• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಬೆದರಿಕೆ ಇದೆಯೋ ಇಲ್ಲವೋ ಅಸ್ಸಾಂ ಮರಳಬೇಕಷ್ಟೆ'

By Prasad
|
ಬೆಂಗಳೂರು, ಆ. 17 : ಅಸ್ಸಾಂಗೆ ವಾಪಸ್ ಹೋಗಬೇಕೆಂದು ನಗರ ರೈಲು ನಿಲ್ದಾಣದಲ್ಲಿ ನೆರೆದಿದ್ದ ಮೂರು ಸಾವಿರಕ್ಕೂ ಹೆಚ್ಚು ಅಸ್ಸಾಂ ನಾಗರಿಕರೆಲ್ಲ ನಿರ್ಧಾರ ತಳೆದು ಆಗಿತ್ತು. ರಾಜ್ಯ ಸರಕಾರದ ಮಂತ್ರಿಗಳು, ಮುಸ್ಲಿಂ ಸಂಘಟನೆಗಳು, ಆರೆಸ್ಸೆಸ್ ಕಾರ್ಯಕರ್ತರು, ಪೊಲೀಸರಿರಲಿ ಆ ಭಗವಂತನೇ ಬಂದರೂ ತಾವು ತಳೆದಿರುವ ನಿರ್ಧಾರದಿಂದ ಹಿಂದೆ ಸರಿಯಲು ಅವರಾರೂ ಸಿದ್ಧರಿಲ್ಲ.

ಭಯ ಹುಟ್ಟಿಸುವವರಿಂದ ಸಂಪೂರ್ಣ ರಕ್ಷಣೆ ನೀಡುವುದಾಗಿ ಸರಕಾರ ಭರವಸೆ ನೀಡಿದ್ದು, ನಾನಾ ಸಂಘಟನೆಗಳು ಆಶ್ರಯ ನೀಡುವುದಾಗಿ ಹೇಳಿರುವುದು ಸಂಪೂರ್ಣ ನಿರರ್ಥಕವಾಗಿದೆ. ಸಮೂಹ ಸನ್ನಿಗೆ ಒಳಗಾದವರಂತೆ ಲಾರಿಯಲ್ಲಿ ಕುರಿಗಳನ್ನು ತುಂಬಿದವರಂತೆ ಬೆಂಗಳೂರಿನಲ್ಲಿ ಕೆಲಸಕ್ಕೆಂದು ಬಂದಿದ್ದ ಅಸ್ಸಾಮೀಯರೆಲ್ಲ ರೈಲಿನಲ್ಲಿ ತುಂಬಿಕೊಂಡು ಮರಳುತ್ತಿದ್ದಾರೆ. [ಗ್ಯಾಲರಿ]

ಅವರ ಮನಃಪರಿವರ್ತನೆ ಸದ್ಯಕ್ಕೆ ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥಹ ಪರಿಸ್ಥಿತಿಯಲ್ಲಿ ಅವರೆಲ್ಲರನ್ನು ಕಾಡಿಬೇಡಿ ಇಲ್ಲಿ ಉಳಿಸಿಕೊಳ್ಳುವ ಬದಲು ಸುರಕ್ಷಿತವಾಗಿ ಮರಳಿ ಕಳಿಸಿಕೊಡಬೇಕಾದ ಜವಾಬ್ದಾರಿ ಸರಕಾರದ ಮೇಲಿದೆ. ಅಲ್ಲಿರುವ ತಮ್ಮವರು ಸುರಕ್ಷಿತವಾಗಿದ್ದಾರೆ, ಇಲ್ಲಿನ ಪರಿಸ್ಥಿತಿ ಬದುಕಲು ತಿಳಿಯಾಗಿದೆ ಎಂದು ಮನವರಿಕೆಯಾದಾಗ ಅವರೇ ಮರಳಿ ಬರುತ್ತಾರೆ.

ಈಗ ಮರಳುತ್ತಿರುವವರೆಲ್ಲ ಕೂಲಿ ಕೆಲಸಗಾರರು, ಭದ್ರತಾ ಸಿಬ್ಬಂದಿಗಳು, ಹೊಟೇಲ್ ಮಾಣಿಗಳು, ಬ್ಯೂಟಿ ಪಾರ್ಲರುಗಳಲ್ಲಿ ಚಾಕರಿ ಮಾಡುತ್ತಿರುವವರು, ಹೆಚ್ಚಾಗಿ ವಿದ್ಯಾರ್ಥಿಗಳು. ಇವರಲ್ಲಿ ಉನ್ನತ ಅಧ್ಯಯನ ಮಾಡಿರುವವರು, ಉನ್ನತ ಹುದ್ದೆಯಲ್ಲಿರುವವರು ತುಂಬಾ ಕಡಿಮೆ. ಇವರಲ್ಲಿ ಶೇ.90ರಷ್ಟು ಜನರಿಗೆ ವಸ್ತುಸ್ಥಿತಿಯ ಅರಿವಿಲ್ಲ. ಎಲ್ಲರೂ ಹೊರಡುತ್ತಿದ್ದಾರೆ, ನಾವೂ ಹೊರಡಬೇಕು ಎಂಬ ಮನಸ್ಥಿತಿಯಿರುವವರು.

