ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರ್ಯಾಣ ಸಚಿವ ಗೋಪಾಲ್ ಕಂಡಾ ಶರಣಾಗತಿ

By Mahesh
|
Google Oneindia Kannada News

Gopal Kanda
ನವದೆಹಲಿ, ಆ.18: ಮಾಜಿ ಗಗನಸಖಿ ಗೀತಿಕಾ ಶರ್ಮ ಆತ್ಮಹತ್ಯೆ ಪ್ರಕರಣದ ಆರೋಪ ಆರೋಪ ಹೊತ್ತು ನಾಪತ್ತೆಯಾಗಿದ್ದ ಹರ್ಯಾಣ ಸಚಿವ ಗೋಪಾಲ್ ಕಾಂಡ ಪೊಲೀಸರಿಗೆ ಶನಿವಾರ(ಆ.18) ಮುಂಜಾನೆ ಶರಣಾಗಿದ್ದಾರೆ, ಹೈಕೋರ್ಟಿನಲ್ಲಿ ಗೋಪಾಲ್ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರಗೊಂಡಿತ್ತು.

ಇದೀಗ ಬಂದ ಸುದ್ದಿ [ಸಮಯ ಸಂಜೆ 5.30] : ಕಂಡಾ ಅವರ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ರೋಹಿಣಿ ಕೋರ್ಟ್ ಗೆ ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗೆ ಕಂಡಾ ಅವರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ದೆಹಲಿ ಪೊಲೀಸರು ಸಲ್ಲಿಸಿದ ಮನವಿಗೆ ಕೋರ್ಟ್ ಪುರಸ್ಕರಿಸಿದೆ. ಕಂಡಾ ಅವರನ್ನು 7 ದಿನಗಳ ದೆಹಲಿ ಪೊಲೀಸರ ವಶಕ್ಕೆ ನೀಡಲಾಗಿದೆ.

ಗೀತಿಕಾ ಅವರ ಆತ್ಮಹತ್ಯೆ ನಡೆದು 13 ದಿನಗಳ ಬಳಿಕ ಆರೋಪಿ ಸಚಿವ ಗೋಪಾಲ್ ಅವರ ಮೇಲೆ ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು. ದೆಹಲಿಯ ರೋಹಿಣಿ ಕೋರ್ಟ್ ಗುರುವಾರ(ಆ.16) ಕಾಂಡ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿತ್ತು.

ಶನಿವಾರ ಮುಂಜಾನೆ 4 ಗಂಟೆಗೆ ಭರತ್ ನಗರ ಪೊಲೀಸ್ ಠಾಣೆ ತಲುಪಿದ ಸಚಿವ ಗೋಪಾಲ್ ಅವರು ಶರಣಾಗಿದ್ದಾರೆ ನಾವು ಅವರನ್ನು ಬಂಧಿಸಿದ್ದೇವೆ ಎಂದು ಡಿಸಿಪಿ ಕರುಣಾಕರಣ್ ಅವರು ದೃಢಪಡಿಸಿದ್ದಾರೆ.

ಈ ನಡುವೆ ಸಿಕ್ಕಿಬಿದ್ದಿರುವ ಗೋಪಾಲ್ ಆಪ್ತೆ ಅರುಣಾ ಚಡ್ಡಾ ವಿಚಾರಣೆ ವೇಳೆ ಕುತೂಹಲ ಮಾಹಿತಿಯನ್ನು ಹೊರ ಹಾಕಿದ್ದಾರೆ. ಗೀತಿಕಾಗೆ ಗರ್ಭಸ್ರಾವವಾಗಿತ್ತು. ಸಚಿವ ಗೋಪಾಲ್ ಆಕೆಗೆ 400ಕ್ಕೂ ಅಧಿಕ ಎಸ್ ಎಂಎಸ್ ಕಳಿಸಿದ್ದ ಎಂದಿದ್ದಾರೆ.

