ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್ಜಾಲ ಸಂಪರ್ಕದಲ್ಲಿ ಹಿಂದುಳಿದ ಬೆಂಗಳೂರು!

By Srinath
|
Google Oneindia Kannada News

internet-connectivity-silicon-valley-blore-loses-sheen
ಬೆಂಗಳೂರು, ಆ.11: ಕರ್ನಾಟಕದ ಅದರಲ್ಲೂ ರಾಜಧಾನಿ ಬೆಂಗಳೂರು ಸಿಲಿಕಾನ್ ಕಣಿವೆ ಎಂಬ ಹೆಗ್ಗಳಿಕೆ ಗಳಿಸಿ ಯಾವುದೂ ಕಾಲವಾಗಿದೆ. ಆದರೆ ಆ ಹೆಸರು, ಪ್ರತಿಷ್ಠೆ ಅಳಿಸಿಹೋಗುವ ಕಾಲ ಬಂದಿದೆ. ಏಕೆಂದರೆ ಅಂತರ್ಜಾಲ ಸಂಪರ್ಕದಲ್ಲಿ ಬೆಂಗಳೂರಿಗಿಂತ ಗುರಗಾಂವ್, ಹೈದರಾಬಾದ್ ವಾಸಿ ಎನ್ನುವಂತಾಗಿದೆ.

2011ರ ಸಮೀಕ್ಷೆಯೊಂದರ ಪ್ರಕಾರ ರಾಜ್ಯದ ಗ್ರಾಮಾಂತರ ಭಾಗದಲ್ಲಿಯೂ ಇದೇ ಪರಿಸ್ಥಿತಿಯಿದೆ. ಗ್ರಾಮೀಣ ಭಾಗದಲ್ಲಿ ಸುಮಾರು 2 ಲಕ್ಷ ಮನೆಗಳನ್ನು ಸಮೀಕ್ಷಿಸಲಾಗಿ, ಕೇವಲ ಶೇ. 2ರಷ್ಟು ಕುಟುಂಬಗಳು ಅಂತರ್ಜಾಲ ಸಂಪರ್ಕ ಹೊಂದಿರುವುದಾಗಿ ತಿಳಿದುಬಂದಿದೆ.

ಇನ್ನು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ 22 ಲಕ್ಷ ಮನೆಗಳ ಪೈಕಿ ಶೇ. 20ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮನೆಗಳಲ್ಲಿ ಕಂಪ್ಯೂಟರಿಗೆ ಅಂತರ್ಜಾಲ ಸಂಪರ್ಕ ಒದಗಿಸಲಾಗಿದೆ. ನಗರದಲ್ಲಿ ಪರಿಸ್ಥಿತಿ ಇದಕ್ಕಿಂತ ಕಳಪೆಯಾಗಿದೆ. ಕೇವಲ ಶೇ. 18ರಷ್ಟು ಮನೆಗಳಲ್ಲಿ ಅಂತರ್ಜಾಲ ಸಂಪರ್ಕವಿದೆ. ಅದೇ ದೆಹಲಿ ಪಕ್ಕದ ಗುರ್ ಗಾಂವ್ ನಲ್ಲಿ ಶೇ. 21ರಷ್ಟು ಅಂತರ್ಜಾಲ ಸಂಪರ್ಕ ಸಾಧಿಸಲಾಗಿದೆ. ರಾಷ್ಟ್ರೀಯ ಸ್ತರದಲ್ಲಿ ಅಂತರ್ಜಾಲ ಸಂಪರ್ಕ ಸರಾಸರಿ ಶೇ. 10ರಷ್ಟಿದೆ.

