ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಶೀಲ್ ಕುಮಾರ್‌ಗೆ ಕುಸ್ತಿಯಲ್ಲಿ ಬೆಳ್ಳಿ ಪದಕ

By Mahesh
|
Google Oneindia Kannada News

ಲಂಡನ್, ಆ.12: ಭಾರತದ ಹೆಮ್ಮಯ ಕುಸ್ತಿಪಟು ಸುಶೀಲ್ ಕುಮಾರ್ ಅವರು ಲಂಡನ್ ಒಲಿಂಪಿಕ್ಸ್ 2012ನ ಪುರುಷರ 66 ಕೆಜಿ ಫ್ರೀಸ್ಟೈಲ್ ನ ಫೈನಲ್ ಪಂದ್ಯದಲ್ಲಿ ಉತ್ತಮ ಆರಂಭ ಪಡೆಯಲು ವಿಫಲರಾಗಿ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.

ಒಲಿಂಪಿಕ್ಸ್ ನ ಅಂತಿಮ ದಿನವಾದ ಭಾನುವಾರ (ಆ.12) ಸಂಜೆ 6.20 ಗಂಟೆಗೆ ಆರಂಭವಾದ ಪಂದ್ಯದಲ್ಲಿ ಸುಶೀಲ್ ಕುಮಾರ್ ವಿರುದ್ಧ ಜಪಾನಿನ ಯೊನೆಮಿಟ್ಸು ಅವರು ಮೊದಲ ಗೇಮ್ ನಲ್ಲಿ 1-0 ಮುನ್ನಡೆ ಪಡೆದರು. ಸುಶೀಲ್ ಕುಮಾರ್ ಗಿಂತ ಕೊಂಚ ವೇಗವಾಗಿ ಪಟ್ಟುಗಳನ್ನು ಹಾಕಿದ ಜಪಾನಿನ ಕುಸ್ತಿ ಪಟು ಮೊದಲ ಗೇಮ್ ಮುನ್ನಡೆ ಲಾಭದಾಯಕವಾಗಿ ಪರಿಣಮಿಸಿತು.

ಎರಡನೇ ಗೇಮ್ (ಅವಧಿ) ನಲ್ಲಿ ಕೂಡಾ ಜಪಾನಿನ ಯೊನೆಮಿಟ್ಸು ಅವರು 2-1ರ ಅಂತರದಿಂದ ಗೆದ್ದುಕೊಂಡರು. ಒಟ್ಟಾರೆ ತಲಾ 2 ನಿಮಿಷದ 2 ಅವಧಿಯಲ್ಲಿ 3-1 ಅಂಕದಿಂದ ಜಪಾನ್ ಕುಸ್ತಿಪಟು ಯೊನೆಮಿಟ್ಸು ಚಿನ್ನದ ಪದಕ ಕೊರಳಿಗೇರಿಸಿಕೊಂಡರು.

ರಜತ ಪದಕಕ್ಕೆ ತೃಪ್ತಿ ಪಟ್ಟರೂ ಸುಶೀಲ್ ಸಾಧನೆಗೆ ಸಾಟಿ ಇಲ್ಲ. ಸತತ ಎರಡನೇ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿರುವುದು ಹಾಗೂ ಒಲಿಂಪಿಕ್ಸ್ ನಲ್ಲಿ ಕುಸ್ತಿ ಫೈನಲ್ ಸ್ಪರ್ಧಿಸಿ ರಜತ ಗೆದ್ದಿರುವುದು ಇದೇ ಮೊದಲು.

ಒಟ್ಟಾರೆ ಭಾರತ 2 ಬೆಳ್ಳಿ ಹಾಗೂ 4 ಕಂಚಿನ ಪದಕದೊಂದಿಗೆ 6 ಪದಕ ಗೆದ್ದು 55ನೇ ಸ್ಥಾನದಲ್ಲಿ ಒಲಿಂಪಿಕ್ಸ್ ಅಭಿಯಾನಕ್ಕೆ ಮುಕ್ತಾಯ ಹಾಡಿದೆ.

ಆದರೆ, ಸೆಮಿಫೈನಲ್ ಪಂದ್ಯದಲ್ಲಿ ಕಜಕಿಸ್ತಾನದ ಎ ಟನಾಟರೊವ್ ವಿರುದ್ಧ 3-1ರ ಅಂತರದಿಂದ ಸುಶೀಲ್ ಜಯ ಗಳಿಸಿದರು. ಸುಶೀಲ್ ಕುಮಾರ್ ಫೈನಲ್ ನಲ್ಲಿ ಸೆಣಸುವ ಅರ್ಹತೆ ಪಡೆಯುವ ಮೂಲಕ ಚಿನ್ನ ಅಥವಾ ಬೆಳ್ಳಿ ಪದಕ ಗ್ಯಾರಂಟಿಯಾಗಿತ್ತು. ಫೈನಲ್ ಪ್ರವೇಶಿಸುವ ಮೂಲಕ ಸತತವಾಗಿ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿರುವ ದಾಖಲೆ ನಿರ್ಮಿಸಿರುವ ಸುಶೀಲ್ ಕುಮಾರ್ ಅವರು ಚಿನ್ನದ ಪದಕ ಆಸೆ ಹುಟ್ಟಿಸಿದ್ದರು.

