• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತ ಇವತ್ತು ಎಷ್ಟು ಪದಕ ಗೆಲ್ಲಬಹುದು?

By Mahesh
|

ಲಂಡನ್, ಆ.8: ಭಾರತದ 800 ಮೀಟರ್ ಓಟಗಾರ್ತಿ ಟಿಂಟು ಲೂಕಾ ಉತ್ತಮ ಪ್ರದರ್ಶನ ತೋರಿಸಿ ಮೂರನೇ ಸ್ಥಾನದೊಂದಿಗೆ ಸೆಮಿಫೈನಲ್ ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಸಮಿಫೈನಲ್ ಮತ್ತು ಫೈನಲ್ ಸುತ್ತು ಶುಕ್ರವಾರ ನಡೆಯಲಿದ್ದು ಪಿಟಿ ಉಷಾ ಶಿಷ್ಯೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಗುರುವಾರ(ಆ.8) ದಂದು ಭಾರತದ ಪದಕ ಪರೀಕ್ಷೆಗೆ ಮಹಿಳಾ ಸ್ಪರ್ಧಿಗಳು ಮಾತ್ರ ಇಳಿಯುತ್ತಿರುವುದು ವಿಶೇಷ.

800 ಮೀ ನಲ್ಲಿ ಟಿಂಟು ಲುಕಾ, ಕುಸ್ತಿಯಲ್ಲಿ ಗೀತಾ ಹಾಗೂ ಹೈ ಜಂಪ್ ನಲ್ಲಿ ಕರ್ನಾಟಕದ ಸಹನಾ ಕುಮಾರಿ ನಿರೀಕ್ಷೆ ಹುಟ್ಟಿಸಿದ್ದಾರೆ.

ಲೂಕಾ 2:01.75 ಸೆ. ಗಳಲ್ಲಿ ಗುರಿಮುಟ್ಟಿ ಸೆಮಿಫೈನಲ್ ಅರ್ಹತೆ ಪಡೆದುಕೊಂಡರು. ಈ ಒಲಿಂಪಿಕ್ಸ್ ನಲ್ಲಿ ಟ್ರ್ಯಾಕ್ ಅಂಡ್ ಫೀಲ್ಡ್ ನಲ್ಲಿ ಕೃಷ್ಣ ಪೂನಿಯಾ ಮತ್ತು ವಿಕಾಸ್ ಗೌಡ ಫೈನಲಿಗೇರಿ ಭರವಸೆ ಮೂಡಿಸಿದ್ದರೂ ಪದಕ ಗೆಲ್ಲಲು ವಿಫಲರಾಗಿದ್ದರು. [ಕಂಚಿನ ಪದಕಕ್ಕೆ ತೃಪ್ತಿ ಪಟ್ಟ ಮೇರಿ]

ಮಿಲ್ಖಾ ಸಿಂಗ್, ಗುರುಬಚನ್ ಸಿಂಗ್ ರಾಂಧವ, ಶ್ರೀರಾಮ್ ಸಿಂಗ್, ಪಿ.ಟಿ. ಉಷಾ ಮತ್ತು ಅಂಜು ಬಾಬಿ ಜಾರ್ಜ್ ಈ ಹಿಂದಿನ ಒಲಿಂಪಿಕ್ಸ್ ಗಳಲ್ಲಿ ಫೈನಲಿಗೇರಿದ ಸಾಧನೆ ಮಾಡಿದ್ದಾರೆ. ಟಿಂಟು ಲೂಕಾಗೆ ಪಿ.ಟಿ. ಉಷಾ ತರಬೇತಿ ನೀಡುತ್ತಿದ್ದಾರೆ.

ಭಾರತ ಓಟದ ರಾಣಿ ಪಿ.ಟಿ. ಉಷಾ ಗರಡಿಯಲ್ಲಿ ಪಳಗಿರುವ ಕಣ್ಣೂರಿನ ಸಣ್ಣ ಗ್ರಾಮ ವಾಲಾತೋಡ್ ನಿವಾಸಿ 23ರ ಹರೆಯದ ಟಿಂಟು ಲುಕಾ 2010ರ ಏಷ್ಯನ್ ಗೇಮ್ಸ್‌ನ 800 ಮೀಟರ್ ಓಟದಲ್ಲಿ ಕಂಚು ಗೆದ್ದುಕೊಂಡಿದ್ದರು.

[ಎಲ್ಲಾ ಸ್ಪರ್ಧೆಗಳು ಇಎಸ್ ಪಿಎಸ್ ಸ್ಟಾರ್ ಸ್ಫೋರ್ಟ್ ಹಾಗೂ ದೂರದರ್ಶನದಲ್ಲಿ ಮಧ್ಯಾಹ್ನ 1 ಗಂಟೆ ನಂತರ ಪ್ರಸಾರ ಆರಂಭ. ಇಲ್ಲಿ ಕೊಟ್ಟಿರುವ ಸಮಯ ಬದಲಾವಣೆಗೆ ಒಳಪಟ್ಟಿರುತ್ತದೆ.]

ಆ.9 2012, ಗುರುವಾರ : ಸ್ಪರ್ಧೆ ಪಟ್ಟಿ (ಭಾರತೀಯ ಕಾಲಮಾನ)

ಅಥ್ಲೆಟಿಕ್ಸ್ : ಮಧ್ಯಾಹ್ನ 2.00

ಮಹಿಳೆಯರ ಹೈ ಜಂಪ್ ಅರ್ಹತಾ ಸುತ್ತು: ಸಹನಾ ಕುಮಾರಿ

ರಾತ್ರಿ 12.00: ಮಹಿಳೆಯರ 800 ಮೀ (ಸೆಮಿಫೈನಲ್ ) ಟಿಂಟು ಲೂಕಾ

ಕುಸ್ತಿ: ಸಂಜೆ 5.30 ಮಹಿಳೆಯರ 55 ಕೆಜಿ ಫ್ರೀಸ್ಟೈಲ್ : ಗೀತಾ ಫೋಗಾಟ್ ಕುಮಾರಿ

ಉಳಿದ ಕುಸ್ತಿಪಟುಗಳು ದಿನಾಂಕ) ಯೋಗೇಶ್ವರ ದತ್(ಆ.11), ನರಸಿಂಗ್ ಯಾದವ್(ಆ.10), ಅಮಿತ್‌ಕುಮಾರ್ ದಾಹಿಯಾ, (ಆ.10) ಸುಶೀಲ್ ಕುಮಾರ್(ಆ.12)ಅದೃಷ್ಟದ ಪರೀಕ್ಷೆ ನಡೆಸಲಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Aug 8: Indians hope on Sahana- Geeta TIntu Action on today. India's Tintu Luka made it to the semi-finals of women's 800m at the London Olympics on Wednesday(Aug.8).The 23-year-old runner from Kerala, finished third in the Heat 2 at the Olympic Stadium
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more