• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಗದೇಕ ಮಲ್ಲ ಸುಶೀಲ್ ಗೆ ಚಿನ್ನ ಕೈ ತಪ್ಪಿದ ರಹಸ್ಯ

By Mahesh
|

ಲಂಡನ್, ಆ.12: ಜಗದೇಕ ಮಲ್ಲ ಸುಶೀಲ್ ಕುಮಾರ್ ಒಲಿಂಪಿಕ್ಸ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಭಾನುವಾರ (ಆ.12) ಪುರುಷರ 66 ಕೆಜಿ ಫ್ರೀಸ್ಟೈಲ್ ನ ಫೈನಲ್ ಪಂದ್ಯದಲ್ಲಿ ಸೋತು ರಜತ ಪದಕ ಗಳಿಸಿದರೂ ಭಾರತದ ಸರ್ವಶ್ರೇಷ್ಠ ವೈಯಕ್ತಿಕ ಒಲಿಂಪಿಕ್ಸ್ ಕ್ರೀಡಾಪಟು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ಎಕ್ಸೆಲ್ ಅರೀನಾದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಗೆಲ್ಲುವ ನೆಚ್ಚಿನ ಪಟುವಾಗಿದ್ದ ಸುಶೀಲ್ ಯಾಕೋ ಮಂಕಾಗಿ ಬಿಟ್ಟರು. ತಮಗಿಂತ ಮೂರು ವರ್ಷ ಕಿರಿಯ ಹಾಗೂ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಗೆ ಪ್ರವೇಶ ಪಡೆದಿರುವ ಅಥ್ಲೀಟ್ ಮುಂದೆ ಸೋಲಲು ಕಾರಣವೇನು?

ಬೆಳಗ್ಗೆ ತಾನೇ ಬೀಜಿಂಗ್ ಚಿನ್ನದ ಪದಕ ವಿಜೇತನನ್ನು ಸುಲಭವಾಗಿ ಸೋಲಿಸಿದ್ದ ಸುಶೀಲ್ ಗೆ ಯಾವ ಸಮಸ್ಯೆ ಕಾಡುತ್ತಿತ್ತು? ಫೈನಲ್ ನಲ್ಲಿ ಮಂಕು ಹಿಡಿದಂತೆ, ಚಲನೆ ಮರೆತಂತೆ ಸುಶೀಲ್ ಆಡಿದ್ದಾದರೂ ಏಕೆ? ಎಂಬ ಪ್ರಶ್ನೆಗಳು ಕಾಡುತ್ತಿದೆ.

29 ವರ್ಷದ ದೆಹಲಿ ಮೂಲದ ಸುಶೀಲ್ ಕುಮಾರ್ ಅವರು ಜಪಾನಿನ ಸೈನ್ಯದ ಯೋಧ ಟಾಟ್ಸುಯಿರೊ ಯೋನೆಮಿಟ್ಸು ಅವರ ಮುಂದೆ ತಲೆ ಬಾಗಿದ್ದು ಏಕೆ ಎಂಬ ಪ್ರಶ್ನೆಗೆ ಸುಶೀಲ್ ಅವರ ಮ್ಯಾನೇಜರ್ ರಾಜ್ ಸಿಂಗ್ ಉತ್ತರ ನೀಡಿದ್ದಾರೆ.

ನೋವು ನುಂಗಿ ಕಣಕ್ಕಿಳಿದ ಪಟು: 'ಫೈನಲ್ ಪಂದ್ಯಕ್ಕೂ ಮುನ್ನ ಸುಶೀಲ್ ಅಸ್ವಸ್ಥರಾಗಿದ್ದರು. ಫೈನಲ್ ಗೆ ತಯಾರಾಗುತ್ತಿದ್ದ ಸುಶೀಲ್ ಅದೇನು ತಿಂದರು ಎಂಬುದು ಇನ್ನೂ ತಿಳಿಯುತ್ತಿಲ್ಲ. ಮೂರು ಬಾರಿ ವಾಂತಿ ಮಾಡಿಕೊಂಡರು. ನಿತ್ರಾಣರಾಗಿ ಗ್ಲುಕೋಸ್ ತೆಗೆದುಕೊಂಡು ಸುಧಾರಿಸಿಕೊಂಡರೂ ನಿರ್ಜಲೀಕರಣ(dehydration)ಕ್ಕೆ ಒಳಗಾಗಿ ಸಾಕಷ್ಟು ದೇಹ ತೂಕ ಕಳೆದುಕೊಂಡರು.

