ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪ್ಪನ ಕೊನೆಯಾಸೆ ತೀರಿಸಿದ ಯೋಗೇಶ್ವರನಿಗೆ ಒಲಿಂಪಿಕ್ಸ್ ಕಂಚು

By Mahesh
|
Google Oneindia Kannada News

ಲಂಡನ್, ಆ.12: ಒಲಿಂಪಿಕ್ಸ್ 2012 ಪದಕ ಪಟ್ಟಿಯಲ್ಲಿ ಭಾರತ ಮತ್ತೊಂದು ಹೆಜ್ಜೆ ಮೇಲಿಟ್ಟಿದೆ. ಶನಿವಾರ(ಆ.11) ನಡೆದ 60 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಾರತದ ಕುಸ್ತಿಪಟು ಯೋಗೇಶ್ವರ್ ದತ್ ಕಂಚಿನ ಪದಕ ಗೆದ್ದಿದ್ದಾರೆ.

29 ವರ್ಷದ ಯೋಗೇಶ್ವರ್ ಅವರು ಉತ್ತರ ಕೊರಿಯಾದ ಜೊಂಗ್ ಮ್ಯಾಂಗ್ ರಿ ಅವರನ್ನು 3-1 ಅಂತರದಿಂದ ಸೋಲಿಸಿ ಪದಕ ಕೊರಳಿಗೇರಿಸಿಕೊಂಡರು. ಎಕ್ಸೆಲ್ ಅರೀನಾದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಪಟ್ಟಿನ ಪಟ್ಟು ಹಾಕಿ ಎದುರಾಳಿ ನೆಲಕಚ್ಚುವಂತೆ ಮಾಡುವಲ್ಲಿ ದತ್ ಸಫಲರಾದರು.

ಒಲಿಂಪಿಕ್ಸ್ ಪದಕ ಗೆಲ್ಲುವ ಮೂಲಕ ದತ್ ಅವರು ತಮ್ಮ ತಂದೆಯ ಕೊನೆಯಾಸೆಯನ್ನು ಈಡೇರಿಸಿದ್ದಾರೆ. 2006ರಲ್ಲಿ ಮೃತರಾದ ಯೋಗೇಶ್ವರ್ ದತ್ ಅವರ ತಂದೆಗೆ ತಮ್ಮ ಮಗ ಒಲಿಂಪಿಕ್ಸ್ ಪದಕ ಗೆಲ್ಲುವುದನ್ನು ನೋಡುವ ಮಹದಾಸೆಯಿತ್ತು.

ದತ್ ಅವರ ಪದಕದೊಂದಿಗೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ ಪಡೆದ ಪದಕಗಳ ಸಂಖ್ಯೆ ಐದಕ್ಕೆ ಏರಿದೆ. ದತ್ತ್ ರಷ್ಯಾದ ಆಟಗಾರ ಬಿಸಿಕ್ ಕುಡುಕೋವ್ ವಿರುದ್ಧ ಸೋತಿದ್ದರು ಆದರೆ, ರಿಪಿಚೇಜ್‌ನ ಮೂರು ಸುತ್ತಿನ ಅವಕಾಶದ ಲಾಭ ಪಡೆದು ಪೋರ್ಟೊರಿಕಾದ ಗೋಮೆಜ್ ಮಾರ್ಟೊಸ್ ಫ್ರಾಂಕ್ಲೆನ್(3-0) ವಿರುದ್ಧ ಜಯ ಗಳಿಸಿದರು. ನಂತರ ಇರಾನ್‌ನ ಮಸೂದ್ ಇಸ್ಮಾಯಿಲ್‌ಪೂರ್ಜಾಯಿ ಬಾರಿ ವಿರುದ್ಧ 3-1 ಅಂತರದಿಂದ ಜಯಿಸಿ ಅಂತಿಮ ಸುತ್ತಿಗೆ ಅರ್ಹತೆ ಗಳಿಸಿದರು.

ಅಂತಿಮ ಸುತ್ತಿನಲ್ಲಿ ಉತ್ತರ ಕೊರಿಯದ ಜೊಂಗ್‌ರನ್ನು 3-1 ಅಂತರದಿಂದ ಬಗ್ಗುಬಡಿದು ಕಂಚು ಪಡೆದರು. ದತ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ರಷ್ಯಾದ ಆಟಗಾರ ಬಿಸಿಕ್ ಕುಡುಕೋವ್ ವಿರುದ್ಧ ಫೈನಲ್‌ಗೆ ಅರ್ಹತೆ ಪಡೆದ ಹಿನ್ನೆಲೆಯಲ್ಲಿ ದತ್‌ಗೆ ರಿಪಿಚೇಜ್ ಸುತ್ತಿನಲ್ಲಿ ಆಡುವ ಅವಕಾಶ ಲಭಿಸಿತ್ತು. ಕಂಚಿನ ಪದಕವನ್ನು ಜಯಿಸಲು ದತ್ ರಿಪಿಚೇಜ್ ಸುತ್ತಿನಲ್ಲಿ ಮೂರು ರೌಂಡ್ ಪಂದ್ಯವನ್ನು ಜಯಿಸಿ ಗಳಿಸಿ ಹೊಸ ಸಾಧನೆ ಮೆರೆದರು.