ಶುಕ್ರವಾರ ಮಧ್ಯಾಹ್ನ ಕೂಡ ಬೆಂಗಳೂರು ರೈಲು ನಿಲ್ದಾಣದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರು ನೆರೆದಿದ್ದರು. ಮರಳಲು ಸಿದ್ಧರಾಗಿದ್ದರು, ವಾಪಸ್ ಬರುತ್ತೇವೆಂಬ ನಂಬಿಕೆ ಅನೇಕರಲ್ಲಿ ಇಲ್ಲವೇ ಇಲ್ಲ. "ಅಸ್ಸಾಂ ಹಳ್ಳಿಹಳ್ಳಿಗಳಲ್ಲಿ ಸಂಕಷ್ಟದಲ್ಲಿರುವ ಬಂಧುಗಳು ಬಾ ಎಂದು ಕರೆಯುತ್ತಿದ್ದಾರೆ, ಹೋಗಬೇಕು. ನಮಗೆ ರೈಲಿನ ವ್ಯವಸ್ಥೆ ಮಾಡಿಕೊಡಿ ಸಾಕು" ಎಂದು ಅವರು ಗೋಗರೆಯುತ್ತಿದ್ದರು.

ಅಕ್ಸೆಂಚರ್ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರಾಗಿ ಕೆಲಸ ಮಾಡುವ ಅಭಿಷೇಕ್ ರಾಜಪಾಲ್ ಪ್ರಕಾರ, "ಆತ್ಮವಿಶ್ವಾಸ ಇಲ್ಲದಿರುವುದು, ಒಟ್ಟಾಗಿ ಹೋರಾಡಲು ಚೈತನ್ಯ ಇಲ್ಲದಿರುವುದು ಅಸ್ಸಾಮಿಗಳೆಲ್ಲ ಮರಳಲು ಕಾರಣ. ಅಸ್ಸಾಂನಲ್ಲಿರುವ ಅವರ ತಂದೆತಾಯಿಯರೆ ಇವರ ದೊಡ್ಡ ದೌರ್ಬಲ್ಯವಾಗಿದ್ದಾರೆ. ಅಲ್ಲಿನ ಬಂಧುಗಳು ಧೈರ್ಯ ತುಂಬಿದ್ದರು ಇವರು ಮರಳಿ ಹೋಗುತ್ತಿರಲಿಲ್ಲ. ಆದರೂ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ."

"ನಮಗೆ ಯಾವುದೇ ಬೆದರಿಕೆಯ ಕರೆ ಬಂದಿಲ್ಲ, ಎಸ್ಎಮ್ಎಸ್ ಸಂದೇಶ ಕೂಡ ಬಂದಿಲ್ಲ. ಬೆದರಿಕೆಯ ಕರೆ ಸುಳ್ಳೇ ಇರಬಹುದು. ಆದರೆ, ಆಗಸ್ಟ್ 20ರ ರಂಜಾನ್ ನಂತರ ಏನಾಗುವುದೋ ಎಂಬ ಭಯ ಕಾಡುತ್ತಿದೆ. ಅಸ್ಸಾಂನ ಹಳ್ಳಿಗಳಲ್ಲಿರುವ ವಾಪಸ್ ಬರಲೇಬೇಕೆಂದು ದುಂಬಾಲು ಬಿದ್ದಿದ್ದಾರೆ. ಅಲ್ಲಿ ಇಲ್ಲಿದ್ದಿಂತಹ ಕೆಲಸ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಮುಂದಿನ ಜೀವನ ಹೇಗೆ ಎಂಬ ಬಗ್ಗೆಯೂ ಅರಿವಿಲ್ಲ" ಎಂದು ಹೇಳುತ್ತಾನೆ ಸೆಕ್ಯೂರಿಟಿ ಗಾರ್ಡ್ ಆಗಿರುವ 20ರ ಹರೆಯದ ಕಬೀರ್.

ಉಳಿಸಿಕೊಳ್ಳಲು ಆಗದಿದ್ದರೂ ಕನಿಷ್ಠಪಕ್ಷ ಹಸಿದಿರುವ ಹುಡುಗರಿಗೆ ಹೊಟ್ಟೆ ತುಂಬಿಸಿಯಾದರೂ ಕಳಿಸೋಣವೆಂದು ಅದಮ್ಯ ಚೇತನ ಸಂಸ್ಥೆ ಅವರಿಗೆಲ್ಲ ಊಟದ ವ್ಯವಸ್ಥೆ ಮಾಡಿತ್ತು. ಮಧ್ಯಾಹ್ನ 2 ಗಂಟೆಗೆ ಎರಡನೇ ಪ್ಲಾಟ್ ಫಾರಂನಿಂದ ಗುವಾಹಾಟಿಗೆ ತೆರಳಲು ರೈಲ್ವೆ ಇಲಾಖೆ ವಿಶೇಷ ರೈಲು ವ್ಯವಸ್ಥೆ ಮಾಡಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಅಸ್ಸಾಂ ಸುದ್ದಿಗಳುView All

English summary
North East exodus in Bangalore. Assamese residing in Bangalore have decided to go back to their native place in Assam. Now, not even Brahma can change their mind. So, it is better to send them back to Guwahati and expect for their comeback.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more