ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಬಿಪಿಒಗೆ ಬ್ರಿಟನ್ ಜೈಲುಹಕ್ಕಿಗಳ ಸವಾಲ್

By Srinath
|
Google Oneindia Kannada News

uk-prisoners-challenge-to-indian-bpos
ಲಂಡನ್, ಆ.13: ಬ್ರಿಟನ್ ಇಂಗ್ಲಿಷ್ ಧ್ವನಿಯ ಬಗ್ಗೆ ಹೆಚ್ಚು ತಿಳಿವಳಿಕೆ ಮತ್ತು ನಿಖರತೆ ಹೊಂದಿರದ ಭಾರತೀಯ ಬಿಪಿಒಗಳ ಬಗ್ಗೆ ಮೊದಲಿನಿಂದಲೂ ಬ್ರಿಟೀಷರಿಗೆ ಅನಾದರಣೆ ಇದ್ದೇ ಇದೆ. ಆದರೂ ಅವರು 'ಇಂತಹ ಭಾರತೀಯರನ್ನು' ಅವಲಂಬಿಸುವುದು ಅನಿವಾರ್ಯವಾಗಿತ್ತು, ಆದರೆ ಎಷ್ಟು ಕಾಲ ಅಂತ? ಅದೂ ಕಾಲ್ ಸೆಂಟರ್ ಯುಗದಲ್ಲಿ ಭಾರತೀಯರನ್ನು ನೆಚ್ಚಿಕೊಳ್ಳುವುದು ಬ್ರಿಟೀಷರಿಗೆ ತ್ರಾಸದಾಯಕವೆನಿಸಿದೆ.

ಹಾಗಾಗಿ, ಬ್ರಿಟನ್ನಿನ ಬಿಪಿಒಗಳು ಹೊಸ ಯತ್ನಕ್ಕೆ ಕೈಹಾಕಿವೆ. ಏನಪಾ ಅಂದರೆ ಇಲ್ಲಿನ ಜೈಲುಗಳಲ್ಲಿರುವ ಮೂಲ ಆಂಗ್ಲ ವಾಸಿಗಳನ್ನು ಬಿಪಿಒಗಳಲ್ಲಿ ಬಳಸಿಕೊಳ್ಳಲು ಇಲ್ಲಿನ ಕಾನೂನು ಸಚಿವಾಲಯವು ಆಲೋಚಿಸಿದೆ. 'ಹೇಗೂ ಅವರಿಗೂ ಉದ್ಯೋಗ ಕಲ್ಪಿಸಿದಂತಾಗುತ್ತದೆ.

ಜತೆಗೆ, 'ಭಾರತೀಯ ಬಿಪಿಒಗಳಲ್ಲಿರುವವರು ನಮ್ಮ ಇಂಗ್ಲೀಷನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಸರಿಯಾಗಿ ಅರ್ಥ ಮಾಡಿಕೊಳ್ಳದೆ ನಮ್ಮ ದಾರಿ ತಪ್ಪಿಸುತ್ತಿರುತ್ತಾರೆ' ಎಂದು ಗೋಳಾಡುವ ಆಂಗ್ಲರಿಗೂ ಸಮಂಜಸ ಸೇವೆ ಒದಗಿಸಿದಂತಾಗುತ್ತದೆ' ಎಂಬುದು ಸಚಿವಾಲಯದ ಎಣಿಕೆಯಾಗಿದೆ.

'ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಹೈರಾಣರಾದ ಖೈದಿಗಳು ಹೊಸ ಜೀವನಕ್ಕಾಗಿ ಹಾತೊರೆಯುವುದು ಸಹಜ. ಅಂತಹವರಿಗೆ ಇದು ವರವಾಗಲಿದೆ. ಹಾಗಾಗಿ, ಕೆಲವು ಕಂಪನಿಗಳ ಜತೆ ಈಗಾಗಲೇ ಈ ಸಂಬಂಧ ಮಾತುಕತೆ ನಡೆಸಲಾಗಿದೆ. ಮಾತುಕತೆ ಪೂರ್ಣವಾದ ಬಳಿಕ ಜೈಲುಗಳಲ್ಲಿರುವ ಖೈದಿಗಳನ್ನು ತನ್ನ ಬಿಪಿಒಗೆ ನೇಮಕ ಮಾಡಿಕೊಳ್ಳುವಂತೆ ಸ್ಥಳೀಯ ಕಂಪನಿಗಳನ್ನು ಕೋರಲಾಗುವುದು' ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಇದೊಂದು ರೀತಿ ಕಳ್ಳನ ಕೈಗೇ ತಿಜೋರಿಯ ಬೀಗದ ಕೈ ಕೊಟ್ಟಂತೆ. ಹೇಳಿಕೇಳಿ ಜೈಲುಗಳಲ್ಲಿರುವವರು ಅಪರಾಧಿಗಳು. ಎಷ್ಟೇ ಒಳ್ಳೆಯವರೆಂದರೂ ಒಂದಲ್ಲಾ ಒಂದು ಘಳಿಗೆಯಲ್ಲಿ ಅನಾಯಾಸಾವಾಗಿ ತಮ್ಮ ಕಿವಿಗೆ ಮಾಹಿತಿ ಬಿದ್ದಾಗ ಇವರು ಸುಮ್ಮನಿರುತ್ತಾರೆಯೇ? ಕಾಲವೇ ನಿರ್ಣಯಿಸಬೇಕು.

ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಜೈಲುಗಳಲ್ಲಿರುವ ಖೈದಿಗಳಿಗೆ ಸಂಬಳಗಳನ್ನು ನಿಗದಿಪಡಿಸುವುದು ಆಯಾ ಜೈಲು ಅಧಿಕಾರಿಗಳು. ಅಂತಹುದರಲ್ಲಿ ಈ ಖೈದಿಗಳಿಗೆ ಸಂಬಳ ನಿಗದಿಪಡಿಸುವ ಸ್ವಾತಂತ್ರ್ಯ ಬಿಪಿಒ ಕಂಪನಿಗಳಿಗೆ ಇರುವುದಿಲ್ಲ. ಆಗ ಸಮಸ್ಯೆ ಉದ್ಭವವಾಗುತ್ತದೆ. ನೋಡಬೇಕು ಏನ್ಮಾಡ್ತಾರೋ, ಅಲ್ಲಿಯವರಿಗೂ ಭಾರತೋಯ ಬಿಪಿಒಗಳು crossed fingers ಮಾಡಿಕೊಂಡು ಕಾಯಬೇಕು ಅಷ್ಟೇ.

English summary
UK prisoners challenge to Indian BPOs. An innovative scheme to use prisoners with genuine British accents in call centres inside UK jails is being considered by the Ministry of Justice as part of its work programme for prisoners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X