ಹರಿದಾಡಿದೆ. ಕೆಎಂಎಫ್ ನಂದಿನಿ ಹಾಲು ವಿಷಯುಕ್ತವಾಗಿದೆ. ಯಾರೂ ನಂದಿನಿ ಹಾಲು ಕುಡಿಯಬೇಡಿ ಎಂಬ ಎಸ್ ಎಂಎಸ್ ಗಳು ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತ್ತು. ಮಂಗಳೂರು ಮಾತ್ರವಲ್ಲದೆ, ಹಾಸನ, ಚಿಕ್ಕಮಗಳೂರು ಕಡೆಗೂ ಈ ಎಸ್ ಎಂಎಸ್ ಗಳು ಹಬ್ಬಿತ್ತು. ಲಕ್ಷಾಂತರ ಲೀಟರ್ ಗಟ್ಟಲೆ ಹಾಲು ಮಾರಾಟವಾಗದೆ ಹಾಗೆ ಉಳಿದಿತ್ತು.

ಹಾಲು ಕೊಂಡುಕೊಂಡ ಗ್ರಾಹಕರು ಬೆಳಗ್ಗಿನಿಂದ ಹಾಲು, ಕಾಫಿ, ಚಹಾ ಏನನ್ನೂ ಸೇವಿಸದೆ ಭಯಕಂಪಿತರಾಗಿದ್ದರು. ಇತ್ತ ನೆಲಮಂಗಲದಲ್ಲಿ ಕತ್ತೆ ಹಾಲನ್ನು ಕಲುಷಿತಗೊಳಿಸಿ ವಿಷ ಬೆರೆಸಿದ ತಂದೆಯೊಬ್ಬ ಅಮಾನುಷ ಕೃತ್ಯ ಎಸೆಗಿದ್ದಾನೆ. ಅತ್ತ ಮಂಗಳೂರು ಕಡೆ ಕಲುಷಿತಗೊಂಡ ಮನಸ್ಸುಗಳು ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ಆತಂಕಕ್ಕೆ ದೂಡುತ್ತಿದ್ದಾರೆ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A father kills his 20 day old child by feeding donkey's milk laced with poison at Nelamangala taluk in Bangalore district, The accused 25 year old father Nandish said he did the crime after fortune tellers advice

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more