ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಸೇನ್ ಬೋಲ್ಟ್ ಶರವೇಗದ ರಹಸ್ಯ ಕುತೂಹಲಕಾರಿ

By ಮಲೆನಾಡಿಗ
|
Google Oneindia Kannada News

ಲಂಡನ್, ಆ.10: ಜಮೈಕಾದ ಉಸೇನ್ ಬೋಲ್ಟ್ ಪುರುಷರ 100 ಮೀ ಅಂತಿಮ ಸ್ಪರ್ಧೆಯಲ್ಲಿ ಸಮೀಪದ ಸ್ಪರ್ಧಿ ಗೆಳೆಯ ಯೋಹಾನ್ ಬ್ಲಾಕ್ ರನ್ನು ಸೋಲಿಸಿ ಹೊಸ ದಾಖಲೆಯೊಂದಿಗೆ ಚಿನ್ನದ ಪದಕ ಕೊರಳಿಗೇರಿಸಿಕೊಂಡ ನಂತರ ಮತ್ತೆ ಅದೇ ಪ್ರದರ್ಶನವನ್ನು 200 ಮೀ ನಲ್ಲೂ ಪುನರಾವರ್ತನೆ ಮಾಡಿದ್ದಾರೆ. ಶುಕ್ರವಾರ ಮುಂಜಾನೆ ನಡೆದ ಸ್ಪರ್ಧೆಯಲ್ಲಿ 200 ಮೀ ದೂರವನ್ನು 19.32 ಸೆಕೆಂಡುಗಳಲ್ಲಿ ತಲುಪಿ ಡಬಲ್ ಧಮಾಕ ಮಾಡಿದ್ದಾರೆ.

ಯೋಹನ್ ಬ್ಲೇಕ್ 19.44 ಸೆಕೆಂಡ್ ಗಳಲ್ಲಿ ತಲುಪಿ ರಜತ ಪದಕ ಹಾಗೂ ಜಮೈಕಾ ಮತ್ತೊಬ್ಬ ಯುವ ಓಟಗಾರ ವಾರೆನ್ ವೇರ್ 19.84 ಸೆಕೆಂಡುಗಳೊಂದಿಗೆ ಕಂಚಿನ ಪದಕ ಗೆದ್ದರು. ಉಸೇನ್ ಬೋಲ್ಟ್ ಅವರನ್ನು 'ಲೆಜೆಂಡ್' ಎಂದು ಘೋಷಿಸಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಅಧ್ಯಕ್ಷ ಜಾಕ್ವಸ್ ರೋಗ್ ಹಿಂದೆ ಮುಂದೆ ನೋಡುತ್ತಿದ್ದಾರೆ. ಆದರೆ, ಅಭಿಮಾನಿಗಳ ಪಾಲಿಗೆ ಬೋಲ್ಟ್ ಯಾವಾಗಲೋ ಲೆಜೆಂಡ್ ಆಗಿ ಬಿಟ್ಟಿದ್ದಾರೆ.

100 ಮೀ(9.58 ಸೆ) ಹಾಗೂ 200 ಮೀ(19.19 ಸೆ) ಓಟದಲ್ಲಿ ವಿಶ್ವದಾಖಲೆ ಇನ್ನೂ ಉಸೇನ್ ಬೋಲ್ಟ್ ಹೆಸರಿನಲ್ಲೇ ಇದೆ. ವಿಶ್ವದ ಅತ್ಯಂತ ವೇಗದ ಓಟಗಾರ ಎಂದರೆ ಉಸೇನ್ ಬೋಲ್ಟ್ ಎಂದು ಎಲ್ಲರೂ ಕೊಂಡಾಡುತ್ತಿದ್ದಾರೆ.

ಉಸೇನ್ ಓಟದ ಹಿಂದಿನ ವೈಜ್ಞಾನಿಕ ವಿಶ್ಲೇಷಣೆ: ಟ್ರ್ಯಾಕ್ ಮೇಲೆ ಓಡುವಾಗ ಓಟಗಾರ ಎಷ್ಟು ವೇಗವಾಗಿ ಕಾಲುಗಳನ್ನು ಮುಂದಿಡುತ್ತಾನೆ ಎಂಬುದಕ್ಕಿಂತ ಕಾಲಿನಿಂದ ಎಷ್ಟು ಒತ್ತಡ ಹಾಕಿ ನೆಲದಿಂದ ಪುಟಿಯುತ್ತಾನೆ ಎಂಬುದು ಮುಖ್ಯವಾಗುತ್ತದೆ. ಓಟಗಾರರ ಹಿಂದಿನ ರಹಸ್ಯ ಅರಿಯಲು ಸಾಕಷ್ಟು ವರ್ಷದಿಂದ ವಿಜ್ಞಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

ಈ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿರುವ ಪೀಟರ್ ವೇಯಾಂಡ್, ಓಟಗಾರನ ದೇಹದ ತೂಕಕ್ಕೆ ಅನುಗುಣವಾಗಿ ಎರಡರಿಂದ ಮೂರೂವರೆ ಪಟ್ಟು ಅಧಿಕವಾದ ಬಲದಿಂದ ನೆಲವನ್ನು ಗುದ್ದಿ ಮುನ್ನುಗ್ಗುತ್ತಾರೆ ಎಂದಿದ್ದಾರೆ.