ಭಾವನಾತ್ಮಕ ಜಯ: 2006ರ ದೋಹಾ ಏಷ್ಯನ್ ಗೇಮ್ಸ್ ಗೆ ನಾನು ಹೊರಡುವ ಎರಡು ದಿನ ಮೊದಲು ನನ್ನಪ್ಪನನ್ನು ಕಳೆದುಕೊಂಡೆ. ನನಗೆ ಆಕಾಶ ಕಳಚಿ ತಲೆ ಮೇಲೆ ಬಿದ್ದಂತೆ ಭಾಸವಾಯಿತು.

ನಾನು ನನ್ನ ತಂದೆಗಾಗಿ ಏಷ್ಯನ್ ಗೇಮ್ಸ್ ಗೆ ಹೋಗುವುದನ್ನು ತಪ್ಪಿಸಿಕೊಳ್ಳಲಿಲ್ಲ. ಇವತ್ತು ನನಗೆ ತುಂಬಾ ಸಂತೋಷವಾಗಿದೆ. ನನ್ನ ತಂದೆಯ ಮಹದಾಸೆಯನ್ನು ಪೂರೈಸಿದ ತೃಪ್ತಿ ಇದೆ. ನನ್ನ ಗೆಲುವಿನ ಹಿಂದಿನ ಶಕ್ತಿ ನನ್ನ ತಂದೆಯೇ ಆಗಿದ್ದಾರೆ.

ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ನನ್ನ ಕೈಯಿಂದ ಪದಕ ಜಾರಿ ಹೋಗಿತ್ತು. ಅಪ್ಪನ ನೆನಪು, ಆಸೆ ಸದಾ ಕಾಲ ನನ್ನನ್ನು ಕಾಡುತ್ತಿತ್ತು. ಈ ಬಾರಿ ಶಕ್ತಿಮೀರಿ ಪ್ರದರ್ಶನ ನೀಡುವ ಪ್ರದರ್ಶನ ನೀಡುವ ಆತ್ಮ ವಿಶ್ವಾಸ ನನ್ನಲ್ಲಿತ್ತು. ಪದಕ ಗೆಲ್ಲುವ ಗುರಿ ಮುಟ್ಟಿದ್ದೇನೆ ಎಂದು ದತ್ ಅವರು ಹೇಳಿದ್ದಾರೆ.

ಕುಸ್ತಿ ವಿಕ್ರಮ: ಒಲಿಂಪಿಕ್ಸ್ ಇತಿಹಾಸದಲ್ಲಿ ಕುಸ್ತಿಯಲ್ಲಿ ಇದು ಭಾರತದ ಮೂರನೇ ಪದಕವಾಗಿದೆ. ಕೆಡಿ ಜಾಧವ್ (ಕಂಚು, 1952 ಹೆಲ್ಸಿಂಕಿ) ಹಾಗೂ ಸುಶೀಲ್ ಕುಮಾರ್ (ಕಂಚು, 2008 ಬೀಜಿಂಗ್) ನಂತರ ಯೋಗೇಶ್ವರ್ ದತ್ (ಕಂಚು, 2012 ಲಂಡನ್)

2009ರಲ್ಲಿ ಸ್ನಾಯು ಸೆಳೆತ, ಕೀಲು ನೋವು ಅನುಭವಿಸಿದ ಯೋಗೇಶ್ವರ್ ಪುನಃ ಕುಸ್ತಿ ಅಖಾದಕ್ಕೆ ಇಳಿಯುವುದು ಕಷ್ಟ ಎಂದು ಎಲ್ಲರೂ ಊಹಿಸಿದ್ದರು. ಶಸ್ತ್ರಚಿಕಿತ್ಸೆಗೂ ಒಳಪಟ್ಟ ದತ್, ಕಠಿಣ ಪರಿಶ್ರಮದ ಮೂಲಕ ಒಲಿಂಪಿಕ್ಸ್ ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

2010 ದೆಹಲಿ ಕಾಮನ್ ವೆಲ್ತ್ ಗೇಮ್ಸ್ ಹಾಗೂ ಏಷ್ಯಾದ ಕುಸ್ತಿ ಚಾಂಪಿಯನ್ ಶಿಪ್ 2010 ರಲ್ಲಿ ಚಿನ್ನದ ಪದಕ ಗೆದ್ದಿರುವ ಯೊಗೇಶ್ವರ್ ಅವರು 2003 ರಲ್ಲಿ ಲಂಡನ್ ನ ಕಾಮನ್ ವೆಲ್ತ್ ಕುಸ್ತಿ ಚಾಂಪಿಯನ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಲಂಡನ್ ಒಲಿಂಪಿಕ್ಸ್ 2012ರಲ್ಲಿ ಶೂಟರ್ ಗಗನ್ ನಾರಂಗ್ (ಕಂಚು), ವಿಜಯ್ ಕುಮಾರ್ (ಬೆಳ್ಳಿ), ಶಟ್ಲರ್ ಸೈನಾ ನೆಹ್ವಾಲ್ (ಕಂಚು), ಬಾಕ್ಸರ್ ಮೇರಿ ಕೋಮ್ (ಕಂಚು) ಹಾಗೂ ಕುಸ್ತಿಪಟು ಯೋಗೇಶ್ವರ್ ದತ್ (ಕಂಚು) ಗಳಿಸಿದ್ದಾರೆ.

English summary
India added one more medal at the London Olympics 2012 when wrestler Yogeshwar Dutt won a bronze in the freestyle 60kg category here on Saturday(Aug.11). The 29-year-old Dutt defeated North Korea's Jong Myong Ri 3-1 in the play-off bout at the ExCel Arena. Dutt has finally succeeded to claim an Olympic medal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X