ಕಳೆದೊಂದು ದಶಕದಿಂದ ಇಡೀ ವಿಶ್ವಕ್ಕೆ ಬೆಂಗಳೂರು ಹಿಂಬದಿ ಕಚೇರಿ (back office) ಸೇವೆಗಳನ್ನು ಒದಗಿಸುತ್ತಿದೆ. ಆದಾಗ್ಯೂ ನಮ್ಮ ಬೆಂಗಳೂರಿನಲ್ಲಿ ಅಂತರ್ಜಾಲ ಸಂಪರ್ಕ ಅಷ್ಟೊಂದು ಸದೃಢವಾಗಿ ಇಲ್ಲದಿರುವುದು ಚಿಂತನಾರ್ಹವಾಗಿದೆ.

ಮೊಬೈಲ್ ಸಂಪರ್ಕ ಕ್ರಾಂತಿ: ಇನ್ನು ಮೊಬೈಲ್ ಫೋನ್ ಸಂಪರ್ಕಕ್ಕೆ ಬಂದರೆ 2001 ರಿಂದ 2011ರ ನಡುವೆ ಮೊಬೈಲ್ ಫೋನ್ ಹೊಂದಿರುವ ಮನೆಗಳ ಸಂಖ್ಯೆ ಶೇ. 27ರಿಂದ ಶೇ. 92ಕ್ಕೆ ಏರಿದೆ. ಬೆಂಗಳೂರಿನಲ್ಲಿ ಕೇವಲ ಶೇ. 15 ರಷ್ಟು ಮಂದಿ ಸ್ಥಿರ ದೂರವಾಣಿ ಸಂಪರ್ಕಗಳನ್ನು ಹೊಂದಿವೆ.

ಮತ್ತೊಂದು ಗಮನಾರ್ಹ (ಕುಂಠಿತ) ಬೆಳವಣಿಗೆಯೆಂದರೆ ಬೆಂಗಳೂರಿನಲ್ಲಿ ರೇಡಿಯೋ ಟ್ರಾನ್ಸಿಸ್ಟರುಗಳನ್ನು ಹೊಂದಿರುವ ಮನೆಗಳ ಸಂಖ್ಯೆ 2001ರಲ್ಲಿ ಶೇ. 60ರಷ್ಟಿದ್ದುದು ಈಗ ಶೇ. 42ಕ್ಕೆ ಕುಸಿದಿದೆ. ಈ ಸಮೀಕ್ಷೆಯನ್ನು ವಿಶ್ಲೇಷಿಸಿದಾಗ ಎಫ್ಎಂ ರೇಡಿಯೋ ಪರಾಕ್ರಮದ ನಡುವೆಯೂ ರೇಡಿಯೋ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ ಎನಿಸುತ್ತದೆ. ಆದರೆ ಕಾರುಗಳಲ್ಲಿ ಬಳಸುವ ರೇಡಿಯೋಗಳು ಮತ್ತು ಮೊಬೈಲ್ ಎಫ್ಎಂ ರೇಡಿಯೋಗಳನ್ನು ಸಮೀಕ್ಷೆಗೆ ಪರಿಗಣಿಸಲಾಗಿದೆಯೇ ಎಂಬುದು ತಿಳಿದುಬಂದಿಲ್ಲ.

ಆದರೆ ಬೆಂಗಳೂರಿನ ಜನ ಕಳೆದೊಂದು ದಶಕದಲ್ಲಿ ಒಂದು ಎಲೆಕ್ಟ್ರಾನಿಕ್ಸ್ ಸರಕಿಗೆ ಮನಸೋತಿದ್ದಾರೆ. ಅದು ಯಾವುದೆಂದರೆ ಟೆಲಿವಿಶನ್. ಟೆಲಿವಿಶನ್ ಸಂಪರ್ಕಗಳು ಕಳೆದೊಂದು ದಶಕದಲ್ಲಿ ಶೇ. 85ರಷ್ಟು ಬೆಳವಣಿಗೆ ಸಾಧಿಸಿವೆ.

English summary
Internet Connectivity- Silicon Valley Bangalore loses sheen. Only around 19 per cent of the 22lakh households in Bangalore Urban district are logged on to the internet. The 2011 Census reveals that Bangalore lags behind Gurgaon (21 per cent) in internet connectivity
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X