ಬೋಲ್ಟ್ ಕಾಲುಗಳು ನೆಲವನ್ನು ಸುಮಾರು 1000 ಪೌಂಡ್ ಗಳ ಶಕ್ತಿಯಿಂದ ಗುದ್ದಿ ಮುನ್ನುಗ್ಗುತ್ತದೆ ಎನ್ನಬಹುದು. ಇದು ಆತನ ದೇಹದ ತೂಕಕ್ಕಿಂತ ಐದು ಪಟ್ಟು ಅಧಿಕವಾಗಿದೆ. 6 ಅಡಿ 5 ಇಂಚು ಎತ್ತರ ಹಾಗೂ 207 ಪೌಂಡು ತೂಕವಿರುವ ಬೋಲ್ಟ್ ಈ ಸೂತ್ರವನ್ನು ಮೀರಬಲ್ಲ ದೈತ್ಯ ಪ್ರತಿಭೆಯಾಗಿದ್ದಾರೆ. ಸಾಮಾನ್ಯವಾಗಿ ಬೋಲ್ಟ್ ನಷ್ಟು ಗಾತ್ರ ಹೊಂದಿರುವ ಅಥ್ಲೀಟ್ ಗಳು ತಮ್ಮ ದೇಹ ತೂಕಕ್ಕಿಂತ ಅಧಿಕ ಒತ್ತಡ ಹೇರಿ ಮುನ್ನುಗಲು ಕಷ್ಟವಾಗಿರುತ್ತದೆ ಎಂದು ಪೀಟರ್ ಹೇಳಿದ್ದಾರೆ.

ವೇಗದ ಲೆಕ್ಕಾಚಾರ : 27.45 ಮೈಲಿ/ಗಂಟೆ
ಗಾಳಿಯಲ್ಲಿ ತೇಲಿದ್ದು: 9.58 ಸೆಕೆಂಡುಗಳಲ್ಲಿ 100 ಮೀ ಕ್ರಮಿಸಿ ವಿಶ್ವದಾಖಲೆ ಬರೆದ ಉಸೇನ್ ಬೋಲ್ಟ್ ಕಾಲುಗಳು 5.29 ಸೆಕೆಂಡುಗಳ ಕಾಲ ನೆಲವನ್ನು ಸ್ಪರ್ಶಿಸಿರಲಿಲ್ಲ.
ಎಷ್ಟು ಹೆಜ್ಜೆ: 100 ಮೀ ಕ್ರಮಿಸಲು ಬೋಲ್ಟ್ ಗೆ 41 ಹೆಜ್ಜೆ ಸಾಕಾಯಿತು.
ಉದ್ದುದ್ದಾವಾಗಿ ಕಾಲುಗಳು ಚಾಚಿದ್ದು 9.35 ಅಡಿ (2.85 ಮೀ) ಎಷ್ಟಿತ್ತು ಎಂದರೆ ಬೋಲ್ಟ್ ಏಕೆ ಲಾಂಗ್ ಜಂಪ್ ನಲ್ಲಿ ಸ್ಪರ್ಧಿಸಿಲ್ಲ ಎಂಬ ಅನುಮಾನವೂ ಕಾಡುತ್ತದೆ?

ಉಸೇನ್ ಬೋಲ್ಟ್ ಗೆ ಆತನ ಎತ್ತರ ಅನುಕೂಲಕರವಾಗಿದೆಯಲ್ಲದೆ, ಆತನ ತರಬೇತಿ ವಿಧಾನವೂ ಯಶಸ್ಸಿನಲ್ಲಿ ಪಾಲು ಪಡೆದಿದೆ. ಓಟಕ್ಕೂ ಮುನ್ನ ಮಾನಸಿಕ ಸ್ಥಿತಿ ಹಾಗೂ ಟ್ರ್ಯಾಕ್ ಇರುವ ವಾತಾವರಣ ಗಾಳಿ ವೇಗ ಎಲ್ಲವೂ ಇಲ್ಲಿ ಲೆಕ್ಕಕ್ಕೆ ಬರುತ್ತದೆ.