ಫೈನಲ್ ನಲ್ಲಿ ಕೆಂಪು ಬಣ್ಣದ ದಿರಿಸು ಧರಿಸಿ ಆಡಿದ 29 ವರ್ಷದ ವಿಶ್ವದ ನಂ.1 ಕುಸ್ತಿ ಪಟು ಸುಶೀಲ್ ಕುಮಾರ್ ಅವರಿಗೆ ವಿಶ್ವದ ನಂ.2 ಕುಸ್ತಿ ಪಟು ಜಪಾನಿನ ಯೊನೆಮಿಟ್ಸು ಕಠಿಣ ಸವಾಲು ಎಸೆದರು.

ಇದಕ್ಕೂ ಮುನ್ನ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸುಶೀಲ್ ಸೆಮಿಫೈನಲ್ ನಲ್ಲಿ ಟಂಟಾರೋವ್ ವಿರುದ್ಧ 3-1 ರಲ್ಲಿ ಜಯ ಗಳಿಸಿದರು. ಉಜ್ಬೆಕ್ ಪ್ರತಿಸ್ಪರ್ಧಿ ನವರುಜೊರ್ ಇಕ್ತಿಯೊರ್ ರನ್ನು 6-3 ಅಂತರದಲ್ಲಿ ಸೋಲಿಸಿದರು. ಭಾನುವಾರ ಪ್ರೀ ಕ್ವಾಟರ್ ಫೈನಲ್ ನಲ್ಲಿ ಬೀಜಿಂಗ್ 2008ರಲ್ಲಿ ಚಿನ್ನ ಗೆದ್ದಿದ್ದ ಸ್ಪರ್ಧಿಯನ್ನು ಸುಶೀಲ್ ಸುಲಭವಾಗಿ ಕೆಡವಿದ್ದರು. ಟರ್ಕಿಯ ರಮಜಾನ್ ಸಹೀನ್ ಅವರನ್ನು 3-1 ಅಂತದಿಂದ ಸುಶೀಲ್ ಸೋಲಿಸಿದ್ದರು.

ಜಪಾನಿನ ಕುಸ್ತಿ ಪಟು ಸೆಮಿಫೈನಲ್ ನಲ್ಲಿ ಹಸನೋವ್ ರನ್ನು 3-0 ಅಂತರದಿಂದ ಭರ್ಜರಿಯಾಗಿ ಸೋಲಿಸಿದ್ದಾರೆ. ಕ್ವಾಟರ್ ಫೈನಲ್ ನಲ್ಲಿ ವೆರನೆಸ್ ರನ್ನು 3-1 ಅಂತರದಿಂದ ಹಾಗೂ ಪ್ರೀ ಕ್ವಾಟರ್ ಫೈನಲ್ ನಲ್ಲಿ ಲೋಪೇಜ್ ರನ್ನು 3-1 ಅಂತರದಿಂದ ಸೋಲಿಸಿದ್ದಾರೆ.

ಒಲಿಂಪಿಕ್ಸ್ 2012 ಕುಸ್ತಿ ಸ್ಪರ್ಧೆಯಲ್ಲಿ ಶನಿವಾರ(ಆ.11) ನಡೆದ 60 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿಯಲ್ಲಿ ಭಾರತದ ಕುಸ್ತಿಪಟು ಯೋಗೇಶ್ವರ್ ದತ್ ಕಂಚಿನ ಪದಕ ಗೆದ್ದ ಸಾಧನೆ ಮೆರೆದಿದ್ದರು.29 ವರ್ಷದ ಯೋಗೇಶ್ವರ್ ಅವರು ಉತ್ತರ ಕೊರಿಯಾದ ಜೊಂಗ್ ಮ್ಯಾಂಗ್ ರಿ ಅವರನ್ನು 3-1 ಅಂತರದಿಂದ ಸೋಲಿಸಿ ಪದಕ ಕೊರಳಿಗೇರಿಸಿಕೊಂಡರು.

English summary
Indian Wrestler Sushil Kumar loses in final, gets silver. The finals of the men's 66 kg freestyle category held today(Aug.12) at the London Olympics. Japanese Wrestler Yonemitsu Tatsuhiro defeated World Champion Indian Wrestler Sushil by 3-1 in excel arena.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X