• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಲಿಂಪಿಕ್ಸ್ ಮುಕ್ತಾಯಕ್ಕೆ ಮಸಾಲೆ ಹುಡುಗಿಯರ ಒಗ್ಗರಣೆ

By Mahesh
|

ಲಂಡನ್, ಆ.12: ಜಾಗತಿಕ ಕ್ರೀಡಾ ಹಬ್ಬ ಲಂಡನ್ ಒಲಿಂಪಿಕ್ಸ್ 2012 ತನ್ನ 17 ದಿನಗಳ ಸಂಭ್ರಮಕ್ಕೆ ಭಾನುವಾರ(ಆ.12) ಮಧ್ಯರಾತ್ರಿ ತೆರೆ ಎಳೆಯಲಿದೆ. ಸಮಾರೋಪ ಸಮಾರಂಭದ ರಂಗೇರಿಸಲು ವಿಶ್ವಖ್ತ್ಯಾತ ಪಾಪ್ ತಂಡ ಸ್ಪೈಸ್ ಗರ್ಲ್ಸ್ ಒಗ್ಗೂಡಿ ಹಾಡಿ ಕುಣಿದಾಡಲಿದ್ದಾರೆ. ಸುಮಾರು 300 ಕ್ಕೂ ಅಧಿಕ ದೇಶಗಳು ಭಾಗವಹಿಸಿದ್ದ ಈ ಜಾಗತಿಕ ಟೂರ್ನಿ ವಿದಾಯದ ಹೊಸ್ತಿಲಲ್ಲಿದೆ.

ಕಳೆದ ಒಲಿಂಪಿಕ್ಸ್ ಗೆ ಹೋಲಿಸಿದರೆ ಭಾರತ ಉತ್ತಮ ಸಾಧನೆಯೊಂದಿಗೆ ಮುಕ್ತಾಯ ಹಾಡಲಿದೆ. 2016ರಲ್ಲಿ ಬ್ರೆಜಿಲ್ ನ ರಿಯೋಡಿಜೆನಿರೋದಲ್ಲಿ ಮುಂದಿನ ಒಲಿಂಪಿಕ್ಸ್ ಸ್ಪರ್ಧೆಗಳು ನಡೆಯಲಿದೆ. ಲಂಡನ್ ಒಲಿಂಪಿಕ್ಸ್ ಆಯೋಜಕರು ಒಲಿಂಪಿಕ್ಸ್ ಜ್ಯೋತಿಯನ್ನು ರಿಯೋಡಿಜೆನಿರೋ ಸಂಘಟಕರಿಗೆ ಹಸ್ತಾಂತರಿಸುವ ಮೂಲಕ ಸಮಾರೋಪ ಸಮಾರಂಭಕ್ಕೆ ತೆರೆ ಬೀಳಲಿದೆ.

ಉದ್ಘಾಟನಾ ಸಮಾರಂಭವನ್ನು ಮೀರಿಸುವಂಥ ಸಮಾರೋಪ ಸಮಾರಂಭಕ್ಕೆ ವೇದಿಕೆ ಸಿದ್ಧವಾಗಿದೆ. ಉದ್ಘಟನಾ ಸಮಾರಂಭ ಮದುವೆ ದಿನವಾದರೆ, ಸಮಾರೋಪ ಮದುವೆ ಆರತಕ್ಷತೆ ರೀತಿ ಇರುತ್ತದೆ ಎಂದು ಆಯೋಜಕರು ಹೇಳಿದ್ದಾರೆ.

