ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವತಂತ್ರ ದಿನವೇ ಇಂಫಾಲದಲ್ಲಿ ಸರಣಿ ಸ್ಫೋಟ

By Mahesh
|
Google Oneindia Kannada News

Independence Day Bomb Blast
ಇಂಫಾಲ್, ಆ.15: ದೇಶದೆಲ್ಲೆಡೆ 66ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಮಣಿಪುರದಲ್ಲಿ ಪರೇಡ್ ನಡೆಯುತ್ತಿದ್ದ ಮೈದಾನದಿಂದ ಕೇವಲ 2 ಕಿ.ಮೀ. ದೂರದಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಈ ಸರಣಿ ಬಾಂಬ್ ಸ್ಫೋಟದಲ್ಲಿ ನಾಲ್ಕು ಜನರಿಗೆ ತೀವ್ರ ಗಾಯಗಳಾಗಿದೆ.

ಮಣಿಪುರದಲ್ಲಿ ಒಟ್ಟು ನಾಲ್ಕು ಕಡೆ ಸ್ಫೋಟ ಸಂಭವಿಸಿದೆ. ಇದರಲ್ಲಿ ಇಂಫಾಲ್ ನಲ್ಲೇ ಮೂರು ಕಡೆ ಸ್ಫೋಟ ಸಂಭವಿಸಿದೆ. ಇದು ಜನರಲ್ಲಿ ಭಾರೀ ಭೀತಿಯನ್ನು ಉಂಟು ಮಾಡಿದೆ.

ಮಣಿಪುರ ರೈಫಲ್ ಎಸ್ಟಾಬ್ಲಿಷ್ ಮೆಂಟ್ ಬಳಿ ಪ್ರಬಲ ಸ್ಫೋಟ ನಡೆದಿದ್ದು, ಗಾಯಗೊಂಡಿರುವವರ ಸಂಖ್ಯೆ ಹೆಚ್ಚಬಹುದೆಂದು ಅಂದಾಜಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವವರ ಸ್ಥಿತಿ ಚಿಂತಾಜನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರದ ಥೌಬಾಲ್ ಜಿಲ್ಲೆಯಲ್ಲಿ ಕೂಡ ಸ್ವಾತಂತ್ರ್ಯೋತ್ಸವದ ವೇಳೆ ಸ್ಫೋಟ ನಡೆದಿದ್ದು, ಇದರಲ್ಲಿ ಇಬ್ಬರು ಗಾಯಗೊಂಡಿದ್ದಾರೆ.
ಸ್ವಾತಂತ್ರೋತ್ಸವ ದಿನಾಚರಣೆಯನ್ನು ಕೈಬಿಡುವಂತೆ ಉಗ್ರಗಾಮಿ ಸಂಘಟನೆಗಳು ಸಾರ್ವಜನಿಕರಿಗೆ ಈ ಮುಂಚೆ ಎಚ್ಚರಿಕೆ ನೀಡಿದ್ದವು. 1949ರಲ್ಲಿ ಮಣಿಪುರವನ್ನು ಬಲವಂತವಾಗಿ ಭಾರತ ಗಣರಾಜ್ಯಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಉಗ್ರರು ನಂಬಿದ್ದಾರೆ.

ಉಗ್ರರ ಬೆದರಿಕೆ ನಡುವೆಯೂ ಸಾರ್ವಜನಿಕರು ಸ್ವತಂತ್ರ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇಂಫಾಲದ 1st ರೈಫಲ್ ಬ್ಯಾಟಲಿನ್ ಪೆರೇಡ್ ಮೈದಾನದಲ್ಲಿ ಮುಖ್ಯಮಂತ್ರಿ ಒ ಲೊಬೊಬಿ ಸಿಂಗ್ ಅವರು ತ್ರಿವರ್ಣ ಧ್ವಜವನ್ನು ಹಾರಿಸಿ ವಂದನೆ ಸ್ವೀಕರಿಸಿದರು.

ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಜಾಗವಿಲ್ಲ. ಉಗ್ರರ ಬೇಡಿಕೆ, ಸಮಸ್ಯೆಗಳನ್ನು ಮಾತುಕತೆ ಮೂಲಕ ಬಗೆಹರಿಸಬಹುದು ಎಂದು ಮುಖ್ಯಮಂತ್ರಿ ಸಿಂಗ್ ಹೇಳಿದರು.

ಸರಣಿ ಸ್ಫೋಟದ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ. ಯುನೈಟೆಡ್ ನ್ಯಾಷನಲ್ ಲಿಬರೇಷನ್ ಫ್ರಂಟ್, ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಂಗ್ಲೆಪಾಕ್, ರಿವಲ್ಯೂಷನರಿ ಪೀಪಲ್ಸ್ ಫ್ರಂಡ್ ಹಾಗೂ ಕಂಗ್ಲೈ ಯಾವೊಲ್ ಕನ್ನ್ ಲುಪ್ ಸಂಘಟನೆಗಳು ಸ್ವಾತ್ರಂತ್ರೋತ್ಸವ ಆಚರಣೆ ಬಹಿಷ್ಕರಿಸುವಂತೆ ಕರೆ ನೀಡಿದ್ದವು.

English summary
Serial bomb blasts marred the Independence Day celebration in Manipur on Wednesday, Aug 15. At least four people were seriously injured in the four bomb blasts in the state. No casualty has been reported yet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X