ಇದಲ್ಲದೆ ಸೆಮಿಫೈನಲ್ ನಲ್ಲಿ ಟಂಟಾರೋವ್ ವಿರುದ್ಧ 3-1 ರಲ್ಲಿ ಜಯ ಗಳಿಸಿದ್ದ ಸುಶೀಲ್ , ಅಖಾಡದಲ್ಲಿ ಸಾಕಷ್ಟು ಚುರುಕಾಗಿ ಹೆಜ್ಜೆ ಹಾಕಿದ್ದರು. ಸೆಮಿಸ್ ಗೆಲ್ಲುವ ಹುಮ್ಮಸ್ಸಿನಲ್ಲಿ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದರು.

ಒಂದು ಕಡೆ ಭುಜದ ನೋವು, ಇನ್ನೊಂದೆಡೆ ಹೊಟ್ಟೆನೋವು ಅನುಭವಿಸುತ್ತಿದ್ದ ಸುಶೀಲ್ ರನ್ನು ಜಪಾನಿನ ಯೋಧ ಸುಲಭವಾಗಿ ಸೋಲಿಸಿದ್ದರಲ್ಲಿ ಅಚ್ಚರಿ ಏನಿಲ್ಲ. ಒಂದೇ ದಿನ ಎಲ್ಲಾ ಪಂದ್ಯಗಳನ್ನು ಆಡುವ ಕಾರ್ಯಕ್ರಮ ಪಟ್ಟಿ ಕೂಡಾ ಸುಶೀಲ್ ಗೆ ಮುಳುವಾಗಿದೆ. 2 ನಿಮಿಷದ 2-3 ಅವಧಿಯ ಪಂದ್ಯಗಳಾದರೂ ತಯಾರಿಗೂ ಮುನ್ನ ಆಗುವ ಅವಾಂತರದಿಂದ ತಪ್ಪಿಸಿಕೊಳ್ಳಲು ಅವಕಾಶ ಇಲ್ಲದ್ದಂತಾಗಿದ್ದು ಭಾರತಕ್ಕೆ ಚಿನ್ನದ ಪದಕ ತಪ್ಪಿಸಿದೆ.

ಸುಶೀಲ್ ರನ್ನು ಹತ್ತಿರದಿಂದ ಕಂಡವರಿಗೆ ಫೈನಲ್ ನಲ್ಲಿ ಸುಶೀಲ್ ಹಾಕುತ್ತಿದ್ದ ತಪ್ಪು ಹೆಜ್ಜೆಗಳನ್ನು ಕಂಡು ಹಿಡಿಯುವುದು ಕಷ್ಟವಾಗಲಿಲ್ಲ. ದೈಹಿಕ ಅಸಮರ್ಥತೆ ಹೊಂದಿದ್ದ ಪಟು ಕಣಕ್ಕಿಳಿದು ಸ್ಪರ್ಧಿಸುವುದು ಕಷ್ಟ. ಅದರಲ್ಲೂ ಎರಡನೇ ಸುತ್ತಿನಲ್ಲಿ ಸುಶೀಲ್ ರನ್ನು ಜಪಾನ್ ಕುಸ್ತಿಪಟು ಭುಜದ ಮೇಲೆ ಹೊತ್ತುಕೊಂಡಿದ್ದು ನೋಡಿದರೆ, ಸುಶೀಲ್ ಯಾವ ಪರಿ ಮೈಮರೆತಿದ್ದರು ಎಂಬುದು ಸ್ಪಷ್ಟವಾಗುತ್ತದೆ.