ಕ್ರೀಡಾಂಗಣ ಎಲ್ಲಿದೆ ಎಂಬುದು ಮುಖ್ಯ: ಬೋಲ್ಟ್ ಗೆ ಗಾಳಿಯ ವೇಗ ಸಾಥ್ ನೀಡಬೇಕಾದರೆ ಓಡುತ್ತಿರುವ ಕ್ರೀಡಾಂಗಣ ಸಮುದ್ರ ಮಟ್ಟದಿಂದ ಎಷ್ಟು ಎತ್ತರದಲ್ಲಿ ಎಂಬುದನ್ನು ಗಮನಿಸಬೇಕಾಗುತ್ತದೆ. ಬರ್ಲಿನ್, ಬೀಜಿಂಗ್ ಹಾಗೂ ಲಂಡನ್ ಹೋಲಿಕೆ ಮಾಡಿದರೆ, ಎತ್ತರದ ಪ್ರದೇಶದಲ್ಲಿ ಗಾಳಿಯ ನಿರೋಧಕ ಶಕ್ತಿ ಕಡಿಮೆ ಇರುತ್ತದೆ.

ವೇಗ ಓಟಕ್ಕೆ ಗಾಳಿ ಕೂಡಾ ಸಾಥ್ ನೀಡುತ್ತದೆ. ಹೀಗಾಗಿ ಉಸೇನ್ ಬೋಲ್ಟ್ ಎತ್ತರದ ಪ್ರದೇಶದಲ್ಲಿ ಓಡಿದರೆ ವಿಶ್ವ ದಾಖಲೆ ಮತ್ತೊಮ್ಮೆ ಧೂಳಿಪಟ ಮಾಡಬಹುದು ಎಂದು ಲೊಯೊಲಾ ವಿವಿಯ ಪ್ರೊಫೆಸರ್ ಗಳು ಅಭಿಪ್ರಾಯಪಟ್ಟಿದ್ದಾರೆ.

ಬೀಜಿಂಗ್ ನಲ್ಲಿ ದಾಖಲೆ ಬರೆಯಲು ಕೂಡಾ ಈ ಅಂಶ ಕಾರಣವಾಗಿದೆ. ಬೀಜಿಂಗ್ ಸಮುದ್ರ ಮಟ್ಟದಿಂದ 2303 ಮೀ (7556 ಅಡಿ) ಮೇಲ್ಮಟ್ಟದಲ್ಲಿರುವುದು ಬೋಲ್ಟ್ ಓಟಕ್ಕೆ ಅನುಕೂಲಕರವಾಗಿದೆ. ಇದೇ ರೀತಿ ಸಮುದ್ರಮಟ್ಟದಿಂದ 7000 ಅಡಿಗೂ ಮೇಲ್ಮಟ್ಟದಲ್ಲಿರುವ ಮೆಕ್ಸಿಕೋ ಸಿಟಿಯಂಥ ಕಡೆ ಬೋಲ್ಟ್ ಓಡಿದರೆ 100 ಮೀ ದೂರವನ್ನು 9.49 ಸೆಕೆಂಡುಗಳಲ್ಲಿ ಕ್ರಮಿಸುವುದು ಅಸಾಧ್ಯವೇನಲ್ಲ ಎಂದು ಪ್ರೊಫೆಸರು ಹೇಳುತ್ತಾರೆ.

ಮುಂದಿನ ಒಲಿಂಪಿಕ್ಸ್ ಬ್ರೆಜಿಲ್ ನ ರಿಯೋ ಡಿ ಜನೈರೋನಲ್ಲಿ ನಡೆಯುತ್ತಿದ್ದು ಬೋಲ್ಟ್ ಸುಮಾರು 1021 ಮೀಟರ್ (3349 ಅಡಿ) ಎತ್ತರವಿರುದ ಪ್ರದೇಶದಲ್ಲಿ ಓಡಿ ದಾಖಲೆ ಮುರಿಯಲು ಸಾಧ್ಯವೇ ಎಂಬ ಪ್ರಶ್ನೆ ಏಳುತ್ತದೆ. ಅಲ್ಲದೆ ವಿಶ್ವದಾಖಲೆ ಬರೆದ ಬರ್ಲಿನ್ ಕೂಡಾ ಅಂಥಾ ಮೇಲ್ಮಟ್ಟದ ಪ್ರದೇಶದಲ್ಲಿಲ್ಲ. ಒಟ್ಟಾರೆ ಉಸೇನ್ ಬೋಲ್ಟ್ ಓಟ ಅಧ್ಯಯನಕ್ಕೆ ಹೇಳಿ ಮಾಡಿಸಿದ ಹಾಗೆ ಕುತೂಹಲಕಾರಿಯಾಗಿದೆ.

English summary
Jamaican Usain Bolt does did again races to sprint double in London olympics 2012. Why Usain bolt is so fast what is the secret behind his success.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X