ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐ Q1 ಲಾಭದ ನಡುವೆಯೂ ಷೇರು ಕುಸಿತ

By Mahesh
|
Google Oneindia Kannada News

SBI
ಮುಂಬೈ, ಆ.10: ಮೊದಲ ತ್ರೈಮಾಸಿಕದಲ್ಲಿ ನಿರೀಕ್ಷಿತ ಲಾಭ ಗಳಿಸಿದರೂ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಇಂಡಿಯಾ ಷೇರುಗಳು ಶುಕ್ರವಾರ ಶುಭವಾರ್ತೆ ತಂದಿಲ್ಲ. ಎಸ್ ಬಿಐ Q1 ನಲ್ಲಿ ಶೇ 137 ರಷ್ಟು ಪ್ರಗತಿಯೊಂದಿಗೆ 3,751.56 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಳೆದ ವರ್ಷದ ಇದೇ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 1,583.55 ಕೋಟಿ ರು ಮಾತ್ರ ಗಳಿಸಿದ್ದ ಎಸ್ ಬಿಐ ಈ ವರ್ಷ ಒಳ್ಳೆ ಲಾಭ ಗಳಿಸಿದೆ. ಭಾರತದ ಅತಿದೊಡ್ಡ ಬ್ಯಾಂಕ್ ಒಟ್ಟು ಆದಾಯದಲ್ಲಿ ಶೇ 17 ರಷ್ಟು ಆದಾಯ ಏರಿಕೆ ಕಂಡಿದ್ದು 32,415.49 ಕೋಟಿ ರು ಹೊಂದಿದೆ.

ಬಿಎಸ್ ಇಗೆ ಕೊಟ್ಟಿರುವ ಮಾಹಿತಿಯಂತೆ ಕಳೆದ ಬಾರಿ 27,731.67 ಕೋಟಿ ರು ಆದಾಯ ಮಾತ್ರ ಹೊಂದಿತ್ತು. ಬಿಎಸ್ ಇಯಲ್ಲಿ ಶುಕ್ರವಾರ ಮಧ್ಯಾಹ್ನ ಕಂಪನಿ ಷೇರುಗಳು ಶೇ 2.63ರಷ್ಟು ಇಳಿಕೆ ಕಂಡು 1920 ರು ಪ್ರತಿ ಷೇರಿನ ದರದಂತೆ ವಹಿವಾಟು ನಡೆಸುತ್ತಿತ್ತು.

ಎಸ್ ಬಿಐ ನಿವ್ವಳ ಅನುತ್ಪಾದಕ ಆಸ್ತಿ(non performing assets) ಮೌಲ್ಯ ಶೇ 2.22 ರಷ್ಟಿದೆ. ಕಳೆದ ವರ್ಷ ಶೇ 1.11 ರಷ್ಟಿತ್ತು. ಮೊದಲ ತ್ರೈಮಾಸಿಕದಲ್ಲಿ 11,119 ಕೋಟಿ ನಿವ್ವಳ ಆದಾಯ ಬಂದಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 9699 ಕೋಟಿ ರು ಆದಾಯ ಗಳಿಸಿತ್ತು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 1,000 ಹೊಸ ಬ್ರ್ಯಾಂಚ್ ಗಳನ್ನು ಆರಂಭಿಸಲಿದ್ದು, 2013 ಮಾರ್ಚ್ ವೇಳೆಗೆ 15,000 ಬ್ರ್ಯಾಂಚ್ ತೆರೆಯುವ ನಿರೀಕ್ಷೆ ಹೊಂದಿದೆ. ಈ ವರ್ಷದಲ್ಲಿ 2,500 ಪ್ರೊಬೆಷನರಿ ಆಫೀಸರ್ ಗಳು, 12,000 ಅಧಿಕಾರಿಗಳು ಹಾಗೂ ಕ್ಲರ್ಕ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಎಸ್ ಬಿಐ ಪ್ರಕಟಿಸಿದೆ.
ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗೃಹ ಮತ್ತು ವಾಹನ ಸಾಲಗಳ ಬಡ್ಡಿದರಗಳನ್ನು ಶೇ 0.5 ರಷ್ಟು ಕಡಿತಗೊಳಿಸಿತ್ತು ಆ.7 ರಿಂದ ಜಾರಿಗೆ ಬಂದಿದೆ.

ಆದರೆ, ಬಡ್ಡಿದರ ಇಳಿಕೆ ಹೊಸ ಸಾಲಗಾರರಿಗೆ ಅನುಕೂಲಕಾರವಾಗಿದ್ದರೂ, ಈಗಾಗಲೇ ಖಾತೆ ಹೊಂದಿರುವ ಗ್ರಾಹಕರಿಗೆ ಕೊಂಚ ಗೊಂದಲ ಮೂಡಿಸಿದೆ. ಹೊಸ ದರಗಳು ಹೊಸ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತವೆ. ಈಗಾಗಲೇ ಸಾಲ ಪಡೆದುಕೊಂಡಿರುವ ಹಳೆಯ ಗ್ರಾಹಕರಿಗೆ ಇದು ಅನ್ವಯಿಸುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

ಎಸ್ ಬಿಐ ಈ ಕ್ರಮದ ನಡುವೆಯೂ ತ್ರೈಮಾಸಿಕ ಲಾಭಾಂಶದಲ್ಲಿ ಯಾವುದೆ ವ್ಯತ್ಯಯವಾಗಿಲ್ಲ. ಚಾಲ್ತಿಯಲ್ಲಿರುವ ಗ್ರಾಹಕರು ನಷ್ಟದ ನಡುವೆಯೂ ಎಸ್ ಬಿಐ ಕೈಬಿಟ್ಟಿಲ್ಲದಿರುವುದು ಎಸ್ ಬಿಐ ಲಾಭಕ್ಕೆ ಒಂದು ಕಾರಣ ಎನ್ನಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

English summary
The country's largest lender, SBI today(Aug.10) reported profit after tax in line with street estimates of Rs 3751 crores, rising sharply over Rs 1584 crores in the corresponding period of last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X