ಇದಕ್ಕೂ ಸುಶೀಲ್ ಉಜ್ಬೆಕ್ ಪ್ರತಿಸ್ಪರ್ಧಿ ನವರುಜೊರ್ ಇಕ್ತಿಯೊರ್ ರನ್ನು 6-3 ಅಂತರದಲ್ಲಿ ಸೋಲಿಸಿದ್ದರು. ಪ್ರೀ ಕ್ವಾಟರ್ ಫೈನಲ್ ನಲ್ಲಿ ಬೀಜಿಂಗ್ 2008ರಲ್ಲಿ ಚಿನ್ನ ಗೆದ್ದಿದ್ದ ಸ್ಪರ್ಧಿಯನ್ನು ಸುಶೀಲ್ ಸುಲಭವಾಗಿ ಕೆಡವಿದ್ದರು ಹಾಗೂ ಟರ್ಕಿಯ ರಮಜಾನ್ ಸಹೀನ್ ಅವರನ್ನು 3-1 ಅಂತದಿಂದ ಸುಶೀಲ್ ಸೋಲಿಸಿದ್ದರು.

ಸುಶೀಲ್ ಸಾಧನೆ: ದೆಹಲಿ ಬಸ್ ಡ್ರೈವರ್ ದಿವಾನ್ ಸಿಂಗ್ ಪುತ್ರ ಶಾಖಾಹಾರಿ ಪೈಲ್ವಾನ್ ಸುಶೀಲ್ ಸಾಧನೆ ಅನುಕರಣೀಯ

* 2010 ಲಂಡನ್ ಒಲಿಂಪಿಕ್ಸ್ 66 ಕೆಜಿ ವಿಭಾಗ- ಬೆಳ್ಳಿ

* 2008 ಬೀಜಿಂಗ್ ಒಲಿಂಪಿಕ್ಸ್ 66 ಕೆಜಿ ವಿಭಾಗ-ಕಂಚು

* 2010 ಮಾಸ್ಕೋ ವಿಶ್ವ ಚಾಂಪಿಯನ್ ಶಿಪ್ 66 ಕೆಜಿ ವಿಭಾಗ-ಚಿನ್ನ

* 2010 ದೆಹಲಿ ಕಾಮನ್ ವೆಲ್ತ್ ಗೇಮ್ಸ್ -66 ಕೆಜಿ ವಿಭಾಗ-ಚಿನ್ನ

* 2009 ಜಲಂಧರ್ ಕಾಮನ್ ವೆಲ್ತ್ ಚಾಂಪಿಯನ್ ಶಿಪ್ -66 ಕೆಜಿ ವಿಭಾಗ-ಚಿನ್ನ

* 2007 ಲಂಡನ್ ಕಾಮನ್ ವೆಲ್ತ್ ಚಾಂಪಿಯನ್ ಶಿಪ್ -66 ಕೆಜಿ ವಿಭಾಗ-ಚಿನ್ನ

* 2005 ಕೇಪ್ ಟೌನ್ ಕಾಮನ್ ವೆಲ್ತ್ ಚಾಂಪಿಯನ್ ಶಿಪ್ -66 ಕೆಜಿ ವಿಭಾಗ-ಚಿನ್ನ

* 2003 ಲಂಡನ್ ಕಾಮನ್ ವೆಲ್ತ್ ಚಾಂಪಿಯನ್ ಶಿಪ್ -60 ಕೆಜಿ ವಿಭಾಗ-ಚಿನ್ನ

* 2010 ನವದೆಹಲಿ ಏಷ್ಯನ್ ಚಾಂಪಿಯನ್ ಶಿಪ್ -66 ಕೆಜಿ ವಿಭಾಗ-ಚಿನ್ನ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Why did World Champion Sushil Kumar lost to Japanese Wrestler Yonemitsu Tatsuhiro in the final of 66 Kg Freestyle Wrestling today(Aug.12) easily. Sushil was unwell before the final which cost him the gold says his manager Raj Singh
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more