ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಡಿ ಮೇಲಿಂದ ಬಿದ್ದು 2 ವರ್ಷದ ಮಗು ಸಾವು

By Prasad
|
Google Oneindia Kannada News

Baby falls from 2nd floor, dies
ಬೆಂಗಳೂರು, ಆ. 20 : ಚೆಂಡಿನ ಆಟವಾಡುತ್ತಿದ್ದ ಮಗು ವಸತಿ ಸಮುಚ್ಚಯದ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ದಾರುಣ ಸಾವನ್ನಪ್ಪಿದ ಘಟನೆ ಮೈಕೋ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ವಿಜಯ ಬ್ಯಾಂಕ್ ಕಾಲೋನಿಯಲ್ಲಿ ಚೈತ್ರಶ್ರೀ ಅಪಾರ್ಟ್ ಮೆಂಟಿನಲ್ಲಿ ಸೋಮವಾರ ಮಧ್ಯಾಹ್ನ ಘಟಿಸಿದೆ.

ದುರಂತ ಸಾವನ್ನಪ್ಪಿದ ಮಗುವನ್ನು ಪೂರ್ವಜ್ (2) ಎಂದು ಗುರುತಿಸಲಾಗಿದೆ. ಮಧ್ಯಾಹ್ಮ 12.30ರ ಸುಮಾರಿಗೆ ನೆರೆಮನೆಯ ಮಗುವಿನೊಂದಿಗೆ ಚೆಂಡಿನಾಟವಾಡುತ್ತಿದ್ದ ಪೂರ್ವಜ್ ಅಪಾರ್ಟ್‌ಮೆಂಟಿನ 2ನೇ ಮಹಡಿಯ ಮೇಲಿಂದ ಕೆಳಗೆಬಿದ್ದ ಚೆಂಡನ್ನು ನೋಡಲು ಬಾಲ್ಕನಿಯ ಗ್ರಿಲ್ ಮೂಲಕ ಬಾಗಿದಾಗ ಕೆಳಗೆ ಬಿದ್ದಿದ್ದಾನೆ. ಮಗು ತೂರುವಷ್ಟು ಗ್ರಿಲ್ ಅಗಲವಾಗಿದ್ದುದೇ ದುರಂತಕ್ಕೆ ಕಾರಣವಾಗಿದೆ.

ಆ ಸಂದರ್ಭದಲ್ಲಿ ಮಗುವಿನ ತಾಯಿ ಲಕ್ಷ್ಮಮ್ಮ ಮತ್ತು ಪಕ್ಕದ ಮನೆಯ ಮಹಿಳೆ ಮಾತಿನಲ್ಲಿ ಮೈಮರೆತಿದ್ದರು. ಪೂರ್ವಜ್ ಕೆಳಗೆ ಬಿದ್ದ ಸಂಗತಿಯನ್ನು ಅವನೊಂದಿಗೆ ಆಟವಾಡುತ್ತಿದ್ದ ಮಗು ತಾಯಂದಿರಿಗೆ ಹೇಳಿದೆ. ಕೂಡಲೆ ಕೆಳಗೆ ಬಂದು ಪೂರ್ವಜ್‌ನನ್ನು ಫೋರ್ಟಿಸ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ, ಚಿಕಿತ್ಸೆ ಫಲಕಾರಿಯಾಗದೆ 3.30ರ ಸುಮಾರಿಗೆ ಪೂರ್ವಜ್ ಇಹಲೋಕವನ್ನು ತ್ಯಜಿಸಿದ್ದಾನೆ. ಹನಿವೆಲ್ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪೂರ್ವಜ್ ತಂದೆ ಗಿರಿಬಾಬು ಎಂಬುವವರು ಮಗು ಬಿದ್ದ ಕ್ಷಣದಲ್ಲಿ ಕಚೇರಿಯಲ್ಲಿ ಕೆಲಸದಲ್ಲಿ ನಿರತರಾಗಿದ್ದರು. ಮಗು ಹೇಗಿದ್ದರೂ ತನ್ನಷ್ಟಕ್ಕೆ ತಾನು ಆಟವಾಡಿಕೊಂಡಿರುತ್ತದೆ ಬಿಡು ಎಂದು ನಿರ್ಲಕ್ಷ್ಯ ವಹಿಸಿದ್ದಕ್ಕೆ ಮಗುವನ್ನೇ ಕಳೆದುಕೊಂಡಂತಾಗಿದೆ.

ಬೆಂಗಳೂರಿನಲ್ಲಿ ಬಹುಸಂಖ್ಯೆಯಲ್ಲಿ ಜನತೆ ಇಂದು ಗಗನಚುಂಬಿ ಅಪಾರ್ಟ್‌ಮೆಂಟಿನಲ್ಲಿ ವಾಸಿಸುತ್ತಿದ್ದಾರೆ. ಕಟ್ಟಡ ನಿರ್ಮಿಸುವಾಗಲೆ ಹಲವೆಡೆಗಳಲ್ಲಿ ಸಾಕಷ್ಟು ಎಚ್ಚರಿಕೆ ತೆಗೆದುಕೊಂಡಿರುತ್ತಾರಾದರೂ ಇಂಥಲ್ಲಿ ವಾಸಿಸುವ ಪಾಲಕರು ತಮ್ಮ ಮಕ್ಕಳನ್ನು ಸಾಕಷ್ಟು ಎಚ್ಚರಿಕೆಯಿಂದಲೇ ನೋಡಿಕೊಳ್ಳಬೇಕು. ಪೂರ್ವಜ್ ಪಾಲಕರು ಮಗುವನ್ನು ಕಳೆದುಕೊಂಡಿದ್ದರೂ ಆತನ ಕಣ್ಣನ್ನು ದಾನ ಮಾಡಿ, ಬೇರೆಯವರು ಪಡೆದ ದೃಷ್ಟಿಯಲ್ಲಿಯೇ ತಮ್ಮ ಮಗನನ್ನು ನೋಡಬೇಕೆಂದು ಬಯಸಿದ್ದಾರೆ.

English summary
2 year old male baby died after it fell from 2nd floor of Chaitra apartment in Vijaya Bank layout in Mico layout police station limit in Bangalore on Monday, August 20, 2012. The parents wants to keep in alive by donating his eyes. May his soul rest in peace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X