• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಶಿಗಟ್ಟಲೆ SMS, MMS ಗೆ ನಿಷೇಧ

By Mahesh
|
ಬೆಂಗಳೂರು, ಆ.17: ಈಶಾನ್ಯ ಭಾರತದ ಗಲಭೆಗೆ ಸಾಮಾಜಿಕ ಜಾಲ ತಾಣಗಳು ಹಾಗೂ ಎಸ್ ಎಂಎಸ್ ಸಂದೇಶಗಳೇ ಕಾರಣ ಎಂದು ನಂಬಿರುವ ಕೇಂದ್ರ ಸರ್ಕಾರ ಮಹತ್ವದ ನಿರ್ಣಯವನ್ನು ಕೈಗೊಂಡಿದೆ. ಮುಂದಿನ 15 ದಿನಗಳ ಕಾಲ ರಾಶಿಗಟ್ಟಲೆ ಎಸ್ ಎಂಎಸ್, ಎಂಎಂಎಸ್ ಗಳನ್ನು ಕಳಿಸುವುದಕ್ಕೆ ನಿಷೇಧ ಹೇರಲಾಗಿದೆ.

ಸ್ವಾತಂತ್ರೋತ್ಸವ ದಿನಾಚರಣೆ ದಿನದಂದು ಈಗೊಂದು ನಿರ್ಣಯವನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದೆ ಎಂಬ ಸುದ್ದಿ ಹಬ್ಬಿತ್ತು. ಈಗ ಅದರಂತೆ, ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ಜನರ ಭೀತಿಗೆ ಕಾರಣವಾಗಿರುವ ಸಾಮಾಜಿಕ ಜಾಲ ತಾಣಗಳು ಹಾಗೂ ಮೊಬೈಲ್ ಸಂದೇಶಗಳ ಮೇಲೆ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.

Bulk sms, mms banned ಎಂದು ಸರ್ಕಾರ ಘೋಷಿಸಿದೆ.

ಸಾಮಾಜಿಕ ಭದ್ರತೆಗೆ ಧಕ್ಕೆ ತರುವ ಸಂದೇಶ ಹರಡಲು ವೇದಿಕೆಯಾಗಿ ಗಲಭೆ ಹಬ್ಬಲು ಕಾರಣವಾಗಿರುವ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟರ್ ಗಳನ್ನು ಕೆಲ ದಿನಗಳ ಮಟ್ಟಿಗೆ ನಿಷೇಧಿಸುವಂತೆ ಮಹಾರಾಷ್ಟ್ರ ಗೃಹ ಸಚಿವ ಆರ್ ಆರ್ ಪಾಟೀಲ್ ಹಾಗೂ ಸಮಾಜವಾದಿ ಪಕ್ಷದ ಸಂಸದ ರಾಮ ಗೋಪಾಲ್ ಯಾದವ್ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು.

ಬೆಂಗಳೂರು ಅಷ್ಟೇ ಅಲ್ಲದೆ ಪುಣೆ, ಹೈದರಾಬಾದ್, ಚೆನ್ನೈ ಹಾಗೂ ಭಾರತದ ಇತರೆ ನಗರಗಳಿಂದ ಈಶಾನ್ಯ ಭಾರತ ಮೂಲದ ಜನರು ತಮ್ಮ ಊರಿಗೆ ವಾಪಸ್ ಹೋಗುತ್ತಿರುವುದು ಶುಕ್ರವಾರ ಕೂಡಾ ಮುಂದುವರೆದಿದೆ.

ಭದ್ರತೆಯ ಭರವಸೆ ಕೊಡುವ ಮೊದಲು ಸುಳ್ಳು ಸುಳ್ಳು ಸಂದೇಶಗಳನ್ನು ಹರಡುವ ಮಾರ್ಗಗಳನ್ನು ಬಂದ್ ಮಾಡಬೇಕು. ಇಲ್ಲದಿದ್ದರೆ ಅನ್ಯಧರ್ಮೀಯರು ಸಂದೇಶ ಕಳಿಸಿ ಶಾಂತಿ ಕದಡುತ್ತಿದ್ದಾರೆ ಎಂಬ ತಪ್ಪು ಸಂದೇಶ ನೀಡಿದ್ದಂತಾಗುತ್ತದೆ ಎಂದಿದ್ದಾರೆ.

ಎಸ್ ಎಂಎಸ್ ಗಳ ಮೂಲಕ ವದಂತಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳ ಜನತೆ ಭಯಭೀತರಾಗಿ ತಮ್ಮೂರಿಗೆ ಹೋಗುತ್ತಿದ್ದಾರೆ ಎಂಬುದು ದೃಢಪಟ್ಟಿರುವುದರಿಂದ ಕೇಂದ್ರ ಗೃಹ ಸಚಿವಾಲಯ ಎಸ್ಎಂಎಸ್ ನಿಷೇಧದ ನಿರ್ಣಯ ಕೈಗೊಂಡಿದೆ.

ಮೊಬೈಲ್ ಸಂದೇಶಗಳ ನಿಷೇಧದ ಮುಂದಿನ ಭಾಗವಾಗಿ ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್ ಹಾಗೂ ಟ್ವಿಟರ್ ಗಳನ್ನು ಕೆಲ ದಿನಗಳ ಮಟ್ಟಿಗೆ ನಿಷೇಧ ಹೇರುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ಅಖಿಲ ಭಾರತ ಯುನೈಟೆಡೆ ಡೆಮಾಕ್ರೆಟಿಕ್ ಫ್ರಂಟ್‌ನ ಅಧ್ಯಕ್ಷ ಬದಾರುದ್ದಿನ್ ಅಜ್ಮಲ್ ಎಂಬಾತನೇ ಬೆಂಗಳೂರು ಮತ್ತಿತರ ರಾಜ್ಯಗಳಲ್ಲಿರುವ ಅಸ್ಸಾಂ ವಿದ್ಯಾರ್ಥಿಗಳಲ್ಲಿ ಭೀತಿಯನ್ನು ಬಿತ್ತುತ್ತಿದ್ದಾನೆ ಎಂದು ಆರೋಪಿಸಿರುವುದು ಫಸ್ಟ್ ಪೋಸ್ಟ್ ತಾಣದಲ್ಲಿ ವರದಿಯಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian government took an extreme step of banning bulk SMS and MMS for next 15 days, an announcement confirmed the news on Friday, Aug 15. The decision of banning bulk SMS and MMS has been taken following the rumours that social media and other sources of technology have been used to threat people from NE.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more