ಸುಮಾರು 4,100 ಕಲಾವಿದರು ಲಂಡನ್ ಗೇಮ್ಸ್ ಮೈದಾನದಲ್ಲಿ ವರ್ಣರಂಜಿತ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.ಲಂಡನ್ನಿನ ಸಿಂಫೋನಿ ಆರ್ಕೆಸ್ಟ್ರಾ ದಿನದ ಆಕರ್ಷಣೆಯಾಗಲಿದೆ. ಪ್ರಿನ್ಸೆಸ್ ಡಯಾನಾ ಸ್ಮಾರಕ ಉತ್ಸವ ಆಯೋಜಿಸಿದ್ದ ನಿರ್ದೇಶಕ ಕಿಮ್ ಗಾವಿನ್ ಅವರ ಕಲಾ ನಿರ್ದೇಶನದಲ್ಲಿ ಲೇಡಿ ಗಾಗಾರಿಂದ ಹಿಡಿದು ರಾಯಲ್ ಒಪೇರಾ ತನಕ ಪ್ರದರ್ಶನದ ಪಟ್ಟಿಯಲ್ಲಿ ಸೇರಿದ್ದಾರೆ.

ಭಾರತದ ಧ್ವಜಧಾರಿಯಾಗಿ ಕಂಚಿನ ಪದಕ ವಿಜೇತ ಬಾಕ್ಸರ್ ಮೇರಿ ಕೋಮ್ ಅವರು ಆಯ್ಕೆಯಾಗಿದ್ದಾರೆ. 18 ಚಿನ್ನ ಸೇರಿದಂತೆ ಒಲಿಂಪಿಕ್ಸ್ ಇತಿಹಾಸದಲ್ಲಿ 22 ಪದಕ ಗೆದ್ದಿರುವ ಅಮೆರಿಕದ ಈಜುಗಾರ ಮೈಜಲ್ ಫೆಲ್ಶ್ಸ್ ಅವರ ನಿವೃತ್ತಿ. 100 ಮೀ, 200 ಮೀ ಹಾಗೂ 4 ‌x 100 ರಿಲೇ ಚಿನ್ನ ಗೆದ್ದ ಅಪೂರ್ವ ಸಾಧನೆ ಮೆರೆದ ಉಸೇನ್ ಬೋಲ್ಟ್ ಈ ಬಾರಿ ಸ್ಮರಣೀಯ ಅಥ್ಲೀಟ್ ಗಳಾಗಿದ್ದಾರೆ.

ದಿನದ ವಿಶೇಷ: ಅಂತಿಮ ದಿನದ ಕ್ರೀಡೆಗೂ ಮುನ್ನ ವಿಶ್ವದ ಏಕೈಕ ವೇಗದ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಹೊಸ ವಿಶ್ವ ದಾಖಲೆ(36.84 ಸೆ) ಯೊಂದಿಗೆ 4 X 100 ರಿಲೇಯನ್ನು ಮುಗಿಸಿದ್ದು ವಿಶೇಷ.

ಫುಟ್ಭಾಲ್ ಪ್ಫೈನಲ್ ನಲ್ಲಿ ಮೆಕ್ಸಿಕೋ ತಂಡ ಬ್ರೆಜಿಲ್ ತಂಡವನ್ನು ಮಣಿಸಿದ್ದು ಬ್ರೆಜಿಲ್ ಮತ್ತೊಮ್ಮೆ ತನ್ನ ನೆಲದಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ ಚಿನ್ನಕ್ಕಾಗಿ ಕಾದಾಡಬೇಕಾದ ಪರಿಸ್ಥಿತಿ ತಂದಿದೆ. ಭಾರತದ ಸುಶೀಲ್ ಕುಮಾರ್ ಸತತ ಒಲಿಂಪಿಕ್ಸ್ ನಲ್ಲಿ ಪದಕ ಗಿಟ್ಟಿಸಿದ ಹಾಗೂ ಕುಸ್ತಿ ಫೈನಲ್ ತಲುಪಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
London is all set for star-studded spectacular show at closing ceremony at Olympic Stadium on Aug.12 midnight(IST) . British Pop divas Spice girl re group together to give spectacular show directed by Kim Gavin. Opening was a wedding and closing ceremony will like wedding reception said Olympics 2012 organisers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more