ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೊಚ್ಚಿಗೆಬ್ಸಿದ್ರೆ ಸುಮ್ನಿರೋಲ್ಲ: ಸದಾನಂದ ರೋಷಾವೇಶ

By Srinath
|
Google Oneindia Kannada News

dk-people-will-erupt-if-provoked-sadananda-gowda
ಮೈಸೂರು, ಆ. 20: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಟಾಂಗ್ ನೀಡುವ ಆವೇಶದಲ್ಲಿ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ತೀವ್ರ ರೋಷಾವೇಶ ಹೊರಹಾಕಿದ್ದಾರೆ. ದಕ್ಷಿಣ ಕನ್ನಡ ಜನರನ್ನು ರೊಚ್ಚಿಗೆಬ್ಬಿಸಿದರೆ ಸುಮ್ಮನಿರೋಲ್ಲಾ ಎಂದಿದ್ದಾರೆ.

ಕರಾವಳಿಯ ಜನ ಅಲ್ಲಿನ ಪಶ್ಚಿಮಘಟ್ಟಗಳಂತೆ ಸದೃಢ, ಶಾಂತರೂಪಿಗಳು. ಆದರೆ ಅವರನ್ನು ಕೆಣಕಿದರೆ ಸಾಗರದಂತೆ ವಿಸ್ಫೋಟಿಸುತ್ತಾರೆ ಎಂದು ಸದಾನಂದ ಗೌಡರು ಘರ್ಜಿಸಿದ್ದಾರೆ. ಸಂದರ್ಭ: ದಕ್ಷಿಣ ಕನ್ನಡ ಜಿಲ್ಲಾ ಸಂಘವು ನಿನ್ನೆ ಭಾನುವಾರ ಸಾಂಸ್ಕೃತಿಕ ನಗರಿಯಲ್ಲಿ ಸದಾನಂದ ಗೌಡರಿಗೆ ಆತ್ಮೀಯ ಸನ್ಮಾನವನ್ನು ಹಮ್ಮಿಕೊಂಡಿತ್ತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸದಾನಂದರು ನಮ್ಮಲ್ಲಿ ಮೇರು ಪರ್ವತಗಳಿವೆ. ಹಾಗೆಯೇ, ವಿಶಾಲ ಸಮುದ್ರವೂ ಇದೆ. ನಮ್ಮ ಜನ ಅವಿನಾಭಾವದಿಂದ ಸ್ಥಳೀಯ ಭೂಗುಣವನ್ನು ಮೈಗೂಡಿಸಿಕೊಂಡಿದ್ದಾರೆ. ನಮ್ಮ ಜನ ವಿಭಿನ್ನವಾಗಿದ್ದಾರೆ.

ಇಲ್ಲಿನ ಜನ ಹಾವುಗಳನ್ನೂ ಪೂಜಿಸುತ್ತಾರೆ; ಭೂತಗಳನ್ನೂ ಪೂಜಿಸುತ್ತಾರೆ. ಅದರೆ ಬೇರೆಯವರಿಗೆ ಇದರ ಬಗ್ಗೆ ಭಯಂಕರ ಭಯವಿದೆ ಎಂದು ಸದಾನಂದರು ತಮ್ಮ ರಾಜಕೀಯ ವಿರೋಧಿಗಳನ್ನು ತೀಕ್ಷಣವಾಗಿ ಎಚ್ಚರಿಸಿದ್ದಾರೆ.

ಕರಾವಳಿಯ ಜನರ ಧನಾತ್ಮಕ ಗುಣಗಳನ್ನು ಎಳೆ ಎಳೆಯಾಗಿ ಪರಿಚಯಿಸಿದ ಮಾಜಿ ಮುಖ್ಯಮಂತ್ರಿ, ಇತರೆ ಜನರ ಜತೆ ಅವರು ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಮತ್ತು ತಾವು ಯಾವ ಊರು ಸೇರಿಕೊಳ್ಳುತ್ತಾರೋ ಅದರ ಪುರೋಭಿವೃದ್ಧಿಗೆ ಶ್ರಮಿಸುತ್ತಾರೆ. ಕರಾವಳಿ ಜನರನ್ನು ಜಗತ್ತಿನ ಯಾವ ಮೂಲೆಯಲ್ಲಿ ಬೇಕಾದರೂ ಕಾಣಬಹುದು ಎಂದು ಮೆಚ್ಚುಗೆ ಸೂಚಿಸಿದರು.

ಉಡುಪಿಯನ್ನು ದಕ್ಷಿಣ ಕನ್ನಡದಿಂದ ಬೇರ್ಪಡಿಸಿದ್ದರ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸದಾನಂದ ಗೌಡರು ಕಂದಾಯ ಇಲಾಖೆಯಿಂದ ಈ ಭಾಗದ ಜನ ಇಬ್ಭಾಗವಾಗಿದ್ದರೂ ಸಾಂಸ್ಕೃತಿಕವಾಗಿ ಮತ್ತು ಪಾರಮಾರ್ಥಿಕವಾಗಿ ಒಗ್ಗೂಡೇ ಇದ್ದಾರೆ ಎಂದೂ ಸದಾನಂದರು ಹೇಳಿದರು.
ಸಮಾರಂಭದಲ್ಲಿ ಆಲ್ವಾಸ್ ಶೈಕ್ಷಣಿಕ ಸಂಸ್ಥೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

English summary
Dakshina Kannada People will Erupt if Provoked said sadananda gowda in Mysore yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X