• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪುತ್ತೂರು: ಏಸು ಶಿಲುಬೆ ಕೆಳಗೆ ಧ್ವಜಾರೋಹಣ

|
Priest insulting tricolor in Puttur
ಪುತ್ತೂರು, ಆ 15: ದಕ್ಷಿಣಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಪರ್ಲಡ್ಕ ಚರ್ಚ್ ಆವರಣದಲ್ಲಿ ಏಸು ಕ್ರೈಸ್ತರ ಶಿಲುಬೆಯ ಕೆಳಗೆ ರಾಷ್ಟ್ರ ಧ್ವಜಾರೋಹಣ ಮಾಡಿದ ಘಟನೆ ನಡೆದಿದೆ. ಚರ್ಚ್ ಆವರಣದಲ್ಲಿರುವ ಶಿಲುಬೆಯ ಕೆಳಗೆ ಧ್ವಜವನ್ನು ಸಮರ್ಪಕವಾಗಿ ಹಾರಿಸದೆ ಮತ್ತು ಧ್ವಜಕ್ಕೆ ಕಳಪೆ ಬಟ್ಟೆ ಬಳಸಿದ ಆರೋಪ ಕೇಳಿಬಂದಿದೆ.

ಈ ಆವಾಂತರ ನಡೆದಿದ್ದು ಕೇರಳ ಮೂಲದ ಸೈರೋ ಮಲಾಂಕರ ಕ್ಯಾಥೊಲಿಕ್ ಚರ್ಚ್ ನಲ್ಲಿ. ಬಿಷಪ್ ಅನುಪಸ್ಥಿತಿಯಲ್ಲಿ ಅವರ ಸಹಾಯಕ ಫಾ. ವಿನ್ಸೆಂಟ್ ಈ ರೀತಿ ಧ್ವಜಾರೋಹಣ ನಡೆಸಿ ಈಗ ಪೋಲೀಸರ ಅತಿಥಿಯಾಗಿದ್ದಾರೆ. ಪುತ್ತೂರು ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

ಬೆಳಗ್ಗೆ ಈ ಅಸಮರ್ಪಕ ಧ್ವಜ ಹಾರಾಟ ವೀಕ್ಷಿಸಿದ ತಹಸೀಲ್ದಾರ್ ಮತ್ತು ಇತರ ಗಣ್ಯರು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆ ಅಲ್ಲಲ್ಲಿ ಪ್ರತಿಭಟನೆ

1. ಬೆಳಗಾವಿಯಲ್ಲಿ ಧ್ವಜ ಕಟ್ಟಿಗೆಗೆ ಸಂಪೂರ್ಣ ಹಸಿರು ಬಣ್ಣ ಬಳಸಲಾಗಿತ್ತು. ಈ ಸಂಬಂಧ ಹಿಂದೂ ಮತ್ತು ಮುಸ್ಲಿಂ ಪಂಗಡಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಮಧ್ಯಪ್ರವೇಶಿಸಿದ ಪೊಲೀಸರು ಎರಡೂ ಕೋಮಿನವರನ್ನು ಸಮಾಧಾನಗೊಳಿಸಿದರು.

2. ಬಾಗೇಪಲ್ಲಿಯಲ್ಲಿ ರಾಷ್ಟ್ರ ದ್ವಜವನ್ನು ತಳಕೆಳಗಾಗಿ ಹಾರಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು ಈ ಸಂಬಂಧ ಬಂಧಿಸಿ ಬಿಡುಗಡೆಗೊಳಿಸಿದ ವರದಿಯಾಗಿದೆ.

3. ರಾಯಚೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಅಸ್ನೋಟಿಕರ್ ಧ್ವಜಾರೋಹಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅಂಬೇಡ್ಕರ್ ಮಾದಿಗರ ಸಂಘಟನೆಯ ಕಾರ್ಯಕರ್ತರು ಒಳ ಮೀಸಲಾತಿ ಸಂಬಂಧ ಪ್ರತಿಭಟನೆ ನಡೆಸಿದರು.

4. ಬೀದರ್ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ವಲ್ಯಾಪುರೆ ಧ್ವಜಾರೋಹಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಪರಿಶಿಷ್ಟ ಜಾತಿಯಲ್ಲಿ ನಮನ್ನು ಸೇರ್ಪಡಿಸಬೇಕೆಂದು ಮಾದಿಗರ ಸಂಘಟನೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಸ್ವಾತಂತ್ರ್ಯೋತ್ಸವ ಸುದ್ದಿಗಳುView All

English summary
A priest, belonging to Kerala-based Catholic Church, was taken into custody for insulting the Tricolour at Parladka, Puttur here on August 15. He was charged with hoisting the National Flag in an improper manner.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more