ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NIT ಕಂಪ್ಯೂ ಪದವೀಧರನಿಗೆ 70 ಲಕ್ಷ ವಾರ್ಷಿಕ ಸಂಬಳ

By Srinath
|
Google Oneindia Kannada News

nit-trichy-computer-graduate-hired-annual-pay-rs-70-lak
ತಿರುಚನಾಪಳ್ಳಿ, ಆ.11: ಅಮೆರಿಕ ಮೂಲದ ಕಂಪನಿಯೊಂದು ಇಲ್ಲಿನ NIT ಕೇಂದ್ರದ ಕಂಪ್ಯೂಟರ್ ಪದವೀಧರನೊಬ್ಬನನ್ನು ವಾರ್ಷಿಕ 70 ಲಕ್ಷ (1.25 ಲಕ್ಷ ಡಾಲರ್) ಸಂಬಳಕ್ಕೆ ನೇಮಕಾತಿ ಮಾಡಿಕೊಂಡಿದೆ.

ತಮಿಳುನಾಡಿನ ತಿರುಚನಾಪಳ್ಳಿ NIT ಕೇಂದ್ರದಲ್ಲಿ ಪದವೀಧರರಿಗೆ ಕ್ಯಾಂಪಸ್ ಆಯ್ಕೆ ಅದ್ಭುತವಾಗಿದೆ. ಕಳೆದ ವರ್ಷ ವಾರ್ಷಿಕ 5.5 ಲಕ್ಷ ರು ಸಂಬಳಕ್ಕೆ ಇಲ್ಲಿನ ಪದವೀಧರರೆಲ್ಲ ಕ್ಯಾಂಪಸ್ಸಿನಲ್ಲೇ ಆಯ್ಕೆಯಾಗಿದ್ದರು. ಈ ವರ್ಷ ಈ ಸಂಬಳಗಳ ಪ್ರಮಾಣ 6.25 ಲಕ್ಷ ರೂಪಾಯಿಗೆ ಏರಿದೆ. ಇಲ್ಲಿನ ಸ್ನಾತಕೋತ್ತರ ಪದವೀಧರರಿಗೂ ಅಷ್ಟೇ ಅವಕಾಶಗಳು ಉತ್ತಮವಾಗಿವೆ ಎಂದು ಕೇಂದ್ರದ ಮುಖ್ಯಸ್ಥ ಎಕೆ ಭಕ್ತವತ್ಸಲಂ ತಿಳಿಸಿದ್ದಾರೆ.

ಸ್ನಾತಕೋತ್ತರ ಪದವೀಧರರಲ್ಲಿ ಬಹಳಷ್ಟು ಮಂದಿ ಸಂಶೋದನೆ ಮತ್ತು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುವುದು ಇತ್ತೀಚೆಗೆ ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಿಂದ ತಿರುಚನಾಪಳ್ಳಿ NIT ಕೇಂದ್ರದಲ್ಲಿ ಪದವೀಧರರು ಇಡೀ ದೇಶದಲ್ಲೆ ಗರಿಷ್ಠ ಪ್ರಮಾಣದ ಸಂಬಳಿಗೆ ನೇಮಕಗೊಳ್ಳುತ್ತಿದ್ದಾರೆ. ಕಳೆದ ವರ್ಷ 1.8 ಲಕ್ಷ ಡಾಲರ್ ಸಂಬಳಕ್ಕೆ ಇಲ್ಲಿನ ಪದವೀಧರನೊಬ್ಬ ನೇಮಕಗೊಂಡಿದ್ದ.

ಸಾರ್ವಜನಿಕ ಉದ್ದಿಮೆಗಳು, ಬಹುರಾಷ್ಟ್ರೀಯ ಕಂಪನಿಗಳು, ಮಾಹಿತಿ ತಂತ್ರಜ್ಞಾನ ಕಂಪನಿಗಳು, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳ 240 ಕಾರ್ಪೊರೆಟ್ ಕಂಪನಿಗಳು ಇಲ್ಲಿನ ಪದವೀಧರರ ಆಯ್ಕೆಗೆ ಪ್ರತಿ ವರ್ಷವೂ ತಪ್ಪದೆ ಇಲ್ಲಿಗೆ ಬರುತ್ತಿವೆ. ಇದರಿಂದ ಸಂಸ್ಥೆಯ ಪ್ರತಿಷ್ಠೆ ಮತ್ತಷ್ಟು ಹೆಚ್ಚಾಗಿದೆ ಎಂದು ಭಕ್ತವತ್ಸಲಂ ಹರ್ಷ ವ್ಯಕ್ತಪಡಿಸಿದ್ದಾರೆ.

ಇದರಿಂದ ಸಂಸ್ಥೆಯ ಹೊಣೆಗಾರಿಕೆ ಅಧಿಕವಾಗಿದೆ. ಹಾಗಾಗಿ, ತಿರುಚನಾಪಳ್ಳಿ NIT ಕೇಂದ್ರವು ಇನ್ನೂ 100 ಮಂದಿ ಪ್ರೊಫೆಸರ್ ಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಅಮದಹಾಗೆ, ಇಂದು ಶನಿವಾರ ಕೇಂದ್ರದಲ್ಲಿ ಘಟಿಕೋತ್ಸವ ನಡೆಯುತ್ತಿದೆ.

English summary
NIT Trichy computer graduate at annual pay of Rs 70 lakh. A US-based company has hired a NIT-Tiruchirappalli Computer Science and Engineering Graduate at an annual package of $1.25 lakh (about Rs 70 lakh).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X