ತನಿಖೆ ತಿರುವು: ದೆಹಲಿ ಪೊಲೀಸರು ಗೋಪಾಲ್ ಅವರು ಗೀತಿಕಾಗೆ ಕಳಿಸಿದ್ದಾರೆ ಎನ್ನಲಾದ 400ಕ್ಕೂ ಅಧಿಕ ಎಸ್ ಎಂಎಸ್ ಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ. ಎಸ್ ಎಂಎಸ್ ಗಳನ್ನು ಡಿಕೋಡ್ ಮಾಡಿದ ಮೇಲೆ ಹೆಚ್ಚಿನ ವಿಚಾರಣೆ ಮುಂದುವರೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದರು.

23 ವರ್ಷದ ಗೀತಿಕಾ ಶರ್ಮ ತನ್ನ ಸೂಸೈಡ್ ನೋಟ್ ನಲ್ಲಿ ಸಚಿವ ಗೋಪಾಲ್ ಹಾಗೂ ಅರುಣ್ ಅವರ ಹೆಸರು ಉಲ್ಲೇಖಿಸಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಚಿವ ಸ್ಥಾನ ಗೋಪಾಲ್ ರಾಜೀನಾಮೆ ನೀಡಿದ ಮೇಲೆ ಪರಾರಿಯಾಗಿದ್ದಾರೆ.

ಈ ನಡುವೆ ಸಿಕ್ಕಿಬಿದ್ದಿರುವ ಗೋಪಾಲ್ ಆಪ್ತೆ ಅರುಣಾ ಚಡ್ಡಾ ವಿಚಾರಣೆ ವೇಳೆ ಕುತೂಹಲ ಮಾಹಿತಿಯನ್ನು ಹೊರ ಹಾಕಿದ್ದಾರೆ. ಗೀತಿಕಾಗೆ ಗರ್ಭಸ್ರಾವವಾಗಿತ್ತು ಎಂದು ಅರುಣಾ ಚಡ್ಡಾ ಹೇಳಿಕೆ ನೀಡಿದ್ದರು. ಆದರೆ, ಈ ಹೇಳಿಕೆಯನ್ನು ಖಂಡಿಸಿರುವ ಗೀತಿಕಾ ಸೋದರ ಅಂಕಿತ್, ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಸತ್ಯ ಹೊರಬೀಳಲಿದೆ. ಗೋಪಾಲ್ ರನ್ನು ರಕ್ಷಿಸುವ ಕಾರ್ಯ ನಡೆದಿದೆ ಎಂದು ಆರೋಪಿಸಿದ್ದಾರೆ.

ದೆಹಲಿ ಪೊಲೀಸರು ಗೋಪಾಲ್ ಅವರು ಗೀತಿಕಾಗೆ ಕಳಿಸಿದ್ದಾರೆ ಎನ್ನಲಾದ 400ಕ್ಕೂ ಅಧಿಕ ಎಸ್ ಎಂಎಸ್ ಗಳನ್ನು ಸ್ಕ್ಯಾನ್ ಮಾಡುತ್ತಿದ್ದಾರೆ. ಎಸ್ ಎಂಎಸ್ ಗಳನ್ನು ಡಿಕೋಡ್ ಮಾಡಿದ ಮೇಲೆ ಹೆಚ್ಚಿನ ವಿಚಾರಣೆ ಮುಂದುವರೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ನಡುವೆ ನಾಪತ್ತೆಯಾಗಿರುವ ಗೋಪಾಲ್ ಕಂಡಾ ಸಾಕ್ಷ್ಯ ನಾಶ ಮಾಡುವ ಭೀತಿ ಎದುರಾಗಿದ್ದು, ಎಂಡಿಎಲ್ ಆರ್ ಕಚೇರಿ ವಶಕ್ಕೆ ಪಡೆಯಲು ಪೊಲೀಸರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

English summary
Controversial former Haryana Minister Gopal Kanda surrendered before police early this morning and was arrested, 13 days after the suicide of his former employee, who accused him of abetting her suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X